spot_img
spot_img

ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ

Must Read

spot_img
- Advertisement -

ಮೋದಿ ನೇತೃತ್ವದ ಸಾಧನೆ ಬಿಚ್ಚಿಟ್ಟ ಬಿಜೆಪಿ ಅಧ್ಯಕ್ಷ

ಸಿಂದಗಿ: ಮೊದಲು ಸ್ಮಾರ್ಟ್ ಫೋನ್ ತಗೊಂಡ್ರೆ ಕವರ್ ಮೇಲೆ ಮೇಡ್ ಇನ್ ಚೈನಾ ಎಂದು ಇರುತ್ತಿತ್ತು. ಇದೀಗ ಮೇಡ್ ಇನ್ ಇಂಡಿಯಾ ಎಂದು ಕಾಣ್ತಿದೆ. ಇದು ಬದಲಾವಣೆ ಪರ್ವ ಅಲ್ಲವೇ ? ಸ್ಟೀಲ್ ನಲ್ಲಿ 14ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತದಲ್ಲಿ 2014ರಲ್ಲಿ ಕೇವಲ 350ಕಿ.ಮೀ ಅಪ್ಟಿಕಲ್ ಕೇಬಲ್ ದೇಶದಲ್ಲಿ ಪಸರಿಸಿತ್ತು ಇಂದು 2ಲಕ್ಷ ಕಿಲೋ ಮೀಟರ್  ವರೆಗೆ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದ ಎದುರು ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ,  ಅಟೊಮೋಬೈಲ್‍ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ.ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ, ದೇಶದ 12 ಕೋಟಿ ಮಹಿಳೆಯರಿಗೆ ಮನೆ ಕೊಟ್ಟಿದ್ದಾರೆ, ಕರ್ನಾಟಕದಲ್ಲಿ 27 ಲಕ್ಷ ಶೌಚಾಲಯ ಕೊಡುವ ಮೂಲಕ ಮಹಿಳಾ ಸಶಕ್ತಿಕರಣ ಮಾಡಿದ್ದಲ್ಲದೆ ಆವಾಸ್ ಯೋಜನೆಯಲ್ಲಿ ಯಾವುದೇ ಬಡವರು ಹಾಗೇ ಇರಬಾರದು ಎಂದು ಮೂರು ಕೋಟಿ ಮನೆ ನಿರ್ಮಿಸಿ ಕೊಡಲಾಗಿದೆ. ಕರ್ನಾಟಕದಲ್ಲಿ ಎಂಟು ಲಕ್ಷ ಮನೆ ಕೊಡಲಾಗಿದೆ. ಆಯುಷ್ಮಾನ ಭಾರತ್ ಯೋಜನೆಯಲ್ಲಿ ಇಂದು ಭಾರತದ ಪ್ರತಿಶತ 50 ಜನರು, ಐದು ಲಕ್ಷ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

- Advertisement -

ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆ ಜಾರಿ ಮಾಡಲಾಗಿದೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಲ್ಲಿ 8 ಲಕ್ಷ ಜನರು ಎರಡು ಸಾವಿರ ಹಣ ಪಡೆಯುತ್ತಿದ್ದಾರೆ. ಪ್ರಧಾನಮಂತ್ರಿ ಮೂರು ದಿನಗಳು ಹಿಂದೆ ಕರ್ನಾಟಕದಲ್ಲಿ ಆಗಮಿಸಿ ಹಲವಾರು ಯೋಜನೆಗಳನ್ನು ಕೊಡುಗೆ ನೀಡಿದ್ದಾರೆ. ಒಂದೇ ಭಾರತ್ ಯೋಜನೆಯಲ್ಲಿ ಭಾರತದಲ್ಲಿ 400 ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೆಂಪೇಗೌಡ ಅವರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿ ರೋಡಗಳು ನಾಲ್ಕು ಲೈನ್ ಗಳಿಂದ ಕೂಡಿವೆ. ಇನ್ನೂ ಮುಂದೆ ಅವೆಲ್ಲ ಎಂಟು ಲೈನ್ ಗಳು ಆಗಲಿವೆ. ಮುಖ್ಯಮಂತ್ರಿ ವಿದ್ಯಾನಿಧಿಯಲ್ಲಿ ರೈತ ಕುಟುಂಬದವರಿಗೆ ಅನುಕೂಲ ಕಲ್ಪಿಸಲಾಗಿದೆ. ದಲಿತರಿಗೆ, ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿದ್ದು ಬಹಳ ದೊಡ್ಡ ಕಾರ್ಯ ಎಂದು ಹೇಳಿದರು.

ಭಾರತದಲ್ಲಿ ವ್ಯಾಕ್ಷಿನೇಷನ್ ಮೂಲಕ ಮೋದಿ ಸುರಕ್ಷಾ ಚಕ್ರ ಕೊಟ್ಟಿದ್ದಾರೆ. ಹಾಗಾಗಿ ತಾವೆಲ್ಲರೂ ಮಾಸ್ಕ್ ಇಲ್ಲದೆ ಕೂತಿದಿರಿ ಭಾರತದಿಂದ 100ದೇಶಗಳಿಗೆ ವ್ಯಾಕ್ಸಿನ್ ಕೊಡಲಾಗಿದೆ. ಅದರಲ್ಲಿ 50 ದೇಶಗಳಿಗೆ ಉಚಿತವಾಗಿ ಕೊಡಲಾಗಿದೆ. ಕರ್ನಾಟಕದ 32ಸಾವಿರ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ರು. ಯಾವ ದೇಶದ ಪ್ರಧಾನಿ ಆ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ಮಾಡಿದ್ರು. ಆದ್ರೆ ಮೋದಿ ಪುತಿನ್ ಗೆ ಕರೆ ಮಾಡಿ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತರಲಾಯಿತು ಎಂದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ, ಯಂಕಾ, ನಾಣಿ, ಸೀಣಿ ಅಂತ ಅಲ್ಲೊಬ್ಬ ಇಲ್ಲೊಬ್ಬ ಬಿಟ್ಟರೆ ಮೋದಿಗೆ ಸಮನಾದ ನಾಯಕ ಕಾಂಗ್ರೆಸ್‍ನಲ್ಲಿ ಯಾವ ನಾಯಕ ಇದ್ದಾರೆ ಹೇಳಿ ನೊಡೋಣ?  ವಿದೇಶಿಯವರು ಸಹ ಮೋದಿಯನ್ನು ಹೊಗಳುತ್ತಾರೆ, ಪಾಕಿಸ್ತಾನದ ಪ್ರಧಾನ ಮಂತ್ರಿಯೇ ಭಾರತ ವನ್ನು ಹೊಗಳುತ್ತಿದ್ದಾರೆ.

- Advertisement -

ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೂ ಸಹ ಸಿಗಬೇಕಾದ ಸೌಲಭ್ಯ ಸಿಗಬೇಕು ಎಂದು ಪ್ರಧಾನಿ ಮೋದಿಜಿ ಅವರೇ ಕರೆ ಕೊಟ್ಟಿದ್ದಾರೆ. ಹಣಬಲ, ತೋಳಬಲ ದಿಂದ ಅಧಿಕಾರಕ್ಕೆ ಬರೋ ಕಾಲವಿಲ್ಲ, ಇದನ್ನು ಕಾಂಗ್ರೆಸ್ ನವರು ಮರೆಯಬೇಕು. ನಾನೇ ಮುಂದಿನ ಮುಖ್ಯಮಂತ್ರಿ ಆಗ್ತೆನೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಮೋದಿ, ನಡ್ಡ, ಅಮೀತ್ ಶಾ ನೇತ್ರತ್ವದಲ್ಲಿ 140 ಕ್ಕೂ ಹೆಚ್ಚು ಸೀಟ್ ಗೆದ್ದು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರ್ತೆವೆ, ದೇಶದಲ್ಲಿ ಸದ್ಯ ಬಿಜೆಪಿ ಗಾಳಿ ಬೀಸ್ತಿದೆ. ಪ್ರತಿಯೊಬ್ಬ ಕಾರ್ಯಕರ್ತರು ಮನೆಮನೆಗೆ ಹೋಗಿ ಬಿಜೆಪಿ ಸಾಧನೆಗಳು, ಕಾರ್ಯಗಳನ್ನು ತಿಳಿಪಡಿಸಬೇಕು. ಮಹಿಳಾ ಸಬಲೀಕರಣದ ಬಗ್ಗೆ ತಿಳಿ ಹೇಳಬೇಕಿದೆ. 

ಜಿಲ್ಲೆಯಲ್ಲಿ ಐದು ನದಿಗಳಿದ್ರೂ ಬರದ ನಾಡು ಎಂದು ಕರೆಸಿಕೊಳ್ತಿತ್ತು, ನಾನು ಸಿಎಂ ಆದ. ಮೇಲೆ ಎಲ್ಲಾಕಡೆ ನೀರಾವರಿ ಮಾಡಿ, ನೀರಾವರಿಯ ಅನುಕೂಲ ಮಾಡಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಗೆ ಬೆಂಬಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದರು. 

ಸಚಿವ ಸಿ.ಎಸ್. ಅಶ್ವತನಾರಾಯಣ, ಶಾಸಕ ರಮೇಶ ಭೂಸನೂರ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜೀಣಗಿ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಪಿ.ಎಸ್.ಪೂಜಾರಿ, ಹಣಮಂತ ನಿರಾಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ಬಸವರಾಜ ಯಂಕಂಚಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅದ್ಯಕ್ಷ ಈರಣ್ಣ ರಾವೂರ, ಮಾಜಿ ಎಂಎಲ್ಸಿ ಅರುಣ ಶಹಾಪೂರ, ಎಸ್.ಕೆ.ಬೆಳ್ಳುಬ್ಬಿ, ದಯಾಸಾಗರ ಪಾಟೀಲ, ಅಶೋಕ ಅಲ್ಲಾಪುರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಶಿವರುದ್ರ ಬಾಗಲಕೋಟ ನಿರೂಪಿಸಿದರು. ಗುರು ತಳವಾರ ವಂದಿಸಿದರು.

- Advertisement -
- Advertisement -

Latest News

ಪೌರ ಕಾರ್ಮಿಕರಿಗೆ ಭದ್ರತೆ ಸರ್ಕಾರದ ಕರ್ತವ್ಯ – ಶಾಸಕ ಮನಗೂಳಿ

ಸಿಂದಗಿ: ಪುರಸಭೆ ಆಸ್ತಿ ಪೌರ ಕಾರ್ಮಿಕರು ಎಂದರೆ ಜನರ ಸೇವಕರು ಅವರಿಗೆ ಭದ್ರತೆ ಕೊಡಬೇಕು.ಅವರ ಬದುಕಿಗೆ ಭದ್ರತೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಎಂದು ಶಾಸಕ...
- Advertisement -

More Articles Like This

- Advertisement -
close
error: Content is protected !!
Join WhatsApp Group