ಸಿಂದಗಿ; ವಾಲ್ಮೀಕಿ ನಿಗಮದ ಹಗರಣ ಹಾಗೂ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ ವಿರೋಧಿ ಬಿಜೆಪಿ ಕಾರ್ಯಕರ್ತರು ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ ಮಾಜಿ ಶಾಸಕ ರಮೇಶ ಭೂಸನೂರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಸೇರಿದಂತೆ ಅನೇಕರು ಮಾತನಾಡಿ, ಕರ್ನಾಟಕ ರಾಜ್ಯದ ವಾಲ್ಮೀಕಿ ನಿಗಮದಲ್ಲಿ ಸುಮಾರು 175 ಕೋಟಿ ರೂ.ಗಳ ಹಗರಣವಾಗಿದ್ದು, ಅದು ನಕಲಿ ಕಂಪನಿಗಳಿಗೆ ಹೋಗಿದ್ದು ದೊಡ್ಡ ಹಗರಣವಾಗಿದೆ. ಇದರಿಂದ ಮನನೊಂದು ಅಧಿಕಾರಿ ಚಂದ್ರಶೇಖರ ರವರು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಗಾರಿಕೆ ಹೊರಬೇಕಾಗುತ್ತದೆ ಹಾಗೂ ಪೆಟ್ರೋಲ್ ಬೆಲೆ 3 ಮತ್ತು ಡಿಸೇಲ್ ಬೆಲೆ 3.50 ಪೈಸೆ ಹೆಚ್ಚಿಗೆ ಮಾಡಿ ಜನರನ್ನು ಬೀದಿಗೆ ಎಳೆಯುವಂತಹ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಜ್ಯಪಾಲರ ಆಳ್ವಿಕೆ ಪ್ರಾರಂಭಿಸಬೇಕು ಹಾಗೂ ಚಂದ್ರಶೇಖರ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ.ಎನ್ ಪಾಟೀಲ, ಎಂ.ಎಸ್.ಮಠ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ರವಿ ನಾಯ್ಕೋಡಿ, ಶ್ರೀಶೈಲ ಚಳ್ಳಗಿ, ಚಂದ್ರಶೇಖರ ಅಮಲಿಹಾಳ, ಶ್ರೀಕಾಂತ ಬಿಜಾಪುರ, ಶ್ರೀಮಂತ ಬಿರಾದಾರ, ಜೀಲಮ್ಮ ಯಡ್ರಾಮಿ, ಸಿದ್ದಲಿಂಗಯ್ಯ ಹಿರೇಮಠ, ರಾಜಣ್ಣಿ ನಾರಾಯಣಕರ, ಪ್ರಶಾಂತ ಗೂಳೂರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.