ಬಿಜೆಪಿ ಟಿಕೆಟ್ ಹಂಚಿಕೆ ವಿಭಿನ್ನವಾಗಿದೆ – ತೇಜಸ್ವಿ ಸೂರ್ಯ

Must Read

ಬೀದರ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಬೇಕಾಬಿಟ್ಟಿ ಟಿಕೆಟ್ ಹಂಚಿದ್ದರಿಂದ ರಸ್ತೆ ರಸ್ತೆಗಳಲ್ಲಿ ಕಾರ್ಯಕರ್ತರು ಬಡಿದಾಡುವಂತಾಗಿದೆ ಆದರೆ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಕಾರ್ಯ ವಿಭಿನ್ನವಾಗಿದೆ ಎಂದು  ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ದೇವೆಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಸೂರ್ಯ:

ದೇವೆಗೌಡರು ಅಡುಗೆ ಮನೆಯಲ್ಲಿ ಕುಳಿತು ಎಲ್ಲರಿಗೂ ಟಿಕೆಟ್ ಕೊಡುತ್ತಾರೆ. ಅತ್ತೆ, ಸೊಸೆ, ಮಗ, ಅಳಿಯನಿಗೆ ಅಂತ ತಮ್ಮ ತಮ್ಮಲ್ಲಿಯೇ ಟಿಕೆಟ್ ಹಂಚಿಕೊಳ್ಳುತ್ತಾರೆ. ಆದರೆ ಈ ಸಲ ಅಡಿಗೆ ಮನೆಯಲ್ಲಿ ಅಡಿಗೆ ರೆಡಿ ಆಗಿದ್ದರೂ ಇನ್ನೂ ಜೆಡಿಎಸ್ ಪಕ್ಷದ ಟಿಕೆಟ್ ಫೈನಲ್ ಆಗಿಲ್ಲ . ಹಾಸನದಲ್ಲಿ ಸೊಸೆಗೆ ಕೊಡಬೇಕೋ ಅಥವಾ ಮಗನಿಗೆ ಕೊಡಬೇಕು ಎಂದು ಜಗಳ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸುಳ್ಳಿನ ಆಧಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ ತೇಜಸ್ವಿ, ಚಿತ್ರ ನಟ ಕಿಚ್ಚಾ ಸುದೀಪ್ ಅವರು ಬೊಮ್ಮಾಯಿ ಅವರಿಗೆ ಸಪೋರ್ಟ್ ಮಾಡಿದ್ರೆ ಸುದೀಪ್ ಇವತ್ತು ಕೆಟ್ಟವರಾಗುತ್ತಾರೆ ಎಂಬ ವಿಷಾದಕರ ಪ್ರಸಂಗ ಇದೆ ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group