spot_img
spot_img

ಯಾದವಾಡದಲ್ಲಿ ಜನ ಮನ ಸೆಳೆದ ಎತ್ತುಗಳ ತೆರೆಬಂಡಿ ಸ್ಪರ್ಧೆ

Must Read

- Advertisement -

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಶನಿವಾರದಂದು ಜರುಗಿದ ಜೋಡೆತ್ತಿನ ತೆರೆಬಂಡಿ ಸ್ಪರ್ಧೆಯು ಜನ ಮನ ಸೆಳೆಯಿತು.

ಸ್ಪರ್ಧೆಯಲ್ಲಿ ಅಕ್ಕಿಮರಡಿ ರೇವಣಸಿದ್ಧೇಶ್ವರ ಪ್ರಸನ್ನ ಎತ್ತುಗಳು ಪ್ರಥಮ, ಇಟ್ನಾಳದ ಕಾಶಿಲಿಂಗೇಶ್ವರ ಪ್ರಸನ್ನ ಎತ್ತುಗಳು ದ್ವಿತೀಯ, ದುರ್ಗಾದೇವಿ ಪ್ರಸನ್ನ ಎತ್ತುಗಳು ತೃತೀಯ, ಇಂಗಳಗಿಯ ಮಂಜುನಾಥ ಪ್ರಸನ್ನ ಎತ್ತುಗಳು ಚತುರ್ಥ, ಬುದ್ನಿ ಪಿ.ಎಮ್‍ದ ರೇವಣಸಿದ್ದೇಶ್ವರ ಪ್ರಸನ್ನ ಎತ್ತುಗಳು ಪಂಚಮಿ, ಶಿರೋಳದ ಸದಾಶಿವ ಪ್ರಸನ್ನ ಎತ್ತುಗಳು ಆರನೇ ಹಾಗೂ ಒಂಟಗೋಡಿಯ ಮಂಜುನಾಥ ಉದಗಟ್ಟಿ ಎತ್ತುಗಳು ಏಳನೇ ಸ್ಥಾನ ಪಡೆದುಕೊಂಡವು.

ಈ ಸಂಧರ್ಭದಲ್ಲಿ ರಮೇಶ ಸಾವಳಗಿ, ಹಣಮಂತ ಹ್ಯಾಗಾಡಿ, ಹಣಮಂತ ಚಿಕ್ಕೆಗೌಡರ,  ಸುನೀಲ ನ್ಯಾಮಗೌಡರ, ಕಲ್ಮೇಶ ಗಾಣಿಗಿ, ದುಂಡಪ್ಪ ಕಂಕನೋಡಿ, ಗುರುನಾಥ ರಾಮದುರ್ಗ, ಈರಣ್ಣ ಅರಕೇರಿ,ಶಿವು ಕಲ್ಲೋಳಿ, ಬಸು ಕೆಂಜೋಳ, ನಾಗಪ್ಪ ಅವರಾದಿ, ಹಣಮಂತ ಬಿಲಕುಂದಿ, ಅರ್ಜುನ ದೇಸಾರ, ದುಂಡಪ್ಪ ಮೂಲಿಮನಿ, ಕಲ್ಲಪ್ಪ ಕಳ್ಳಿಗುದ್ದಿ, ವಿಶ್ವನಾಥ ಮೆಣಸಿಕಾಯಿ, ರವಿ ಧುಮಾಳೆ ಮತ್ತು ಜಾತ್ರಾ ಕಮೀಟಿಯ ಸದಸ್ಯರು ಇದ್ದರು. 

- Advertisement -

ಸ್ಪರ್ಧೆಯಲ್ಲಿ ಸುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ವಿವಿಧ ಜಿಲ್ಲೆಗಳಿಂದ ಸುಮಾರು 16 ಜೋಡೆತ್ತುಗಳ ಜೊತೆಗೆ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಎತ್ತುಗಳ ತೆರೆಬಂಡಿ ಸ್ಫರ್ಧೆಯನ್ನು ಕಂಡು ಸಂಭ್ರಮಿಸಿದರು.   

ತೆರೆಬಂಡಿ ಸ್ಫರ್ಧೆಯ ಏಳು ವಿಜೇತ ಎತ್ತುಗಳಿಗೆ ದಾಲ್ಮಿಯಾ ಸಿಮೆಂಟ ಕಾರ್ಖಾನೆಯಿಂದ  ಮೂರು ಲಕ್ಷ ರೂಪಾಯಿಗಳನ್ನು ಬಹುಮಾನ ನೀಡಿದರು.

- Advertisement -
- Advertisement -

Latest News

ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ...
- Advertisement -

More Articles Like This

- Advertisement -
close
error: Content is protected !!
Join WhatsApp Group