ಬೆಂಗಳೂರು: ನಗರದ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಫ್ಲೈ ಓವರ್‌ನ ಮೇಲ್ಭಾಗದಲ್ಲಿ ಮೊಬೈಲ್ ಬಸ್‌ನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು .
ಬನಶಂಕರಿ ಮೂರನೇ ಹಂತದ ಬಳಿ ಇರುವ ಕೆ.ಟಿ.ಎಂ ದ್ವಿಚಕ್ರ ವಾಹನ ದ ಶೋರೂಮ್ ಎದುರಿನಲ್ಲಿ ನಗರದ ವಿಜಯ ನಗರದ – ಅತ್ತಿಗುಪ್ಪೆ ಮುಖ್ಯರಸ್ತೆಯಲ್ಲಿ ಇರುವ ಲಯನ್ಸ್ ಬ್ಲಡ್ ಬ್ಯಾಂಕ್ – ರಕ್ತನಿಧಿ ಕೇಂದ್ರದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 52 ಯುನಿಟ್ ರಕ್ತ ಸಂಗ್ರಹವಾಗಿದೆ.
ರಕ್ತದಾನ ಶಿಬಿರದಲ್ಲಿ 350ರಿಂದ 450 ಎಂ.ಎಲ್ ನ ಹಾಗೇ ಶಿಬಿರ ದಲ್ಲಿ ಭಾಗವಹಿಸಿದ ರಕ್ತದಾನಿ ಗಳಿಂದ ರಕ್ತ ಸಂಗ್ರಹಿಸಲಾಯಿತು , ಲಯನ್ಸ್ ಬ್ಲಡ್ ಬ್ಯಾಂಕ್ – ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ರಕ್ತದಾನ ಶಿಬಿರ ದಲ್ಲಿ ಭಾಗವಹಿಸಿದ್ದ ರಕ್ತ ದಾನಿಗಳನ್ನು ತಪಾಸಣೆ ನಡೆಸಿ ರಕ್ತ ಸಂಗ್ರಹಿಸಿದರು.
ಲಯನ್ಸ್ ಬ್ಲಡ್ ಬ್ಯಾಂಕ್ – ರಕ್ತನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ,ಡಾ.ಅನ್ನಪೂರ್ಣ ರಮೇಶ್ – ಮಾತನಾಡಿ ” ರಕ್ತದಾನ ಅತ್ಯಂತ ಶ್ರೇಷ್ಠ ದಾನ ” ರಕ್ತವನ್ನು ನೀಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು , ಹಾಗೂ ಕೊರೊನಾ ಅವಧಿಯಲ್ಲಿ ಜನರು ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ನುಡಿದರು.
ನಗರದ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಫ್ಲೈ ಓವರ್‌ನ ಮೇಲ್ಭಾಗದಲ್ಲಿ ಮೊಬೈಲ್ ಬಸ್‌ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 52 ಮಂದಿ ನೋಂದಣಿ ಮಾಡಿಕೊಂಡಿದ್ದರು.
ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ಎಲ್ಲರಿಗೂ ರಕ್ತ ನಿಧಿ ಕೇಂದ್ರದಿಂದ ಪ್ರಮಾಣಪತ್ರ ಸಲ್ಲಿಸಿ ರಕ್ತ ದಾನ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಲಯನ್ಸ್ ಬ್ಲಡ್ ಬ್ಯಾಂಕ್ – ರಕ್ತನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ,ಡಾ.ಅನ್ನಪೂರ್ಣ ರಮೇಶ್ ತಿಳಿಸಿದ್ದಾರೆ.
ಬೆಳ್ಳಿಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆ ವರೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಚಿತ್ರ & ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ .