spot_img
spot_img

ಪುಸ್ತಕಗಳು ಜ್ಞಾನದೀವಿಗೆ – ಡಾ. ಗುರುರಾಜ ಪೋಶೆಟ್ಟಿಹಳ್ಳಿ

Must Read

ವಿಶ್ವ ಪುಸ್ತಕ ದಿನ ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತಿ ಚಿಂತಕ 
 ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ದಕ್ಷಿಣ ವಲಯ ನಗರ ಕೇಂದ್ರ ಗ್ರಂಥಾಲಯ ಕುಮಾರಸ್ವಾಮಿ ಬಡಾವಣೆಯ ಗ್ರಂಥದ ಗುಡಿ ಅಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಉದ್ಘಾಟಿಸಿದರು.
  ಈ ಸಂದರ್ಭದಲ್ಲಿ ಮಾತನಾಡಿದ  ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಅಂಕಣಕಾರರೂ ಆದ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಓದಿನ ಖುಷಿ ಹೆಚ್ಚಿಸುವ ಮತ್ತು ಲೇಖಕರನ್ನು ಗೌರವಿಸುವ ಅಂಗವಾಗಿ 1995 ರಿಂದ ವಿಶ್ವಸಂಸ್ಥೆ ಖ್ಯಾತ ಸಾಹಿತಿ ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ ಸ್ಮರಣಾರ್ಥ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮಿಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಮನುಜ ಕುಲಕೆ ದೇವ ಕೊಟ್ಟ ಕೊಡುಗೆ ಮಾತುˌಮಂಥನˌ ಭಾಷೆ ಹಾಗೂ ಬರವಣಿಗೆ
ತಲೆತಲಾಂತರದಿಂದ  ಪರಂಪರಾನುಗತವಾಗೆ
ಗ್ರಂಥಗಳಲಿ ಬೆಳಗುತ್ತಾ ಬಂದಿದೆ ಜ್ಞಾನದೀವಿಗೆ.
ಪುಸ್ತಕದ ಅರಿವು ಮಸ್ತಕಕೆ ಬರಬೇಕು ಬಾಳಲ್ಲಿ ಅಳವಡಿಸಿಕೊಳ್ಳುವ ಜಾಣ್ಮೆ ಬೇಕು
ಇವು ಹಿರಿಯರ ನಡೆ ನುಡಿ ಆಲೋಚನೆಗಳ ಕನ್ನಡಿ
ಜೀವನದ ಪಟ್ಟುಗಳ ತಿಳಿಸಿಕೊಡುವ ಕುಸ್ತಿ ಗರಡಿ.
ಹೊತ್ತಿಗೆಗಳಿಗಿಂತ ಆಪ್ತಮಿತ್ರ ಬೇರೊಂದಿಲ್ಲ ಇವುಗಳಿಗಿಂತ ಹೆಚ್ಚಿನ ಆಸ್ತಿ ಮತ್ತೊಂದಿಲ್ಲ ಬೆಳೆಸಿಕೊಳ್ಳಿ ಉಳಿಸಿಕೊಳ್ಳಿ ಅದಮ್ಯ ಓದಿನ ಪ್ರೀತಿ ಆಗ ಬಾಳಲಿ ಅಂಧಕಾರವಿಲ್ಲˌಬರೀ ಸುಜ್ಞಾನ ಜ್ಯೋತಿ ಎಂದು ಅಭಿಪ್ರಾಯ ಪಟ್ಟರು
 ಕುಮಾರಸ್ವಾಮಿ ಬಡಾವಣೆಯ ಪ್ರಶಾಂತ ಪರಿಸರದಲ್ಲಿ ಬಹು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಓದುಗಸ್ನೇಹಿಯಾಗಿ ರೂಪಿಸಿರುವ ಗ್ರಂಥಾಲಯದ ಪ್ರಭಾರದಾರರಾದ ಎಸ್ ಆನಂದ್ ರವರ ಸೇವಾ ಮನೋಭಾವದ ಕಾರ್ಯ ಅನುಕರಣಿಯ ಎಂದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಳಲು ವಾದಕ ವಿದ್ವಾನ್ ವೆಂಕಟೇಶ ಸತ್ಯನಾರಾಯಣ , ವೇಣು ವಾದನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೆಲ್ಲನೆಸ್ಸ್ ಕೋಚ್ ಯೋಗೇಶ್ ಹಾಗೂ ಲೇಖಕ ವಿ ಎಸ್ ಕುಮಾರ ಉಪಸ್ಥಿತರಿದ್ದರು.
   ಎ.ವಿ ಗೋಪಾಲ್ ರವರಿಂದ ಪುಸ್ತಕವನ್ನು ಓದುವುದರಿಂದಾಗುವ  ಉಪಯೋಗ ಕುರಿತು ತಿಳಿವಳಿಕೆ ಮತ್ತು ರಸಪ್ರಶ್ನೆ ಸ್ಪರ್ಧೆ,ಖ್ಯಾತ ಲೇಖಕರ ಪುಸ್ತಕ ಕಾಣಿಕೆ ನೀಡಿ ಗೌರವಿಸಲಾಯಿತು. ವಿವರಗಳಿಗೆ 9738587614 ಸಂಪರ್ಕಿಸಲು ಕೋರಲಾಗಿದೆ.
- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group