ಕೃಷಿ ಕ್ಷೇತ್ರಕ್ಕೆ ಬಂಪರ ಕೊಡುಗೆ- ಬಜೆಟ್ ಕುರಿತು ಕಡಾಡಿ ಅವರ ಹೇಳಿಕೆ

Must Read

ಮೂಡಲಗಿ: ಕರೋನಾ ಕಾಲದಲ್ಲಿ ರಾಜ್ಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ ಕೂಡ ಸರ್ವ ಜನರಿಗೆ ಹಿತವಾಗುವಂತಹ ವಿಶೇಷವಾಗಿ ರೈತಾಪಿ ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಿದಂತಹ ಒಂದು ಸಮಚಿತ್ತದ ಸಮತೋಲ ಚೊಚ್ಚಲ ಬಜೆಟ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23ನೇ ಸಾಲಿನ ಬಜೆಟ್ ಮಂಡಿಸುವುದರ ಮೂಲಕ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಬಜೆಟ್ ಕುರಿತು ಹರ್ಷ ವಕ್ತಪಡಿಸಿದರು.

ಈ ವರ್ಷದ ಒಟ್ಟು ಬಜೆಟ್ ಗಾತ್ರ 2,65,720 ಕೋಟಿ ರೂ, ಕೃಷಿ ಕ್ಷೇತ್ರಕ್ಕೆ 33,700 ಕೋಟಿ ಅನುದಾನ ನೀಡಲಾಗಿದೆ. ರೈತ ಶಕ್ತಿ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನೆ ಸಹಾಯಧನ, ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪರಿಷ್ಕøತ ರೂಪದಲ್ಲಿ ಯಶಸ್ವಿನಿ ಯೋಜನೆ ಮರುಜಾರಿ. ರೈತರ ಆದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ “ಸೆಕೆಂಡರಿ ಕೃಷಿ ನಿರ್ದೇಶನಾಲಯ”ವನ್ನು ಸ್ಥಾಪಿಸಲಾಗಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ “ಡಾ. ಎಸ್.ವಿ. ಪಾಟೀಲ್ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ” ವನ್ನು ಸ್ಥಾಪಿಸಲಾಗುವುದು.

ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆ, ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ, ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ರೂ.927 ಕೋಟಿ ಅನುದಾನ. ಬೆಳಗಾವಿಯಲ್ಲಿ 1000 ಸಾಮರ್ಥ್ಯದ ಬಹುಮಹಡಿಯ ದೀನ್ ದಯಾಳ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ನಿರ್ಮಾಣ, ಕಳಸಾ-ಬಂಡೂರಿ ಮಹದಾಯಿ ನಾಲಾ ತಿರುವು ಯೋಜನೆಗೆ ರೂ. 1000 ಕೋಟಿ, ಭದ್ರಾ ಮೇಲಡೆ ಯೋಜನೆಗೆ 3000 ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 5000 ಕೋಟಿ, ಮೇಕೆದಾಟು ಯೋಜನೆಗೆ 1000 ಕೋಟಿ ಹೀಗೆ ಎಲ್ಲಾ ವಲಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಚೊಚ್ಚಲ ಬಜೆಟ್‍ನ್ನು ಈರಣ್ಣ ಕಡಾಡಿ ಶ್ಲಾಘಿಸಿದ್ದಾರೆ ಮತ್ತು ಸ್ವಾಗತಿಸಿದ್ದಾರೆ.

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group