ಪೊಲೀಸ್ ನೆರವು ಬೇಕಾದಾಗ ೧೧೨ ಕ್ಕೆ ಕರೆ ಮಾಡಿ – ಪ್ರಭು ಚವ್ಹಾಣ

Must Read

ಬೀದರ – ಜನರಿಗೆ ಪೊಲೀಸ್ ನೆರವು ಬೇಕಾದಾಗ ೧೧೨ ಕ್ಕೆ ಕರೆ ಮಾಡಬೇಕು. ನಾನೂ ಕೂಡ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಉಸ್ತುವಾರಿ  ಸಚಿವ ಪ್ರಭು ಚವ್ಹಾಣ ಹೇಳಿದರು.

ಔರಾದ್ ನಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ೧೧೨ ಜನಜಾಗೃತಿ ಕಾರ್ಯಕ್ರಮದ ಲ್ಲಿ ಅವರು ಮಾತನಾಡಿದರು.

ಜನರು ಹಾಗೂ ಸರ್ಕಾರ ಪೊಲೀಸರ ಮೇಲೆ ಭರವಸೆ ಇಟ್ಟಿರಬೇಕು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ನೆರವು ದೊರಕುತ್ತದೆ. ಸಮಾಜದಲ್ಲಿನ ಅಪರಾಧ ಕೃತ್ಯಗಳ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು. ಜನರ ಸಹಕಾರ ಇದ್ದರೆ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಪಿಎಸ್ಐ ಸಂಗೀತ ಹೇಳಿದರು.

ಜನರು ಪೊಲೀಸ್ ಇಲಾಖೆಯ ಜೊತೆ ಕೈಜೋಡಿಸಬೇಕು.ಜನರ ಸಹಕಾರ ಇದ್ದಾಗ ಮಾತ್ರ ಪೊಲೀಸರು ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲೆಯ ಬಗದಲ್ ಪೊಲೀಸ್ ಠಾಣೆಯ ಪಿಎಸ್ಐ ಸಂಗೀತ ಹೇಳಿದರು.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಮನಕ್ಕೆ ಮುದ ನೀಡಿದ ಕಾಮನಬಿಲ್ಲು

ಮೂಡಲಗಿ : ಕಾಮನಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ !ಬಣ್ಣಗಳೇಳನು ತೋರಣ ಮಾಡಿದೆ ಕಂದನ ಕಣ್ಣಿಗೆ ಚೆಂದವನೂಡಿದೆ !ಎಂಬ ಕುವೆಂಪುರವರ ಕವಿತೆಯನ್ನು ನೆನಪಿಸುವಂತೆ ಮೂಡಲಗಿಯಲ್ಲಿ ಮೂಡಣದ ಆಗಸದಲ್ಲಿ ಸುಂದರವಾದ...

More Articles Like This

error: Content is protected !!
Join WhatsApp Group