ಉದ್ಯೋಗ ಖಾತ್ರಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆ

Must Read

ಸಿಂದಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯಡಿ ದುಡಿಯುವ ಕೈಗಳಿಗೆ ಒಂದು ಕುಟುಂಬಕ್ಕೆ ಕನಿಷ್ಠ 100 ದಿನಗಳು ಸರಕಾರ ಉದ್ಯೋಗ ಅವಕಾಶ ಕಲ್ಪಿಸಿ ಉತ್ತಮ ವೇತನ ಕೊಡುತ್ತಿದ್ದು, ಗ್ರಾಮದ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕ ಪಂಚಾಯತಿ ಐಇಸಿ ಸಂಯೋಜಕ ಭೀಮರಾಯ ಚೌಧರಿ ಅವರು ಹೇಳಿದರು,

ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಮತ್ತು ರೋಜಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ರೋಜಗಾರ್ ದಿನಾಚರಣೆ ಉದ್ದೇಶ ತಾಲೂಕಿನ ಅನುಷ್ಠಾನಗೊಳ್ಳುತ್ತಿರುವ ನರೇಗ ಕಾಮಗಾರಿಗಳ ಬಗ್ಗೆ ಉದ್ಯೋಗ ಚೀಟಿಯ ಮಹತ್ವ, ನರೇಗಾ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ, ಕಾಯಕ ಸಂಘ, ಉದ್ಯೋಗ ಖಾತ್ರಿ ಸಹಾಯವಾಣಿ, ಕಾಯಕ ಮಿತ್ರ ಆಪ್ ಬಗ್ಗೆ ಮಾಹಿತಿ ನೀಡಿದರು.

ಮಹಿಳಾ ಕಾಯಕೋತ್ಸವ ಮಾಡುವ ಉದ್ದೇಶ ಈ ಒಂದು ನರೇಗಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಜನ ಭಾಗವಹಿಸುವಂತೆ ಪ್ರೋತ್ಸಾಹಿಸುವದು ಮತ್ತು ಅವರಿಗೆ ನರೇಗಾ ಕಾರ್ಯಕ್ರಮದ ಬಗ್ಗೆ ಅನುಕೂಲತೆಗಳನ್ನು ತಿಳಿಸಲಾಯಿತು. ನಂತರ ಮನೆ ಮನೆ ಭೇಟಿ ನೀಡಿ ಮಹಿಳೆಯರಿಗೆ ನರೇಗಾ ಕಾರ್ಯಕ್ರಮದ ಮಹತ್ವವನ್ನು ತಿಳಿಸಲಾಯಿತು.

ಗ್ರಾಮ ಪಂಚಾಯತಿ ಸಿಬ್ಬಂದಿ ನಾಗಯ್ಯ ಹಿರೇಮಠ, ಅಂಬಿಕಾ, ಆಶಾ ಕಾರ್ಯಕರ್ತರು, ಹಾಗೂ ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Latest News

ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು- ದೇಮಶೆಟ್ಟಿ

ಮೂಡಲಗಿ: ಇಂದಿನ ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಪ್ರತಿಯೊಂದನ್ನು ಪ್ರಶ್ನಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮಮದಾಪೂರ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ನಿವೃತ್ತ ಮುಖ್ಯಾದ್ಯಾಪಕ...

More Articles Like This

error: Content is protected !!
Join WhatsApp Group