ಕ್ಯಾನ್ಸರ್ ರೋಗ ಅರಿವು ಕಾರ್ಯಕ್ರಮ ಹಾಗೂ ಕ್ಯಾನ್ಸರ್ ದಿನಾಚರಣೆ

Must Read

ಸಿಂದಗಿ: ಕ್ಯಾನ್ಸರ್  ದೊಡ್ಡ ರೋಗವಲ್ಲ ಅದನ್ನು ಆರಂಭದಲ್ಲಿ  ಪತ್ತೆ ಮಾಡಿದ್ದಾದರೆ ರೋಗ ನಿಯಂತ್ರಣ ಮಾಡಬಹುದು  ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಡಾ, ಸಂಧ್ಯಾ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಬಿಎಲ್‍ಡಿಇ ಮಹಾವಿದ್ಯಾಲಯ, ಅಲ್ ಅಮೀನ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಎನ್‍ಸಿಡಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾವು  ಉಪಯೋಗಿಸುವ ದೇಶ ವಸ್ತುಗಳ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ ಜೀವಸತ್ವ ಇರುವಂಥ ಅನೇಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಂತ ಅನೇಕ ರೋಗಗಳನ್ನು ದೂರ ಮಾಡಬಹುದು ನಾವು ಸೇವಿಸುವ ಆಹಾರವು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತಿದೆ ರೋಗನಿರೋಧಕ ಶಕ್ತಿಯು ಹೆಚ್ಚಾದರೆ ಯಾವುದೇ ಕಾಯಿಲೆ ಬರುವ ಸಂಭವ ಕಡಿಮೆ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾಳು ಪದಾರ್ಥ ತರಕಾರಿ ಸೇರಿದಂತೆ ಹಣ್ಣು ಹಂಪಲಗಳನ್ನು ನಿತ್ಯ ಸೇವಿಸಬೇಕು ಆರೋಗ್ಯದ ಕಡೆ ಹೆಚ್ಚು ಗಮನವನ್ನು ನೀಡುವ ಮೂಲಕ ನಮ್ಮ ಮತ್ತು ನಮ್ಮ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಈ ಸಂದರ್ಭದಲ್ಲಿ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರು ಡಾ.  ಸೌಮ್ಯ ಮನಗೂಳಿ ಮಾತನಾಡಿ, ಕ್ಯಾನ್ಸರ್ ರೋಗ ದೊಡ್ಡ ಮಾರಣಾಂತಿಕ ರೋಗ ಅಲ್ಲ ಇದಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುಬೇಕು, ಸಿಂದಗಿ ಸರಕಾರಿ ಆಸ್ಪತ್ರೆಯ ಪರವಾಗಿ ಕ್ಯಾನ್ಸರ್ ರೋಗವನ್ನು ದೂರಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಫೆ. 5 ರಂದು ದೇವರಹಿಪ್ಪರಗಿಯಲ್ಲಿ, ಫೆ, 7 ರಂದು ಸಿಂದಗಿಯ ಸಂಗಮ ಸಂಸ್ಥೆಯಲ್ಲಿ ಫೆ. 8 ರಂದು ಯಂಕಂಚಿಯಲ್ಲಿ. ಫೆ. 9 ರಂದು ಸಿಂದಗಿಯ ಧರ್ಮಸ್ಥಳ ಸಂಸ್ಥೆಯಲ್ಲಿ ಫೆ. 10 ರಂದು ಸಿಂದಗಿಯ ಓಂ ಶಾಂತಿಯಲ್ಲಿ ಕ್ಯಾನ್ಸರಿಗೆ ಸಂಬಂಧಿಸಿದಂತ ಉಚಿತ ತಪಾಸಣೆ ಏರ್ಪಡಿಸಲಾಗಿದೆ ಸಾರ್ವಜನಿಕರು ಈ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಆರ್.ಎಸ್ ಇಂಗಳೆ, ಡಾ. ಪಿ.ಬಿ.ಹಂಪನಗೌಡರು, ಡಾ. ಎಂ.ಆರ್.ಬಡಿಗೇರ, ಡಾ. ಆರತಿ ಚಿಕ್ಕೋಡಿ, ವಿಧ್ಯಾ ಹಿರೇಮಠ, ಪ್ರಕಾಶ ನಾಯಕ, ರಾಯಣ್ಣ, ರಾಜಶೇಖರ ನರಗೋದಿ, ಶ್ರೀಲತಾ ವಿಜಯಪುರ, ಮಡಿವಾಳಮ್ಮ ಗದಗಿಮಠ, ನಾಗರಾಜ ಬಿರಾದಾರ ಸೇರಿದಂತೆ ಅನೇಕರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group