ಕವನ

ಮಕ್ಕಳ ಕವಿತೆ : ಗಣಪನ ಹಾಡು

ಗಣಪನ ಹಾಡು ಚಿಕ್ಕ ಕಣ್ಣು ದೊಡ್ಡ ಕಿವಿಯ ಏಕದಂತನೆ ಡೊಳ್ಳು ಹೊಟ್ಟೆ ಆನೆ ಮುಖದ ಅಭಯ ಹಸ್ತನೆವಿದ್ಯೆ ಬುಧ್ಧಿ ನೀಡಿ ಪೊರೆವ ವಿಶ್ವವಂದ್ಯನೆ ವಿಘ್ನಹರನೆ ಶಾಂತಿದೂತನೆ ನಮಿಪೆ ಗಣಪನೆ ಭಾದ್ರಪದ ಚೌತಿದಿನ ಮನೆಗೆ ನಿನ್ನ ತರುವರು ಸಿಂಗರಿಸಿದ ಮಂಟಪದಲಿ ಇಟ್ಟು ಸಂತಸ ಪಡುವರು ಕೆಲವು ದಿನ ಭಕ್ತಿಯಿಂದ ನಿನ್ನ ಪೂಜೆಗೖವರು ವಿಘ್ನಗಳನು ದೂರ ಮಾಡು ಎಂದು ಬೇಡಿಕೊಂಬರು ಸಿಹಿ ತಿನಿಸಿ ಪಟಾಕಿ ಸಿಡಿಸಿ ಹರುಷದಿಂದ ನಲಿವರು ಕೊನೆಗೆ ನಿನ್ನನು ಬಾವಿಗೆಸೆದು ಕೇಕೆ ಹಾಕಿ ಕುಣಿವರು ಆರ್. ಎಸ್. ಚಾಪಗಾವಿ ವಾಣಿ... 8317404648...

ಕವನ : ಸ್ತಬ್ಧವಾದ ಮಳೆಯ ಅಬ್ಬರ

ಸ್ತಬ್ಧವಾದ ಮಳೆಯ ಅಬ್ಬರಸ್ತಬ್ಧವಾಯಿತು ಮಳೆರಾಯನ ಅಬ್ಬರ ಮರೆಯಾಯಿತು ಮೋಡಗಳ ರಾಶಿ ಮತ್ತೆ ಮೂಡಣದಿ ಕಂಡ ನೇಸರ ಹೊಂಬಣ್ಣದ ಕಿರಣಂಗಳ ಸೂಸಿಗೂಡು ಸೇರಿದ್ದ ವಿವಿಧ ಪಕ್ಷಿ ಕಾಶಿ ಹೊರಬಂದು ಹಾರಿತು ಪಕ್ಕ ಬೀಸಿ ಹೂ ಬಿಸಿಲಿಗೆ ಮೈ ಕೆದರಿ ಹೊರಡಿಸಿತು ಕಿಲಿಬಿಲಿ ಕೇಳಿಕಾರ್ಮೋಡದ ಕರಿ ಕತ್ತಲೆಯಲಿ ಕಳೆದು ಹೋಗಿದ್ದ ತಾರಾವಳಿ ಮತ್ತೆ ಮಿನುಗುತಿದೆ ನೋಡಿ ಹೊಸ ಉತ್ಸಾಹ ತಾಳಿಭೂ ತಾಯಿ ಹಸಿರು ಉಡುಗೆಯನುಟ್ಟು ಶೋಭಿಸುತಿಹಳು ಹರುಷ ಪಟ್ಟು ತೂಗಿ ತೊನೆಯಿತು ಹೊಲದಲ್ಲಿ ಬೆಳೆ ರೈತನ ಮೊಗದಲಿ ಮೂಡಿತು ಹೊಸ ಕಳೆಮಳೆಯೊಂದು ಸಲ ಬಿಸಿಲೊಂದು ಸಲ ಇದು ನಿತ್ಯ...

ಕವನ : ಚೆಂದುಳ್ಳಿ ಮಿಂಚುಳ್ಳಿ

ಚೆಂದುಳ್ಳಿ ಮಿಂಚುಳ್ಳಿ  ಬೆಳ್ಳಿಯ ಬಣ್ಣದವಳು ಮೊಗ್ಗಿನ ಜಡೆಯವಳು ಅಲ್ಲೂ ಇಲ್ಲೂ ಎಲ್ಲೂ ಎಲ್ಲೆಲ್ಲೂ ಕಾಣುತಿರುವೆ ಒಳಗೂ ಹೊರಗೂ ಒಳಗೊಳಗೂ ಕಾಡುತಿರುವೆ ಮನದರಸಿಯೆ ಪಟ್ಟದರಸಿಯೆ ಕಾಣುತಿರುವೆ ಕಾಡುತಿರುವೆಬಾಗಿ ಬಳುಕಿ ತುಂಬಿ ತುಳುಕಿ ಜಗದಗಲಕೆ ಪ್ರೀತಿ ಹಬ್ಬಿಸಿ ಮಿರಿ ಮಿರಿ ಮಿನುಗುವ ನಗುವ ಚೆಲ್ಲಿ ಕ್ಷಣ ಕ್ಷಣ ಅನುಕ್ಷಣ ಹಾಕಿ ಅನುರಾಗದ ರಂಗವಲ್ಲಿ ರೆಕ್ಕೆ ಬಿಚ್ಚಿ ಹಾರಿತು ಉಲ್ಲಾಸದಿ ಉಕ್ಕಿತು ಹರೆಯ ಅಲ್ಲಿಬಾಗಿಲ ಬಳಿ ಬಂದು ನಿಂದು ಮಂದಾರ‌ ಗಂಧ ತಂದು ಕತ್ತಲನು ದೂರ ಸರಿಸಿ ಎದೆಯೊಳಗೆ ಹೃದಯದೊಳಗೆ ಚೆಲ್ಲಿದೆ...

ಕವನ : ಬದುಕಬೇಕು

ಬದುಕಬೇಕು ಏನೂಂತ ತಿಳಿಯಲಿ ಕೈಕಾಲು ಚಳಿಗೆ ಸೋತುಬಂದವು ಸ್ವಲ್ಪ ಮಟ್ಟಿಗೆ ಮಲಗಿ ನಿದ್ರೆಗೆ ಜಾರಿತು ಮನಎಚ್ಚರವಾದಾಗ ಕೈ ಕಾಲು ಸ್ವಾಧೀನ ಕಳೆದುಕೊಂಡಿವೆ ತನ್ನರಿವು ಗೊತ್ತಾಗದಂತೆ ವಕ್ಕರಿಸಿತ್ತು ಪಾರ್ಶ್ವವಾಯುಮನದಲ್ಲಿ ಆತಂಕ ಏನೋ ನೋವು ಕಾಣೆಯಾದ ದಾರಿ ಯಾರಾದರೂ ಸಲಹೆ ನೀಡುತ್ತಾರೆ ಎನ್ನಲು ವೈದ್ಯಕೀಯ ಚಿಕಿತ್ಸೆ ಸಲಹೆಅಯ್ಯೋ ನಿನಗೆ ಹೀಗಾಯಿತಲ್ಲ ಎನ್ನುವ ಮನಸುಗಳಿಗೆ ಕೊರತೆಯಿರಲಿಲ್ಲ ಆದರೂ ನಡೆಯುವ ಕುಳಿತುಕೊಳ್ಳುವ ಭಾಗಗಳಲ್ಲಿ ಸ್ವಾಧೀನತೆ ಇಲ್ಲರೋಗ ಒಂದು ಕಗ್ಗಂಟು ಮನೋಸ್ಥೈರ್ಯ ಒಂದೇ ಆಶಾಕಿರಣ ಎಲ್ಲರೂ ಸಾಂತ್ವನ ಹೇಳುವರು ದೈರ್ಯ ಕಳೆದುಕೊಳ್ಳ ಬೇಡ ಎಂದುಚಿಕಿತ್ಸೆ...

ಕವನ : ಸ್ವಚ್ಛ ಭಾರತ ಸ್ವಾಸ್ಥ್ಯ ಭಾರತ

ವಿಶ್ವ ಸೊಳ್ಳೆಯ ದಿನದ ನಿಮಿತ್ತ ನನ್ನ ಈ ಒಂದು ಕವನ...ಸ್ವಚ್ಛ ಭಾರತ, ಸ್ವಾಸ್ಥ್ಯ ಭಾರತಸೊಳ್ಳೆಯು ನೀ ಕೊಳ್ಳೆ ಹೊಡೆಯುವೆ ಮನುಜ ರಕ್ತವ ಹೀರುತ ಮಳ್ಳ ಮಾಡಿ ಹರಡಿ ಸಾಗುವೆ ರೋಗದ ಸೋಂಕನು ಬೀರುತನಿಂತ ನೀರಲಿ ಬೆಳೆಸಿ ಸಂತತಿ ನಮಗೆ ಸಂಕಟ ಕೊಡುವೆಯೋ ಕುಂತರು ನಿಂತರು ಕಚ್ಚಿ ಕಚ್ಚಿ ನೀನು ಸಂತಸ ಪಡುವೆಯೋಜ್ವರ ಮಲೇರಿಯಾ ಮತ್ತೆ ಪೈಲೇರಿಯಾ ಡೆಂಗ್ಯೂ ಚಿಕನ್ ಗುನ್ಯವಾ ಥರ ಥರಹದ ಜ್ವರದ ಬಾಧೆಯ ಸಹಿಸಬೇಕು...

ಕವನ : ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನಬಸವ ಸಂಸ್ಕೃತಿ ಅಭಿಯಾನ ಎಂದರೆ ಬರಿ ಕಾವಿಗಳ ದಂಡ ಯಾತ್ರೆಯಲ್ಲ ಶಾಸಕ ಮಂತ್ರಿಗಳ ಮೆರವಣಿಗೆಯಲ್ಲ ಮಲಗಿದ್ದ ನಿದ್ರಾಸುರರಿಗೆ ಉದ್ದೀಪನ ಔಷಧಿ ನೀಡಿ ಸತ್ಯ ಮರೆ ಮಾಚುವುದಲ್ಲ ಮಠಗಳಲ್ಲಿ ನೂರು ಕರ್ಮಕಾಂಡ ಹೊರಗೆ ಪ್ರಗತಿ ತೋರುವದಲ್ಲ ಬುದ್ಧ ಬಸವ ಹೆಸರಿನಲ್ಲಿ ರಾಷ್ಟ್ರ ಕೊಳ್ಳೆ ಹೊಡೆಯುವುದಲ್ಲ ಗುರು ಲಿಂಗ ಜಂಗಮ ಮರೆತು ಅಗ್ರಹಾರದ ಸಂಸ್ಕೃತಿಗೆ ಆಹಾರವಾಗುವುದಲ್ಲ ಜಾತಿ ಲಿಂಗ ತಾರತಮ್ಯ ಮಾಡುವವರಿಗೆ ಛತ್ರಿ ಚಾಮರ ಹಿಡಿಯುವದಲ್ಲ ವಚನ ಸುಟ್ಟವರ ಜೊತೆಗೆ ಕೈ ಜೋಡಿಸಿ ಮತವ ಬೇಡುವುದಲ್ಲ ಕೊರಳ ಲಿಂಗ ಸಾಕ್ಷಿಯಾಗಿ ಸತ್ಯ ಸಮತೆ...

ಕವನ : ವಸುಮತಿ ಕಂದ ಹೇ ಮುಕುಂದ

ವಸುಮತಿ ಕಂದ ಹೇ ಮುಕುಂದ ನಂದನಕಂದ ಕೃಷ್ಣ ಮುಕುಂದ ಬಂದನು ಹುಟ್ಟಿ ಧರೆಯೊಳಗೆ ಅಂದಿನ ಇರುಳೇ ಕಂದನ ಅಡಗಿಸಿ ತಂದನು ತಂದೆಯು ಗೋಕುಲಕೆ ಅಷ್ಟಮಿ ದಿನವೇ ಜನಿಸಿದ ಶಿಶುವ ಬುಟ್ಟಿಯೊಳಿರಿಸಿ ಹೊರ ನಡೆದ ದುಷ್ಟ ಕಂಸನು ಕೊಂದೇ ಬಿಡುವನು ಅಷ್ಟಮ ಮಗುವಿದು ತಿಳಿದರೆ ಎಂದ ಅಂಧಕಾರದಲಿ ಭರದಿ ಸುರಿವ ಮಳೆ ಮಗುವದು ನೆನೆಯುವುದೆನ್ನುತಲಿ ಮುಂದಕೆ ಬಂದು ಹೆಡೆಯನು ಬಿಚ್ಚಿ ಕೊಡೆಯಾದನಮ್ಮ ಆದಿಶೇಷ!! ಪುಟ್ಟ ಪುಟ್ಟ ಪಾದವ ಬಡಿಯುತಲಿ ಆಟಕೆ ಬಿದ್ದನಪ್ಪ ಮುದ್ದು ಕಂದ ‌ಹೊಟ್ಟೆತನಕ...

ಕವನ : ಕೃಷ್ಣ

ಕೃಷ್ಣ ಕೃಷ್ಣನ ಕೊಳಲಿನ ಕರೆ ಕೇಳಲು ಸುಖದ ಹೊನಲಿನ ಸುಧೆ ಕೃಷ್ಣನ ಕೊಳಲಿನ ಕರೆ ಸವಿಯಲು ಅಮೃತಾನಂದದ ಉನ್ಮಾದದ ಸೆಲೆ ಕೃಷ್ಣನ ಕೊಳಲಿನ ಕರೆ ಕೇಳಲು ದುಃಖವ ಮರೆ ಕೃಷ್ಣನ ಕೊಳಲಿನ ಕರೆ ಕೇಳಲು ಕಷ್ಟಗಳ ತೊರೆ ಕೃಷ್ಣನ ಕೊಳಲಿನ ಕರೆ ಬೃಂದಾವನಕೆ ಆಮಂತ್ರಣದ ಕರೆ ಕೃಷ್ಣನ ಕೊಳಲಿನ ಕರೆಗೆ ಓಗೊಟ್ಟು ನಿನ್ನಲ್ಲಿಯೇ ಮೊರೆಡಾ ಜಯಾನಂದ ಧನವಂತ, ಬೆಳಗಾವಿ

ಕವನ : ಹೃದಯದಿ ಮೊಳಗಲಿ ವಂದೇ ಮಾತರಂ

ಹೃದಯದಿ ಮೊಳಗಲಿ ವಂದೇ ಮಾತರಂಮತ್ತೆ ಬಂದಿದೆ ಸಂಭ್ರಮದ ಸ್ವಾತಂತ್ರ್ಯ ದಿನವು ಹಾರಲಿ ಕೆಂಪು ಕೋಟೆಯ ಮೇಲೆ ತಿರಂಗವು ಅರ್ಪಿಸೋಣ ಭಾರತ ಮಾತೆಗೆ ಸ್ವಾತಂತ್ರ್ಯದ ಹೋರಾಟವು ಹೇಳಲಿ ವಂದೇ ಮಾತರಂ ಪ್ರತಿ ಹೃದಯವುಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗಳಿಗೆ ಸಿಗಲಿ ಸ್ವಾತಂತ್ರ್ಯ ವರದಕ್ಷಿಣೆ ಕೊಡುವ ಹೆತ್ತವರಿಗೆ ಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ ಒಳಗಾಗುವ ಅಮಾಯಕರಿಗೆ ಸಿಗಲಿ ಸ್ವಾತಂತ್ರ್ಯ...

ಕವನ : ಸ್ವಾತಂತ್ರ್ಯದ ಕಲಿಗಳು 

ಸ್ವಾತಂತ್ರ್ಯದ ಕಲಿಗಳು ಸ್ವಾರ್ಥತೆಯ ಮರೆತು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿ ಜೀವದ ಹಂಗು ತೊರೆದು ಹೋರಾಡಿ ಸ್ವಾತಂತ್ರ್ಯ ಗಳಿಸಿ ಕೊಟ್ಟವರು ಅವರೇ ನಮ್ಮ ಭಾರತದ ಕಲಿಗಳುಸ್ವಚ್ಚಂದದ ಸ್ವಂತಿಕೆಯ ತೊರೆದು ಲಫಂಗರ ಲಾಠಿ ಏಟು ತಿಂದು ಲೋಕಕ್ಕೆಲ್ಲ ವೀರಾಧಿ ವೀರರಾಗಿ ಸ್ವಾತಂತ್ರ್ಯ ಗಳಿಸಿ ಕೊಟ್ಟವರು ಅವರೇ ನಮ್ಮ ಭಾರತದ ಕಲಿಗಳುಬೂಟಾಟಿಕೆಯ ಮಾತು ಬಿಟ್ಟು ಬ್ರಿಟಿಷರ ಬೂಟಿನಡಿ ನಲುಗಿ ಒದೆ ತಿಂದು ಬಾಗುತ ಬೀಗುತ ಭವ್ಯ ಭಾರತ ಕಟ್ಟಿದವರು ಅವರೇ ನಮ್ಮ ಭಾರತದ ಕಲಿಗಳುಹತ್ಯಾಕಾಂಡಕೆ ಹೆದರದೆ ಬೆದರದೆ ಸ್ವಾಭಿಮಾನದಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group