ಕವನ
ಚನ್ನಮ್ಮ ಸರ್ಕಲ್
ನಮ್ಮ ಬೆಳಗಾವಿಯ
ಹೃದಯ....!!
ಗಿಜುಗುಡುವ ಕಾರಸ್ಥಾನ
ಇತಿಹಾಸ ರಾಜಕೀಯ
ಹೋರಾಟ ಹರತಾಳಗಳ
ಲಬಡಬ್ ಬಡಿತ
ನಮ್ಮೆಲ್ಲರ ಮಿಡಿತ....!
ಹೊಸಬರಿಗೊಂದು
ಸಾಂಕೇತಿಕ ಕುರುಹು
ನಾಲ್ಕು ದಿಕ್ಕುಗಳಿಗೂ
ವಿಸ್ತಾರವಾಗಿ ಚಾಚಿಕೊಂಡರು
ತನ್ನ ಸುಳಿಯೊಳಗೆ ಸುತ್ತಿಕೊಳ್ಳುವ ವರ್ತಳ....!!
ಖಡ್ಗ ಹಿಡಿದು
ಕುದುರೆಯೇರಿ
ಯುದ್ದಕ್ಕೆ ಹೊರಟ
ಚೆನ್ನಮ್ಮ ಸದ್ದುಗದ್ದಲಿನೊಳಗೆ
ಮರತೆಬಿಟ್ಟಿದ್ದಾಳೆ....!!
ಸಿಗ್ನಲ್ ನ ಕೆಂಪು ಹಸಿರು
ದೀಪಗಳ ನಡುವೆ...!
ಆಟೋ, ಬಸ್ಸು ಕಾರು,ಮೊಟರ್ ಸೈಕಲ್ ಉಗುಳುವ ಹೊಗೆಯ
ಮಾಲಿನ್ಯ ನಡುವೆ....!
ರಾಜ್ಯೋತ್ಸವ, ಗಣೇಶೋತ್ಸವದ
ಡಾಲ್ಬಿ ಗಳ ಸಂಗೀತದ
ಅಬ್ಬರಕೆ ಕುಣಿವ
ಪಡ್ಡೆ ಹುಡುಗರ ಅಭಿಮಾನದ ನಡುವೆ....!
ಆಗೊಮ್ಮೆ ಈಗೊಮ್ಮೆ ಹಾಕುವ
ಮಾಲೆಯ ಸುಗಂಧದ ನಡುವೆ...!
ಝಗಮಗಿಸುವ ದೀಪಾಲಂಕಾರದ
ಹೊನಲು...
ಕವನ
ಭವಿಷ್ಯದ ಆಶಾಕಿರಣಗಳಾಗಿ...
ವಿಶ್ವದ ಭವಿಷ್ಯ ರೂಪಿಸುವ
ಆಶಾಕಿರಣಗಳು ನೀವು ,
ಸಾಹಿತ್ಯ, ಸಂಗೀತ,ಕ್ರೀಡೆ,
ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕೆ ಗಟ್ಟಿಬೇರುಗಳು ನೀವು ,
ಸಮಾಜದ ಅಭ್ಯುದಯಕೆ ಪಥಿಕರು ನೀವು ,
ಏಕೆ ಈ ತಲ್ಲಣ,ಆತಂಕ..ಓ ಯುವ ಬಾಂಧವರೆ..,??
'ಆನೆ ನಡೆದದ್ದೇ ಹಾದಿ ' ಎಂಬಂತೆ,
ನಿಮ್ಮ ನಡೆಯೇ ನಿಮ್ಮ ಪ್ರಗತಿಗೆ ದಾರಿದೀಪ...
ಏಕೆ ನಿರಾಸೆ,ನಿಟ್ಟುಸಿರು...
ಜಗವು ನಿಮ್ಮ ಮೇಲೆ ವಿಶ್ವಾಸವಿಟ್ಟಿದೆ...
'ಏಳಿ ಎದ್ದೇಳಿ,ಗುರಿಮುಟ್ಟುವವರೆಗೂ ನಿಲ್ಲದಿರಿ '
ಸ್ವಾಮಿ ವಿವೇಕಾನಂದರ ವಾಣಿ
ನಿಮ್ಮನು ಜಾಗೃತಿಗೊಳಿಸಲಿ...
ಕ್ರೀಡೆ,ಸಂಗೀತ,ಸಾಹಿತ್ಯ, ವಿಜ್ಞಾನಗಳತ್ತ
ನೀವು...
ಕವನ
ಒಂಟಿ ಜೀವ..
ಒಂಟಿ ಜೀವ ನಾನೆಂಬ ,
ಆತಂಕ ಬೇಡ ,
ಜಗದ ಉತ್ತಮ ನಿಲುವುಗಳು
ರೂಪುಗೊಂಡಿದ್ದು ,
ಒಂಟಿ ಆಲೋಚನೆಯ ಜಗದಲ್ಲಿ...
ಹಿಟ್ಲರ್ ನ ಅಧಿಕಾರ ದಾಹಕೆ ,
ಜಗತ್ತೇ ತಲ್ಲಣಿಸಿತು ,
ಘಜನಿ ಮಹಮ್ಮದ್ ನ
ಅಧಿಕಾರ ದಾಹದ ಆಲೋಚನೆಗೆ ,
ಭಾರತದ ಮೇಲೆ
ಹದಿಮೂರು ಬಾರಿ ಧಾಳಿಯಾಯ್ತು.
ಬಸವಣ್ಣನ ಸಮಾನತೆ,ಕಾಯಕ ತತ್ವಕೆ
ಕಲ್ಯಾಣದಲಿ ಮಹೋನ್ನತ ಕ್ರಾಂತಿಯಾಯ್ತು...
ಬುದ್ದ-ಮಹಾವೀರರ ಚಿಂತನೆಗೆ
ಸತ್ಯ-ಅಹಿಂಸೆ ಸಾರುವ
ಹೊಸ ಧರ್ಮ ಗಳ ಜನನವಾಯ್ತು,
ಗಾಂಧೀಜಿಯವರ ಸತ್ಯ,ತ್ಯಾಗ, ಅಹಿಂಸೆಯ ಹೋರಾಟಕೆ
ಭಾರತದಲಿ ಬ್ರಿಟೀಷರ...
ಕವನ
ನೆನಪಿಸಿಕೊಳ್ಳಿ
ವೇದಿಕೆಗಳ ಮೇಲೆ ವಿಶೇಷ ಅತಿಥಿಯಾಗಿ ಜ್ಯೋತಿ ಹಚ್ಚುವ ಮುಂಚೆ ನಿಮ್ಮಿಂದ ಅದೆಷ್ಟೋ ಮನೆಯ ದೀಪ ಆರಿರಬಹುದು ನೆನಪಿಸಿಕೊಳ್ಳಿ....
ಸ್ತ್ರೀ ಸಂರಕ್ಷಣೆಯ ಹೊಣೆ ಹೊತ್ತು ಭಾಷಣ ಮಾಡುವ ಮುಂಚೆ ನಿಮ್ಮಿಂದ ಅದೆಷ್ಟೋ ಹೆಣ್ಣುಮಕ್ಕಳು ನೆಲದಲ್ಲಿ ಹೂತು ಹೋಗಿರಬಹುದು ನೆನಪಿಸಿಕೊಳ್ಳಿ...
ಅಹಿಂಸೆ, ಆಚಾರ ಸಂಸ್ಕಾರಗಳ ಪ್ರವರ್ತಕರಾಗುವ ಮುಂಚೆ ನಿಮ್ಮಿಂದ ಅದೆಷ್ಟೋ ಜೀವಗಳು ಹಿಂಸೆಗೊಳಗಾಗಿರಬಹುದು ನೆನಪಿಸಿಕೊಳ್ಳಿ....
ಸಭಿಕರ ಮನ ಮೆಚ್ಚಿಸಲು ನೀತಿ ಬೋಧಿಸುವ...
ಕವನ
ಮಸಣ ಮೌನ
ಮಸಣ ಮೌನ ಈ ಜಗವು
ಮಾಹಾಮಾರಿಯಿಂದ
ಮಸಣವಪ್ಪಿದರು ಆ ಮನೆಯ ಮುಂದಲೆಯಲ್ಲಿ ಯಾರು ಇಲ್ಲ
ಕಾರಣವೆನೆಂದಾಲಿಸಿದರೆ
ಮಾಹಾಮಾರಿ ಅಬ್ಬಿಹುದು ಆದರೆ ಮನೆಯ ಮನ ಮನದೊಳಗೆ
ದಹನವಾಗಿಹುದು ಆ ದೇಹ
ಹೇಳ ಕೇಳುವವರಾರು ಇಲ್ಲ
ಅತ್ತು ಕರೆದಾಡಲು ಯಾವ ಸಂಬಂಧಗಳು ಜೊತೆಗೂಡಲಿಲ್ಲ
ಈ ಜಗವು ಮಸಣ ಮೌನ ಪರದೇಶಿಗಳು ಮಾಡಿದ ಪಾಪ ಕ್ರೌರ್ಯಕ್ಕೆ
ದಿನಕ್ಕೆ ಅಷ್ಟೋ ಇಷ್ಟೋ ಎಷ್ಟೆಷ್ಟೋ ಮರಣಗಳು ಈ ಜಗದೊಳಗೆ ಮಾಹಾಮಾರಿಯ ಕ್ರೌರ್ಯ ನರ್ತನಕ್ಕೆ
ಮುಖವಾಡ...
ಕವನ
ಕೊರೊನ ಕತ್ತಲುರಾತ್ರಿ-ಹಗಲು, ಬೆಳಕು-ಕತ್ತಲು,
ಇರುವದು ಸಮ ಸಮವಲ್ಲವೇ ?
ಬರೀ ಹಗಲೇ, ಬರೀ ಕತ್ತಲೇ
ಎನ್ನುವದು ಸುಮ್ಮ ಸುಮ್ಮನಲ್ಲವೇ ?
ದುಃಖ-ದುಮ್ಮಾನ, ಸಂತಸ-ಸಡಗರ ಸ್ಥಿರವಲ್ಲ
ಬಿಟ್ಟು-ಬಿಡು ಗೊಡ್ಡು ಗೋಳುಗಳನ್ನೆಲ್ಲ
ನೀ ಒಂಟಿಯಲ್ಲ ಆತ್ಮ ವಿಶ್ವಾಸ ಜೊತೆಗಿರಲು
ಯುಕ್ತ ಸಮಯವದು ಶುದ್ಧೀಕರಣವಾಗಲು
ಸಿದ್ಧವಾಗು ತಡೆಯಲು ಬಂದೆರಗುವ ವೇದನೆಗಳೆಲ್ಲ
ದೃಢ ಮನಸ್ಸಿನಿಂದ ಮೆಟ್ಟು ಅವನ್ನೆಲ್ಲ.ಅಮರ್ಜಾ
ಅಮರೇಗೌಡ ಪಾಟೀಲ
ನಿವೃತ್ತ ಬ್ಶಾಂಕ್ ವ್ಶವಸ್ಥಾಪಕರು,
ಕುಷ್ಟಗಿ
ಕವನ
“ಕರುನಾಡಿನ ಕೆರಳಿದ ಹೆಂಗಸರ ಆಗ್ರಹದ ಮೇರೆಗೆ ಈ ಕವಿತೆ.. ತಪ್ಪದೇ ಓದಿ..”
ಇಂದು ಬೆಳಿಗ್ಗೆ ಲಾಕ್ ಡೌನ್ ಸಮಯದಲ್ಲಿ ಗಂಡಸರ ಪರಿಪಾಟಲುಗಳ ಕುರಿತಾದ "ಗಂಡಸರ ಗೋಳು" ಕವಿತೆ ಬರೆದು ಪೋಸ್ಟ್ ಮಾಡಿದ್ದೆ. ಅದನ್ನು ಓದಿ ಕುಪಿತರಾದ ಅಸಂಖ್ಯಾತ ಹೆಂಗಳೆಯರು ಮೆಸೇಜು ಮಾಡಿ, ಕರೆ ಮಾಡಿ ಮತ್ತು ಕೆಲವು ಗ್ರೂಪುಗಳಲ್ಲಿ ಬಹಿರಂಗವಾಗಿಯೂ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಾ.. "ಸಾರ್.. ಗಂಡಸರದೇನು ಮಹಾಕಷ್ಟ.? ಈ ಲಾಕ್ ಡೌನ್ ಎಂಬುದು ಮನೆಯ...
ಕವನ
ಇದು ಇಂದು ಅನಿವಾರ್ಯವಾಗಿ ಗೃಹಬಂಧಿಗಳಾದ ಗಂಡಸರ ಗೋಳಿನ ಕವಿತೆ. ಅಜ್ಞಾತವಾಸದ ಅಳಲಿನ ಕಥೆ. Just for fun. ಕೇವಲ ನಗಿಸಲಿಕ್ಕಾಗಿ ಅಷ್ಟೆ. ಇಲ್ಲಿ ವಿನೋದವಿದೆ. ವ್ಯಂಗ್ಯ, ವಿಡಂಬನೆಗಳೊಟ್ಟಿಗೆ ವಾಸ್ತವವೂ ಇದೆ. ಆದರೂ ಏನೇ ಆಗಲಿ.
ಗಂಡಸರೇ ಮನೆಯೊಳಗೇ ಇರಿ. ಆಚೆ ಬಂದು ಕೊರೋನಾ ಬಾಧೆಯಿಂದ ನರಳುವುದಕ್ಕಿಂತ ಹೆಂಡತಿ ಕೈಯ್ಯಲ್ಲಿ ಬೈಸಿಕೊಳ್ಳುವುದೇ ಭೇಷು. ನಿತ್ಯ ಪಾತ್ರೆ ತೊಳೆದುಕೊಟ್ಟು,...
ಕವನ
ವಿಶ್ವಗುರು ಬಸವಣ್ಣ
ವಿಶ್ವಮಾನವ ಸಂದೇಶವ ಹೊತ್ತು
ಭುವಿಗೆ ಬಂದಿಳಿದ ಕರುಣಾಮೂರ್ತಿ
ಇವನಾರವ ಇವನಾರವ ಎಂದೆನ್ನದೆ
ಸಕಲ ಜೀವಾತ್ಮರಿಗೆ ಲೇಸಬಯಸಿದ ಚಿನ್ಮಯಮೂರ್ತಿ
ದಯೆ, ಪ್ರೀತಿ ಕಾಯಕದ ನಿಷ್ಠೆ
ಸದಾ ಇವರ ಜೊತೆಯಲ್ಲಿತ್ತು ಸತ್ಯದ ಪ್ರತಿಷ್ಠೆ
ಅಂತ್ಯಜರನ್ನು ಆತ್ಮಸ್ವರೂಪಿಗಳನ್ನಾಗಿಸಿ
ಬದುಕಲಿ ಹೊಂಗಿರಣ ಅರುಹಿದ ಜಗಜ್ಯೋತಿ
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು
ಎನ್ನುವ ಸಮಾನತೆ ಇವರ ಮಂತ್ರ
ಸ್ತ್ರೀಯನ್ನು ಶರಣೆಯೆಂದು ಕರೆದು
ಪೂಜನೀಯ ಮಾಡಿದುದು ಇವರ ಆತ್ಮತಂತ್ರ
ಎನಗಿಂತ ಕಿರಿಯರಿಲ್ಲ ಎಂಬ ನುಡಿ
ಕಣ್ತೆರೆಸಿತು ನನ್ನ ಬಾಳಿನ ಗುಡಿ
ಜಗದ...
ಕವನ
ನಮ್ಮಲ್ಲಿವೆ ಕಣ್ದುಂಬುವ ತಾಣಗಳು
ನೋಡುವ ಕಣ್ಗಳಿಗೆ ಹೃದಯವಂತಿಕೆಬೇಕು !
ಉತ್ತರದ ಚೆಲ್ವರಾಶಿಯ ಸವಿಯೋಣ ಬನ್ನಿಚೆಲುವನರಸಿ
ಕವಿ-ಪುಂಗವರು, ದಾಸ-ಶರಣರು
ಉದಿಸಿದ ಮಹಾ ಮಹಿಮೆಯ ನಾಡು
ಮಾರ್ಗಕಾರರು ತೋರಿದ ನೆಲೆವೀಡು
ದೇವನಾಂಪ್ರಿಯಂಗೆ ಪ್ರಿಯವಾದ ನಾಡು
ಆರುಂಕುಶವಿಟ್ಟೊಡಂ ನೆನೆಯುದೆನ್ನ ಮನಂ ಎಂದ
ಕವಿವರ್ಯರು, ದಾಸ-ಶರಣರು ಹರಿಸಿದ ಹೆಮ್ಮೆಯ ನಾಡು.
ವರ್ಷಧಾರೆಗೆ ಮಲೆಗಳ ಸೃಷ್ಟಿ
ಶ್ರಾವಣ ಮಾಸದ ಸೊಬಗಿನ ಪುಷ್ಟಿ
ಸೊಂಡೂರು ಸಿರಿ-ಐಸಿರಿ ಸವಿಯೋಣ ಬನ್ನಿ
ಐದು ಸುತ್ತಿನ ಕೋಟೆಯು
ಐತಿಹ್ಶ ಹೊತ್ತ ಜಲದುರ್ಗ
ಕೃಷ್ಣೆ ತೋಳ್ಬಂಧಿಯ ಬೃಹತ್ ದ್ವೀಪವದು.
ಗುಹಾಂತರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



