ಕವನ

ಕವನ ; ನಾ…..

 ನಾ ... ನನ್ನೊಳಗಿನ ಕಪ್ಪು ಬಿಳುಪಿನ ಚಿತ್ರ ಧುತ್ತನೆ ಕಣ್ಣೆದುರಿಗೆ... ಭಾವನೆಗಳ ತಾಕಲಾಟ ಉತ್ತರ ಸಿಗದ ಭಾವ..ನಾನು, ನನ್ನದು ಎಂಬ ಮಮಕಾರ ಮನಸ ತುಂಬಾ ಪ್ರೀತಿ, ಚಿತ್ತಾರ ಸಾಧನೆ ಸಾಧಕಿ ಅಲ್ಲವೇ ಅಲ್ಲ ಆದರೂ ಎಲ್ಲರಂತಲ್ಲ ನಾನು.. ಅಗೋಚರ...ನನ್ನುಸಿರಿಗೂ ಒಂದು ಹೆಸರಿದೆ ಪ್ರೀತಿ ಆಗಸದ ಎಳಸು ನಕ್ಷತ್ರ ... ಬಾಳಪುಟದಿ ಖುಷಿಗಳ ಹಾವಳಿ ಕಷ್ಟ ಸುಖಗಳ ಕ್ಯಾಲೆಂಡರಲ್ಲಿ ದಿಟ್ಟ ನಿರ್ಧಾರಗಳ ಪ್ರಭಾವಳಿಬೆಳಕಿಲ್ಲದ ಹಾದಿಯಲ್ಲಿ ನಡೆಯುವ ಧೈರ್ಯ !!! ಭ್ರಮೆ ಅಲ್ಲ ... ದಿಟ್ಟತೆ, ಸ್ಪಷ್ಟತೆ, ಸನ್ನಡತೆಗೊಂದಲದ...

ಕವನ : ಸಾವಿರದ ವಿಶ್ವಮಾನ್ಯಳು

ಸಾವಿರದ ವಿಶ್ವಮಾನ್ಯಳು.ಹಸಿರನು ಉಸಿರಾಗಿಸಿಕೊಂಡವಳು ಬಿಸಿಲಿನ ಬೇಗೆ-ಧಗೆ ನಿವಾರಕಳು ಪರಿಸರಪ್ರೇಮಿ ಪ್ರಿಯರ ಪ್ರೇರಕಳು ಕೋಟಿ ಮರನೆಟ್ಟ ಕೋಟ್ಯಧೀಶಳು./1/ಸಕಲ ಜೀವರಾಶಿಯ ಮಾತೆಯಿವಳು ಮಕ್ಕಳಂತೆ ಮರಗಳ ಪೋಷಿಸಿಹಳು ಪಯಣಿಗರ ದಣಿವು ಪರಿಹರಿಸಿದವಳು ನಾಡಿನ ಜೀವಜಾಲಕೆ ತಂಪನೆರೆದಿಹಳು/2/ಮರಗಳು ಮರುಗುತ ರೋಧಿಸುತಲಿಹವು ವ್ರೃಕ್ಷಮಾತೆಯ ಅಗಲಿಕೆ ತಾಳದಂತಾಗಿಹವು ಅನಾಥ ಪರಿಸರ ನಿಸ್ವಾರ್ಥ ಸಂರಕ್ಷಕಳು ಜೀವಪ್ರದಾಯಿನಿ ಸಾಲುಮರದ ತಿಮ್ಮಕ್ಕಳು/3/ಹಸಿರು ಕ್ರಾಂತಿಯ ಹರಿಕಾರಳು ಹೆಮ್ಮೆಯ ಅಪೂರ್ವ ಮಹಾಸಾಧಕಳು ಪರಿಸರವಾದಿ ಅಜರಾಮರಳು ಆಮ್ಲಜನಕ ಪುನರುಜ್ಜೀವಕಳು/4/ಕಾಯಕದಲ್ಲಿ ಕೈಲಾಸ ಕಂಡುಂಡವಳು ಪ್ರಕ್ರೃತಿ ಸಂಸ್ಕೃತಿ ಸಂಸ್ಕರಿಸಿಹಳು ವ್ರೃಕ್ಷೋದ್ಯಾನ ನಾಮಾಂಕಿತಳು ಯವಪೀಳಿಗೆಗೆ ಸ್ಪೂರ್ತಿದಾಯಕಳು/5/ಇಂದಿರಾ ಪ್ರಿಯದರ್ಶಿನಿ,...

ಕವನ : ತಿಮ್ಮಕ್ಕ ಅಜರಾಮರ

ಸಾಲುಮರದ ತಿಮ್ಮಕ್ಕ ಅಜರಾಮರ !ಮಕ್ಕಳು ನಿಮಗೆ ಸಾವಿರದ ಸಸಿಗಳು ನೆಟ್ಟಂತ ಸಸಿಗಳು ಅಮರತ್ವದ ತಾಯಿಗೆ ಮರಗಿದವು ವೃಕ್ಷಮಾತೆ ತಾಯಿ ನೀವು ಶತಾಯುಷಿಗಳಾಗಿ ಬಾಳಿದ ಹೆಮ್ಮರ ಸಾಲುಮರದ ತಿಮ್ಮಕ್ಕಳ ಹೆಸರು ಅಜರಾಮರ ||೧||ಅಧಿಕವಾಗೋದು ಬೇಡ ತಿಮ್ಮಕ್ಕನ ಹೆಸರಿನಲ್ಲಿ ವೃತ್ತ, ಸ್ಮಾರಕ, ಅಬ್ಬರ, ಆಡಂಬರದ ಫಲಕ ವೃತ್ತದಲ್ಲೊಂದು ಮರ, ಸ್ಮಾರಕದ ಸುತ್ತಲಲಿ ನೆಟ್ಟರೆ ನೂರಾರು ಮರ ಮರದ ಹಸಿರು ಉಸಿರು ನೆರಳಿನೆಸರಲಿ ತಿಮ್ಮಕ್ಕಳ ಹೆಸರು ಉಳಿಸಿ ಬೆಳೆಸೋಣ ಪರಿಸರದ...

ಕವನ : ಸಾಲು ಮರದ ನೆರಳು

ಸಾಲು ಮರದ ನೆರಳು ಅವಳು ಬದುಕಿದಳು ಹೀಗೆ ಒಬ್ಬಳೇ ನೆಟ್ಟ ಕೋಟಿ ಮರಗಳ ಜೊತೆಗೆ ಹೂವು ಹಣ್ಣು ಹಂಪಲು ಮರಗಳಿಗೆ ನೀರುಣಿಸಿ ತಂಗಿದಳು ತನ್ನೆಳಲು ಮಧುರ ತಂಪಿನಲಿ ದಾರಿ ಪಯಣಿಗರಿಗೆ ಮೃದು ಮಾತು ಹೇಳಿ ದಣಿವ ತಣಿಸಿದ ತಾಯಿ ನೆಲ ಭೂಮಿ ಸಸ್ಯ ಮರಿಗಳಿಗೆ ನಿತ್ಯ ಉದಕವನೆರೆದು ಮುಗಿಲು ಮುಟ್ಟಿದವು ಗಿಡ ಮರ ಬಳ್ಳಿ ದೇವಿ ತಿಮ್ಮಕ್ಕ ಅಲ್ಲ ಇವಳು ಹೆಣ್ಣು ಜೀವಜಾಲದ ಕಣ್ಣು ಭೂದೇವಿಯ ಮಡಿಲಿನ ಹಿರಿಯ ಮಗಳು ನೂರು ದಾಟಿದ ವಯಸ್ಸು ಜೀವ ಜಂಗಮ ಮನಸ್ಸು ಬಿಟ್ಟು ಹೋದಳು ತಿಮ್ಮಕ್ಕ ನೂರು ದಶಕದ ಮರ ನೂರು ಶತಕದ ತಂಪು ನಿತ್ಯ...

ಒಂದು ಪರಿಸರ ಗೀತೆ : ಮರ ದೇವರು ಕೊಟ್ಟ ವರ

ಮರ ದೇವರು ಕೊಟ್ಟ ವರ ಬಹು ಉಪಯೋಗಿ ಮರ ದೇವರು ಕೊಟ್ಟ ವರ ರಕ್ಷಿಪುದು ಪರಿಸರ ನೀಗುವದು ಬರತರಲು ಮಳೆ ನೀರ ತಡೆಯಲು ಮಹಾಪೂರ ಹಿಡಿದಿಡಲು ಭೂಸಾರ ಬೇಕು ನಮಗೆ ಮರಮರಮುಟ್ಟು ಔಷಧ ಬೆಳೆಗಳಿಗೆ ಗೊಬ್ಬರ ಕಟ್ಟಲು ಮನೆ ಮಂದಿರ ಬೇಕು ನಮಗೆ ಮರಹಸಿರು ಹೊನ್ನಿದು ಮರ ಭೂ ತಾಯಿಗೆ ಅಲಂಕಾರ ಪಶು ಪಕ್ಷಿಗೆ ಆಹಾರ ರೈತ ಜನಕೆ ಆಸರಸುಜನರೆ ಕೇಳಿರಿ ಮರಗಳನು ಬೆಳೆಸಿರಿ ಕಾಡನು ಉಳಿಸಿರಿ ಪರಿಸರ ರಕ್ಷಿಸಿರಿ... ಆರ್. ಎಸ್. ಚಾಪಗಾವಿ ಬೆಳಗಾವಿ 8317404648

ಕವನ : ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ ಹುಡುಕುತ್ತಿದ್ದೇನೆ ನಾನು ಗುಡಿ ಚರ್ಚು ಮಸೀದಿ ಗುರುದ್ವಾರ ಬಸದಿ ಮಠ ಬೌದ್ಧ ವಿಹಾರಗಳಲ್ಲಿಕಾಣಲಾರೇನು ದೇವರ ಧರ್ಮ ತತ್ವ ಚಿಂತನೆ ಎಲ್ಲೆಡೆ ಪೂಜೆ ಪ್ರಾರ್ಥನೆ ಮರೆತು ಮನುಜ ಪಥಬೈಬಲ್ ಕುರಾನ್ ಗೀತೆ ವಚನ ಪಠಣ ನಿಂತಿಲ್ಲ ಗಟ್ಟಿ ಧ್ವನಿಯ ಕೂಗು ಶಬ್ದಗಳ ಲಜ್ಜೆ ಕರ್ಕಶಹಸಿವು ಬಡತನ ಧರ್ಮ ಸುಲಿಗೆ ಶೋಷಣೆ ಕರ್ಮ ಉಳ್ಳವರಿಗೆ ದೇವರು ಪೂಜೆ ಇಲ್ಲದವರಿಗೆ ಇದೆ ಭಿಕ್ಷೆಹುಡುಕುತ್ತಿದ್ದೇನೆ ನಿತ್ಯ ನಿರಂತರ ಶೋಧ ನೆರಳು ಬಿಸಿಲು ತಾಪ ಎಂದು ಕೊನೆ ಮನುಜ ಶಾಪಡಾ ಶಶಿಕಾಂತ ಪಟ್ಟಣ...

ಕವನ : ಕನ್ನಡವೆಂದರೆ ಪಂಚಪ್ರಾಣ

ಕನ್ನಡವೆಂದರೆ ಪಂಚಪ್ರಾಣಅನ್ನ ಅಕ್ಷರ ನೀಡಿ ಸಲುಹುತಿಹ ಕನ್ನಡಾಂಬೆಗೆ ಜೀವ ಹೋದರೂ ಸರಿ ತಾಯಿ ಮಾನ ಕಾಪಾಡುವ ಗಂಡೆದೆಯ ಮಕ್ಕಳೆಂದರೆ ಅವಳಿಗೆ ಪ್ರಾಣ ತಾಯಿ ಭುವನೇಶ್ವರಿಗೆ ನಾವೆಂದರೆ ಜೀವ ಅದ್ಕೆ ಕನ್ನಡವೆಂದರೆ ನನಗೆ ಪಂಚಪ್ರಾಣನಾಡಪ್ರೇಮವ ಮರೆತು ಪರಭಾಷಾ ಪ್ರೇಮ ಮೆರೆಸುವವರಿಗೆ ಅವಳದೊಂದು ಕಿವಿಮಾತು ತಾಯಿನುಡಿಯ ಮರೆತ ಜನ ಹೆತ್ತ ತಾಯಿಯನ್ನು ಮರೆಯದಿರುವರೇ? ಇಲ್ಲಿರುವ ಸೌಭಾಗ್ಯ ಬೇರೆಲ್ಲೂ ಕಾಣೆನು ಅದ್ಕೆ ಕನ್ನಡವೆಂದರೆ ಪಂಚಪ್ರಾಣನಮ್ಮ ಬದುಕಿಗೆ ಆಧಾರ ಕನ್ನಡ ಉಸಿರಿಗೆ ಉಸಿರಾಗಿಹುದು ಕನ್ನಡ ಈ ತಾಯ್ನೆಲ...

ಕವನ : ಚೆಲುವ ಕನ್ನಡ ನಾಡು

ಚೆಲುವ ಕನ್ನಡ ನಾಡು ಚೆಲುವ ಕನ್ನಡ ನಾಡು ಇದು ಸುಂದರ ಗಂಧದ ಬೀಡು ಗಾಳಿ ಬೀಸುವ ಹಸಿರು ವನಗಳು ಕಲೆಯ ನದಿಯ ದೇವಾಲಯಶಾಂತವಾಗಿ ಹರಿವ ಹೇಮಾವತಿ ಧುಮುಕಿ ನೆಗೆವ ಶರಾವತಿ ಜೋಗದಲ್ಲಿ ಜಲಪಾತ ಇರುವುದು ಕೊಡಗಿನಲ್ಲಿ ಕಾವೇರಿ ಹುಟ್ಟುವುದು ಕಪಿಲೆ ಗೋದಾವರಿ ತುಂಗಭದ್ರೆ ನಮ್ಮ ದಾಹ ಹಿಂಗಿಸೋ ನದಿಗಳೇ ನೀವೇ ನಮ್ಮ ಜೀವನ ಸೃಷ್ಟಿ ಸೊಬಗಿನ ಚೇತನಹಾಸನ ಜಿಲ್ಲೆಯ ಹಲ್ಮಿಡಿ ಶಾಸನ ಬೇಲೂರು ಶಿಲ್ಪವು ನಿತ್ಯ ನೂತನ ಮೈಸೂರಿನಲ್ಲಿ ರಾಜರ ಅರಮನೆ ತ್ಯಾಗ ಅಹಿಂಸೆಯ...

ಕವನ : ಕವಿತೆಗೊಂದು ಕರೆಯೋಲೆ

ಕವಿತೆಗೊಂದು ಕರೆಯೋಲೆ ಬರೆಯಲೆಂದು ಕುಳಿತ ನನಗೆ ಪದಗಳೇ ಸಿಗುತಿಲ್ಲ... ನುಡಿಗಳೆಲ್ಲ ಮುನಿಸಿಕೊಂಡು ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ ಒಳಗೊಳಗೆ ನಡೆಯಿತಾ? ಒಳಜಗಳ!! ಮನಃಪಟದಲೋ ಸಾವಿರಾರು ಅಕ್ಷರ ಬಳಗ... ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು ಓಲೆ ಬರೆದು ಬಿಡಲೇ?... ಕರೆಯೋಲೆ ನೀಡಿ ನಾನು ಅವಳ ಇಲ್ಲಿ ಕರೆಯಲೇ?...ನನ್ನೆದೆಯಾಳದ ಪರಮಾಪ್ತ ಸಖಿಯೇ!                      ಸರಿಸು ಕೋಪ ತುಸು...

ಕವನ : ಅಕ್ಕ

ಅಕ್ಕಅಕ್ಕನೆಂದರೆ ಸಾಕು ನೆನಪಾಗುವದು ಉಡುತಡಿಯ ಕಿಚ್ಚು ರೂಪದಲಿ ಹೆಣ್ಣಾದರೂ ಪುರುಷ ನಾಚುವ ಕಿಚ್ಚು ರಾಜ ಕೌಶಿಕನ ಧಿಕ್ಕರಿಸಿ ಒಳಗೆ ಹೊರಗೆ ಬೆತ್ತಲಾದಳು ನಡೆದಳು ಕಲ್ಯಾಣದೆಡೆಗೆ ಬರದ ಬಿಸಲಿನ ನಾಡು ಹುಲಿ ಚಿರತೆ ದಟ್ಟ ಕಾಡು ಹಕ್ಕಿ ಕಲರವದ ಬೀಡು ಹೊರಟಳು ಒಬ್ಬಳೇ ಹುಡುಕುತ್ತಾ ಚೆನ್ನಮಲ್ಲಿಕಾರ್ಜುನನ ಗೂಡು ಮಳೆ ಮೋಡ ಬಿಸಿಲು ಗಾಳಿ ಹಸಿವಿಗೆ ಭಿಕ್ಷಾನ್ನ ಕುಡಿಯಲು ಕೆರೆ ಮಲಗಲು ಹಾಳು ದೇಗುಲಗಳು ಕಷ್ಟ ಕಾರ್ಪಣ್ಯ ಚಂಡಮಾರುತ ನೋವು ಕಲ್ಯಾಣಕೆ ಆರು ಹೋಗಬಾರದು ಕಾಯಕ ದಾಸೋಹವ ಬಿಟ್ಟು ಕೇಳಲು ಇರಲಿಲ್ಲ ಕಾನನದ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group