ಕವನ
( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ )
ಮನಿಷಾ! ಮುಂದಿನ ಜನುಮಗಳಲಿ...?
ನಿನ್ನ ದೇಹವು
ಕತ್ತಲೆಯ ಚಾಪೆಯಾಗುತ್ತದೆ
ಎಂದೆನಿಸಿದಾಗ-
ಅವರ ಕೊರಳ ಕೊಳವೆ ಕಡಿಬೇಕಿತ್ತು
ನಿನ್ನ ಚಿತೆಯ ಬೆಂಕಿ
ಕೆನ್ನಾಲಿಗೆ ಚಾಚುತಿದೆ
ಎಂದೆನಿಸಿದಾಗ-
ಕೈಗೆ ಸಿಕ್ಕ ಕಲ್ಲಿನಲಿ
ಹಲ್ಲಿಗೆ ಜಜ್ಜಬೇಕಿತ್ತು
ಮನಿಷಾ!ನಿನ್ನೆದೆಗೂಡನು
ಕುಲುಮೆಯಲಿ ಬೇಯಿಸುತ್ತಾರೆ
ಎಂದೆನಿಸಿದಾಗ-
ಪೆನ್ನನು ಆಯುಧ ಮಾಡಿ,
ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು
ನಿನ್ನ ಜೀವದ ಕಥೆ
ಮುಗಿದೇ ಹೋಯಿತು
ಎಂದೆನಿಸಿದಾಗ-
ಅಬ್ಬಕ್ಕನಂತೆ ಅಬ್ಬರಿಸಿ
ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು
ನಿನ್ನ ಬದುಕಿನ ವಿದಾಯ
ಹರಾಜಾಗುತಿದೆ
ಎಂದೆನಿಸಿದಾಗ-
ಹುರಿಗೊಂಡ ಅವರ
ಅಂಗಗಳನು...
ಕವನ
ಅಕ್ಷರದಾಂಜಲಿ
ಆಗಸದಂಚಿನ ನೇಸರನೆಲ್ಲಿ ಮರೆಯಾದನು
ಮಗುವಿನಂತಹ ಮನಸಿನ ಗಾನ ಗಂಧರ್ವನು
ಮರೆಯಾದ ಸುಕೋಮಲ ಸುಮವೊಂದು
ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ
ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು
ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು
ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು
ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು
ಸ್ವರ ಸಾಮ್ರಾಟನ ಅಪಧಮನಿಗಳಲಿ
ಸಂಗೀತದ ಸ್ವರ ಲಾಲಿತ್ಯವು ತುಂಬಿರಲು
ಏರಿದೆತ್ತರದಲೂ ನಮ್ರತೆಯ ಸಾಕಾರವು
ಎಷ್ಟು ಜನರ ಮನವ ಕದ್ದ ಗಾರುಡಿಗನು
ನಾದದ ತಪಸ್ವಿಯಾಗಿ ಅರಳಿದಂತೆ
ಸಾಗರವೇ ತಾನಾದರೂ ಬಿಂದುವಿನಂತೆ
ತುಂಬಿದ ಕೊಡ...
ಕವನ
ಗಾಂಧಿ ಬೀಜ
ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ
ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ
ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟೆಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ
ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗು
ಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ
ಅರಮನೆ ಗುರುಮನೆ ಸೆರೆಮನೆಗಳಲೂ
ಕಿಡಿನುಡಿ ಕೆನ್ನಾಲಿಗೆ ಚಾಚಿ...
ಕವನ
ಇವರೇ ಗಾಂಧಿ ಅಜ್ಜ
ಕೈಲಿ ಕೋಲು, ಬಿರುಸು ನಡಿಗೆ
ಬಾಯಲ್ಲಿ ಸತ್ಯ, ಶಾಂತಿ ಮಂತ್ರ
ರಾಷ್ಟ್ರದ ಒಳಿತಿಗಾಗಿ ಹೋರಾಡಿಯೂ,
ಅಧಿಕಾರ ಕೈಬೀಸಿ ಕರೆದಾಗ,
ನಿರ್ಲಿಪ್ತವಾಗಿ ಕುಳಿತವರು...
ಇವರೇ ನಮ್ಮ ಗಾಂಧಿ ಅಜ್ಜ.
ರಾಷ್ಟ್ರಮಾತೆಯ ಕಣ್ಣು,ಕಿವಿ,ಬಾಯಿ ಮುಚ್ಚಿ
ಠೇಂಕರಿಸುತ್ತಿದ್ದ ಕೆಂಪು ಜನರಿಗೆ
ಸತ್ಯಾಗ್ರಹದಿಂದ ಪಾಠ ಕಲಿಸಿದವರು ,
ಸರಳ ನಡೆ-ನುಡಿ- ಜೀವನದಿಂದ
ವಿಶ್ವಕ್ಕೇ ಮಾದರಿಯಾದವರು
ಇವರೇ ನಮ್ಮ ಗಾಂಧಿ ಅಜ್ಜ....
ಪತ್ನಿ,ಪುತ್ರರ ಮರೆತು, ಹೊಣೆಯರಿತು
ಸ್ವಾತಂತ್ರ್ಯ ಹೋರಾಟ ಸಂಘಟಿಸಿ,
ಕಾಯ್ದೆ ಮುರಿದು, ಚಳವಳಿ ತೆಗೆದು
ಲಕ್ಷಾಂತರ ಜನರಿಗೆ ಕೆಚ್ಚು...
ಕವನ
ಎಲ್ಲಾ ಹೃದಯವಂತರಿಗೆ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು.
ಹೃನ್ಮನೆ
ಎರಡು ಬಾಗಿಲು ಇರುವ
ಈ ಪುಟ್ಟ ಮನೆಗೆ
ನಾಲ್ಕು ಕೋಣೆಗಳಿಹವು
ಬಡಿತ ಗಳಿಗೆ-ಗಳಿಗೆ!!
ನಿಚ್ಚಳ ಪ್ರೀತಿಗೆ
ನೆಲೆ ಇಹುದು ಒಳಗೆ
ಕಶ್ಮಲ ಕಪಟತನವದು
ಬಾಗಿಲಿನ ಹೊರಗೆ
ಬಿಟ್ಟ ಲಜ್ಜೆಯ ಹಗೆಯು
ಚುಚ್ಚು ಮಾತಿನ ಬಗೆಯು
ಸುಟ್ಟ ಚುಟ್ಟದ ಹೊಗೆಗೆ
ಉಸಿರು ಕಟ್ಟುವುದಿದಕೆ!!
ಕೆಟ್ಟ ಕೊಬ್ಬಿನ ಸ್ನೇಹ
ದುಷ್ಟ ವ್ಯಸನದ ದಾಹ
ಕುಟ್ಟುವಂಥಾ ಚಿಂತೆ
ಧ್ವಂಸಗೊಳಿಸಲು ನಾಂದಿ!!
ಸ್ವಾಸ್ಥ್ಯಚಿತ್ತದ ಗಾಳಿ
ನೇಮ-ನಿಷ್ಠೆಯ ಬೇಲಿ
ಪ್ರಮುಖ ಶಾಂತಿಯ ರವಳಿ
ಈ ಮನೆಯು ಬೆಳಗಲು!!ಚುಟ್ಟ=ಬೀಡಿ
ರವಳಿ= ಶಕ್ತಿ✍️ ಕಮಲಾಕ್ಷಿ ಕೌಜಲಗಿ.
ಕವನ
ಅವ್ವನ ಮನಸೇ ದೊಡ್ಡದು, ಅವ್ವ ಅನ್ನುವ ಹೆಸರಿನ ಜೀವವೇ ಬಂಗಾರ.ಅವ್ವ ಸುಳ್ಳು ಹೇಳುತ್ತಾಳೆ ಆದರೆ ಅದರಲ್ಲಿ ಪ್ರೀತಿ ಇದೆ, ಒಲವು ಇದೆ, ಮುದ್ದು ಇದೆ, ಕಾಳಜಿ ಇದೆ.ವಾಟ್ಸಪ್ ನಲ್ಲಿ ಬಂದ ಅವ್ವನ ಕುರಿತ ಕವನ ಮನ ತಟ್ಟುತ್ತದೆ.ನಮ್ಮ ಅವ್ವನಿಗೆ ಅರ್ಪಣೆ
ಅವ್ವ ನೀ ಭಾಳ ಸುಳ್ಳು ಹೇಳತಿ
ಮುಂಜಾನೆ ಜಲ್ದಿ ಎಬ್ಬಸಾಕ, ಏಳಕ್ಕೆ ಎಂಟು ಆಗೆತಿ ಅಂತಿ
ಜಳಕ...
ಕವನ
...ಕಟು ವಾಸ್ತವ....
ಗಾಂಧಿ ತತ್ವವನ್ನು
ನಾವು ಪಾಲಿಸುತ್ತಿದ್ದೇವೆ,
ರಸ್ತೆಗೆ, ಉದ್ಯಾನವನಕೆ
ಗಾಂಧಿ ಹೆಸರು ಕೊಟ್ಟಿದ್ದೇವೆ,
ಗಾಂಧಿ ತತ್ವಗಳ ಜೊತೆ
ಅವರ ಭಾವಚಿತ್ರಕೆ ಫ್ರೇಂ ಹಾಕಿ,
ಮೊಳೆ ಹೊಡೆದು ಗೋಡೆಗೆ ನೇತುಹಾಕಿದ್ದೇವೆ !!!.........ಆದರ್ಶ ಭಾರತ........
'ಆದರ್ಶ ಭಾರತ 'ಕಟ್ಟೋಣವೆಂದು
ಕಂಡಕಂಡಲ್ಲಿ ಭಾಷಣ ಬಿಗಿಯುವ
ಖಾದಿ ತೊಟ್ಟ ವೀರರೇ
ನಿಮ್ಮ ಸಂತಾನವನ್ನು
ಹಣ,ಡ್ರಗ್ಸ್, ಮೋಜಿನಿಂದ ದೂರವಿಡಿ,
ಆದರ್ಶ ಭಾರತ ತಾನೇ ನಿರ್ಮಾಣವಾಗುತ್ತದೆ..........ಕಪ್ಪೆಗಳು.........
ಕಪ್ಪೆಗಳು , ಇವು ಕಪ್ಪೆಗಳು
ತಾವೂ ಮೇಲೆ ಬರವು,
ಇನ್ನೊಬ್ಬರನೂ ಮೇಲೆ ಬಿಡೆವು,
ಅದರ ಕಾಲ ಇದು,ಇದರ ಬಾಲ...
ಕವನ
..ದಾರಿ ಯಾವುದಾದರೇನು!!!...
ದಾರಿ ಯಾವುದಾದರೇನು ?
ತಲುಪುವ ಗುರಿ ನಿಶ್ಚಿತವಿರಲಿ,
ನಿನ್ನ ಗುರಿ ಅಭ್ಯುದಯದತ್ತ ಸಾಗುತಿರಲಿ,
ಗುರಿ ತಲುಪಲು ಏಕಾಗ್ರತೆಯ ಅರಿವಿರಲಿ,
ನಿನ್ನ ದಾರಿಯ ಪಥಿಕ ನೀನೆ,
ನಿನ್ನ ಸಮಾಜದ ನಿರ್ಮಾತೃ ನೀನೆ !!
ಈ ದಾರಿ ಇಂದು ನಿನ್ನೆಯದಲ್ಲ,
ಗಾಳಿ ,ಬೆಳಕು ಜನಿಸಿದಾಗ,
ಮಾನವ ಪ್ರಾಣಿಯ ಉಗಮವಾದಾಗ,
ದಾರಿ ತನ್ನಂತೆ ತಾನೇ ರೂಪುಗೊಂಡಿದ್ದು...
ದಿಗಂಬರನಾಗಿದ್ದ ಮಾನವ
ಮರದ ತೊಗಟೆ ,ಎಲೆಗಳ ಸುತ್ತಿ
ಬೆತ್ತಲೆ ದೇಹ ಮುಚ್ಚಿಕೊಂಡಿದ್ದು,
ಕಲ್ಲುಗಳ ಚಚ್ಚಿ ಬೆಂಕಿಯ ಹಚ್ಚಿ ದ್ದು,
ಕಾಡುಗೆಣಸು,ಮಾಂಸಗಳ...
ಕವನ
..ವೃಕ್ಷ ಸಂದೇಶ....
ಬಾಳೆಂಬ ವಿಚಿತ್ರ ಸಂತೆಯಲಿ
ಭೀಕರ ಬಿರುಗಾಳಿ,ಭೂಕಂಪ,ಪ್ರವಾಹ
ನಿನ್ನನೆಂದೂ ಅಲುಗಿಸಲಾರವು
ನಿಲ್ಲು, ನೀ ಧೃಡವಾಗಿ ನಿಲ್ಲು !!!
ನಿನಗೆ ಅದೃಷ್ಟ ದೇವತೆಯ ಕಟಾಕ್ಷವಿದೆ,
ಧೃಡವಾಗಿ, ವಿಸ್ತರಿಸಿ,ಕೊಂಬೆ-ರೆಂಬೆಗಳ ಹರಡಿ
ನಿನ್ನದೇ ಸಾಮ್ರಾಜ್ಯದಲಿ ಸಂತಸದಿ ನಲಿಯುತ್ತಿದ್ದೀ,
ಹಸಿರಾಗಿ,ಪಕೃತಿಯ ಉಸಿರಾಗಿ ನಳನಳಿಸುತ್ತಿದ್ದೀ.....
ನಿನ್ನ ಕೊಂಬೆಗಳಲಿ ಸಾವಿರ ಪಕ್ಷಿಗಳು ಕುಳಿತು,
'ಕುಹು-ಕುಹು' ಸಂಗೀತ ಹಾಡಿ ನಲಿಯಲಿ;
ನವಿಲು ನರ್ತಿಸಲಿ, ಶುಕ-ಪಿಕಗಳು ಆನಂದಿಸಲಿ,
ನಿನ್ನ ನೆರಳಲಿ ಜಿಂಕೆ,ಮೊಲ,ಸಾರಂಗಗಳು ನಲಿಯಲಿ...
ಓ ಮಾನವ ,ಈ ಹಸಿರು ವೃಕ್ಷದಂತೇ ನಿನ್ನ ಬಾಳು,
ಜಾತಿ,ಮತ,ಪಂಥಗಳೆಲ್ಲವ...
ಕವನ
ಸಹಜವಾಗಲಿದೆ ಜೀವನ !!
ಈ ಕೊರೊನಾ ಕಾಲದಲ್ಲಿ..
ನಾವಾಗಬಾರದು..
ಒಬ್ಬರೇ ಏಕಾಂಗಿ!
*ಮನಸ್ಸು* ಮಂಕಾಗಿ!!
ಮೊಬೈಲ್ ಗೆ ಸಿಂಕಾಗಿ!!! 🤳🤳
(sync)
ನಾವಾಗಬೇಕು..
ಸ್ನೇಹದ ಸೊಂಕಾಗಿ!
ಲವಲವಿಕೆಯ ಲಿಂಕಾಗಿ!!(link)
*ಆತ್ಮಸ್ಥೈರ್ಯದ* ಶಂಖವಾಗಿ!!!🐚🐚ಕಣ್ಣಿಗೆ ಕಾಣದ
ವೈರಸ್ ವೊಂದು
ಕಾಡುತ್ತಿದೆ ಧರೆಯನಿಂದು;
ಹಿಂದೆಂದೂ ಕಂಡು ಕೇಳರಿಯದ
*ಅವಲಕ್ಷಣಗಳಲ್ಲಿ!!*
ಕಣ್ಣಿಗೆ ಕಾಣದ
ದೇವರಿಂದು
ಕಾಪಾಡುತ್ತಿದ್ದಾನೆ ಧರೆಯನಿಂದು;
ಹಿಂದೆಂದೂ ಕಂಡು ಕೇಳರಿಯದ
*ಅವತಾರಗಳಲ್ಲಿ!!*
ಮಾಸ್ಕ್ ಇದ್ದರೆ
ಜೀವಕ್ಕೆ
_ರಿಸ್ಕ್ ಇಲ್ಲ!_ 😷😷ಪ್ರೇಮವಿದ್ದರೆ
ಜೀವನವು
_ಶುಷ್ಕವಲ್ಲ!!_ 💖💖ಕಷ್ಟಗಳ ಬಂಡೆಗಳೇ
ಉರುಳಿದರೂ!
ಜಾರಬಾರದು ನಾವು
🙇🏻♂️ *ಖಿನ್ನತೆಗೆ* 🙇🏻♀️ಸಾಮಾಜಿಕ ಅಂತರದಲ್ಲೂ
ಸನಿಹವಾಗಬೇಕಿದೆ!
ನಾವು ಮನ-ಮನಗಳ
🎭 *ಭಿನ್ನತೆಗೆ* 🎭ಮೊನ್ನೆ
ಮೊನ್ನೆಯ
ನಿರುದ್ಯೋಗಿ,
ಇಂದಿನ
ಅಗರ್ಭ
*ಸಿರಿದ್ಯೋಗಿ!*
ಹೂಡಿಕೆ
ಮಾಡಿದ್ದ
ತಾಳ್ಮೆಯನ್ನು
*ನಿಯತ್ತಾಗಿ !*
ಹೃದಯಕ್ಕೆ
ನಾಟುವಂತೆ
ನಾಟಿ
ಮಾಡಿದ್ದಾನೆ
ಸಸಿಯನ್ನು
ಅನವರತ
ಅನ್ನದಾತ;
ಪೂಜಿಸುತ್ತಾ
ಭೂತಾಯಿಯನ್ನು
ಬೆಳೆಯಲು
*ಫಲವತ್ತಾಗಿ!*
ಗುರುವಿನ
ಗೋತ್ರ
ಶಿಷ್ಯನ
ಬಾಳಿನ
ಸೂತ್ರ;
ಸರಿಪಡಿಸುವನು
ಶಿಷ್ಯನ
ಜಾತಕ
ಮನದಲ್ಲಿ
ಮುಚ್ಚಿಟ್ಟುಕೊಂಡು
ಸೂತಕ!
ಮೊಂಬತ್ತಿಯಂತೆ
ಮಾಯವಾಗುವನು
ಶಿಷ್ಯಂದಿರ
*ಉತ್ತಿಷ್ಠತೆಗಾಗಿ!*ನಿನ್ನೆಯ
ಗದ್ಯವನ್ನೇ
ಬರೆಯುತ್ತಿದ್ದೇನೆ;
ನಾನಿಂದು
ಪದ್ಯವಾಗಿ
ಕೊರೊನಾ
ಕಾಲದಲ್ಲಿ
ಸಕಲರ
*ಸುರಕ್ಷತೆಗಾಗಿ!*
ಸಂತೋಷ ವಾಲಿ ಬಿ ಆರ್ ಪಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



