ಕವನ

ಗುರ್ಚಿ ಹಾಡು

ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ ಅದನ್ನು ಭ್ರಷ್ಟಾಚಾರಿ ರಾಜಕಾರಣಿಗೆ ಹೋಲಿಸಿ ಬರೆಯಲಾಗಿದೆ.ಭ್ರಷ್ಟಾಚಾರಿ ಬುಚಿ೯ ಬುಚಿ೯ ಎಲ್ಲಾಡಿ ಬಂದಿ ಖುಚಿ೯ಗಾಗಿ ಸುತ್ತಾಡಿ ಬಂದಿ ಹಳ್ಳಾ ಕೊಳ್ಳಾ ಮಾರಿ ತಿಂದಿ ಮೆಂಬರ ಆಗಿ ಮೆರದಾಡಿ ಬಂದಿ. ಹುಯ್ಯೋ ಹುಯ್ಯೋ ಮಳೆರಾಯ ಅಂದಿ. ರೊಕ್ಕದ ಮಳೆಯು ಬರಲಿ...

ಕವನ: ನಾನು-ನಾನೆಂಬ ಅಹಮಿಕೆ ಬೇಕೇ?

ತಿನ್ನುವ ಹಿಡಿ ಅನ್ನಕೆ, ಸೂರ್ಯ ನೀಡುವ ಬೆಳಕಿಗೆ, ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ , ಪ್ರಕೃತಿ ನೀಡುವ ಹನಿ-ಹನಿ ಜಲಕೆ , ಜೀವಮಾನ ಸವೆಸುವ ಓ ಮಾನವ , 'ನಾನು,ನಾನು! 'ಎಂಬ ಅಹಮಿಕೆ ಬೇಕೇ ??? ಇನಿದನಿಯಲಿ ಹಾಡುವ ಕೋಗಿಲೆಗೆ, ಸುಂದರ ದನಿ ನೀಡಿದ್ದು ನೀನೇನಾ ? ಮುಗಿಲೆತ್ತರಕೆ ಹಾರುವ ಹಕ್ಕಿಗೆ, ಹಾರುವುದ ಕಲಿಸಿದ್ದು ನೀನೇನಾ ? ನೀರಲಿ ಸ್ವಚ್ಛಂದವಾಗಿ ಈಜುವ ಮೀನಿಗೆ ಈಜು ಕಲಿಸಿದ್ದು ನೀನೇನಾ ??? ನಾನು, ನಾನೆಂದು...

ಗಜಲ್ ಗಳು

ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ ಬದುಕು ಅತಂತ್ರಾಗಿ ಎದ್ದು ಬಿದ್ದು ಇನ ಪಾಜಿಗಟ್ಟಿ ಮುಟ್ಟುದೈತಿ ಕತ್ತು ಹಿಡದು ಬೀದಿಗಿ ನೂಕಿದಮ್ಯಾಲ ಬದುಕಾಕೆಲ್ಲೈತಿ ಜಾಗ ಬದುಕಿನ ಆಟಕ್ಕ ತೆರಿ ಬೀಳುತನಕ ಬಣ್ಣ ಹಚ್ಚಿ ಜೀವ ತುಂಬುತೀನಿ...

ರವಿವಾರದ ಕವನಗಳು

ನಮ್ಮೂರು ಬದಲಾಗಿದೆ ಟಿವಿಗಳು ಬಂದ ಮೇಲೆ ಹಂತಿಪದ ಬೀಸುವಪದ ಡಪ್ಪಿನಾಟ ಬಯಲಾಟ ಕೋಲಾಟ ಡೊಳ್ಳಿನಪದ ಪುರಾಣ ಕೀರ್ತನ ಭಜನೆ ಕೇಳದಂತಾಗಿದೆ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಟ್ರಾಕ್ಟರ್ ಬಂದಮೇಲೆ ಜೋಡೆತ್ತುಗಳಿಗೆ ಗೆಜ್ಜೆ ಗಗ್ಗರಿ ಕೋಡಣಸು ಜೂಲ ಹಾಕಿ ಸವಾರಿ ಬಂಡಿಯಲಿ ಜಾತ್ರೆಗೆ ಹೋಗುವ ಮಜಾ ಮಾಯವಾಗಿದೆ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಕಾನ್ವೆಂಟ ಶಾಲೆಗಳು ತೆರೆದ ಮೇಲೆ ಹಿರೀಕರು ಹೇಳುತಿದ್ದ ಗಾದೆ ಒಡಪು ಒಡವು ಬಾಯಿಲೆಕ್ಕ ಸಮಸ್ಯಾಗಣಿತ ಜಾನಪದಕಥೆಗಳನ್ನು ಹೇಳುವರಿಲ್ಲ ಕೇಳುವರಿಲ್ಲ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಕ್ರಿಕೆಟ್ ಬಂದ ಮೇಲೆ ಹುಲಿಮನೆ ಚವ್ವ ಗೋಟುಗುಣಿ ಬಗರಿ ಕುಂಟೆಬಿಲ್ಲೆ ಚಿಣಿದಾಂಡು ಮರಕೋತಿ ಗೋಲಿಗುಂಡು ಆಟಗಳು ಬಂಧಾಗಿವೆ ಆಗಿನಂತಿಲ್ಲ ಈಗ ನಮ್ಮೂರು...

ಚುಟುಕು ಹಾಗೂ ಕವನ

ನಮ್ಮೂರ ಸಿದ್ಧ ನಮ್ಮೂರ ಸಿದ್ಧ ಕುಟುಂಬ ಯೋಜನೆಗೆ ಬದ್ಧ, ಆ-ರತಿಗೊಂದು, ಈ-ರತಿಗೊಂದು ಅವನಿಗೆ ನಮ್ಮೂರಲ್ಲಿ ಎರಡೇ ಮಕ್ಕಳು..ಸಿ(ಕ)ಹಿಸುದ್ಧಿ ಸೀಮೆಯೆಣ್ಣೆ ಸುರಿದು, ಸೊಸೆಯರ ಕೊಲ್ಲುವ ಅತ್ತೆಯರಿಗೊಂದು ಸಿ(ಕ)ಹಿ ಸುದ್ದಿ, ಹೀಗೇ ಸಾಗಿದರೆ ಸೊಸೆಯರೇ ನಿಮ್ಮನ್ನು ಕೊಲ್ಲುವರು ಗುದ್ದಿ ಗುದ್ದಿ!!ಫಲಕ ಮಹಿಳಾ ಕಾಲೇಜೊಂದರ ಮುಂದೆ, ರಸ್ತೆ ಸೂಚನಾ ಫಲಕ "ಈ ರಸ್ತೆಯಲಿ ಭಾರೀ ಉಬ್ಬು-ತಗ್ಗುಗಳಿವೆ ಎಚ್ಚರಿಕೆ...!!" ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳು, ಪತ್ರಕರ್ತರು ಮೊ:94496 80583,ಹಾರು ನೀ ಹಾರು ಗೂಡಲಿದ್ದ ಮರಿಯೊಂದು ಜಾರಿ ಕೆಳಗೆ ಬಿದ್ದಿತು ಹಾರಲು ಬಾರದೇ ಭಯದಿ ಮುದುಡಿ ನಡುಗುತ್ತಿತ್ತು. ದೂರದ ಪೊದೆಯಲಿ ಠಕ್ಕ ನರಿಯೊಂದು ಪಿಳಿಪಿಳಿ ಕಣ್ಣು ಬಿಡುತ್ತಿತು ಮರಿಯನು ತಿನ್ನಲು ಕಾದು ಕುಳಿತಿತ್ತು. ಕಾಗೆಯೊಂದು ಹಾರಿ ಬಂದು ಮರದ ಮೇಲೆ ಕುಳಿತಿತು ಭಯದಿ ನಡುಗುವ...

ವಚನಗಳು

೧ ಕೆಂಡದನುಭವ ಮೈಯ ಬೇಯಿಸಿತ್ತು ಉಂಡನುಭವ ಉದರ ಹೊರೆಯಿತ್ತು ಗಂಡನುಭವ ರಣದಿ ಜಯವ ತಂದಿತ್ತು ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು ಹಿತಮಿತದನುಭವ ಭವವ ಗೆಲಿಸಿತ್ತಯ್ಯ ಸೊಗಲ ಸೋಮೇಶ್ವರ ೨ ಸತ್ಯವಂತರೇ ನುಡಿಯಲಿ ಎಡುವುತಿಹರಯ್ಯ ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ ವಿಚಾರಿಗಳೇ ವಾದದಿ ಕುಯುಕ್ತಿಗಿಳಿದಿಹರಯ್ಯ ದಾರಿತೋರ್ವ ಗುರುವೇ ಬಟ್ಟೆಗೆಟ್ಟಿಹರಯ್ಯ ಪಾಲಿಸಬೇಕಾದವರೇ ನೇಮ ಮುರಿಯುತಿಹರಯ್ಯ ಪೋಷಣೆ ಮಾಡಬೇಕಾದಾವರೇ ಆಪೋಷಿಸುತಿಹರಯ್ಯ ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ ಇಂತ ತನು ಮನ ಧನಗೆಟ್ಟಿಹ ಕಲಿಗಾಲದ ಕೆಸರಲಿ ಸಿಕ್ಕು ಹಲುಬಿ ಭವವ ನೀಗಲು ಒದ್ದಾಡುತಿಹ ಬಡಜೀವವನೆಂತು ಪೊರೆವೆಯಯ್ಯ ಸೊಗಲ ಸೋಮೇಶ್ವರ ೩ ಕಣ್ಸೆಳೆವ ಸೌಂದರ್ಯ ಸೃಜಿಸಿದೆ ಅನುಭವಿಸುವಲ್ಲಿ ಜಿಪುಣನಾಗಿಬಿಟ್ಟೆ ಸುಗಂಧ ಪರಿಮಳವ...

ಶ್ರೀ ಗುರುಭ್ಯೋ ನಮಃ…..ಕವನಗಳು

ಗುರುವಿಗೆ... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ ಬರೀ ಗುಡುಗಿನ ಸದ್ದಡಗಿಸಿದ...

ಟಂಕಾಗಳು

೧ ಭುಗಿಲೆದ್ದಿದೆ ಜಗವು ಭಯದಲಿ ಮಹಾಮಾರಿಯೇ ನೀ ತಂದ ಫಜೀತಿಗೆ ಸಾವೂ ಹೆದರುತಿದೆ ೨ ಒಕ್ಕಲೆದ್ದಿದೆ ನೆಲೆಯು ಸಿಗದಲೆ ಮಾರಿ ಕೊರೋನಾ ಹೆಚ್ಚುವ ಭೀತಿಯಲಿ ಹುಚ್ಚು ಹಿಡಿಯುತಿದೆ ೩ ಭಯಗೊಂಡಿದೆ ಜಗದ ಜನವಿಂದು ಮಾರಿಗೌಷಧಿ ಸಿಗದ ಕಾರಣಕೆ ಸಾವಿಗೆ ಹೆದರಿದೆ ೪ ದಿಕ್ಕುಗಾಣದೆ ಜನ ಕಂಗಾಲಾಗಿದೆ ಸಾವು ನೋವಿನ ಲೆಕ್ಕ ಸಿಗದುದರ ಭಯಕೆ ಬೆದರಿದೆ ೫ ರೋಗ ಮುಕ್ತಿಗೆ ಭವವು ಬಯಸಿದೆ ಕೈ ಮುಗಿಯತ ಮೊರೆಯನಿಡುತಿದೆ ಧರೆಯ ದೇವರಲಿ. ಡಾ.ಗಜಾನಂದ ಸೊಗಲನ್ನವರ ಚಿಕ್ಕಬಾಗೇವಾಡಿ

ಗುರು ಪೂರ್ಣಿಮಾ ಕವನಗಳು

ಗುರುವಿಗೆ... ಗುರುವೇ...ವರಗುರುವೇ... ಮಹಾಗುರುವೇ...ಪರಮಗುರುವೇ...ಸದ್ಗುರುವೇ... ನಿನಗೆ ಶರಣು,ಸಾವಿರದ ಶರಣು.... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ...

ಭೇರ್ಯ ರಾಮಕುಮಾರ್ ಅವರ ಕವನಗಳು

ಒಂದು ಪ್ರೇಮಕಥೆ.. ಹಾರುವ ಹಕ್ಕಿಗೆ ಈಜು ಕಲಿಸಿದವರು ಯಾರು? ಚಿಟ್ಟೆಯ ರೆಕ್ಕೆಗೆ ಸುಂದರ ಚಿತ್ರ ಬರೆದವರು ಯಾರು? ಕೋಗಿಲೆಗೆ 'ಕುಹೂ,ಕುಹೂ' ಹಾಡು ಕಲಿಸಿದವರು ಯಾರು ? ಹರಯದ ಸುಂದರ ಹೃದಯಗಳಿಗೆ, ಪ್ರೀತಿಯ' ಕಾಮನ ಬಿಲ್ಲು' ನೀಡಿದವರ್ಯಾರು??? ಬದುಕಲಿ ಬಂದುದು ಸುಂದರ ಹರಯ ಬಿರುಗಾಳಿಯೂ ಸುಳಿಗಾಳಿ ಮೋಡ-ಕೋಲ್ಮಿಂಚುಗಳೂ ತಂಪೆರೆವ 'ಓಯಸಿಸ್' ಪ್ರಿಯತಮೆಯ ನೋಡಿದಾಗ ನವಿಲು ನಾಟ್ಯವಾಡಿದಂತೆ,ಪನ್ನೀರ ಮಳೆ ಸುರಿದಂತೆ!!! ಕಣ್ಣುಗಳಲ್ಲಿ ಸನ್ನೆ,ತುಟಿಯಂಚಲಿ ಸಿಹಿನಗು, ನುಡಿವ ಮಾತೆಲ್ಲವೂ ಕಾವ್ಯಮಯ, ಎತ್ತ ತಿರುಗಿದರತ್ತ ಕಾಮನಬಿಲ್ಲು, ಪ್ರಿಯನಿಗೆ ಪ್ರಿಯತಮೆಯೇ ಸರ್ವಸ್ವ, ಪ್ರಿಯೆಗೆ ಪ್ರಿಯನ ಸಂಗವೇ ಸುಂದರ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group