ಕವನ
ಮೌನವ ತಬ್ಬಿಕೋ
ಮೌನದೊಡವೆಯಲಿ ಸಿಂಗರಿಸಿಬಿಡು
ಧ್ಯಾನದ ಹೊನಲಲಿ ತೇಲಿಬಿಡು
ಸುಖದ ಉತ್ತುಂಗಕ್ಕೆ ಏರಬಹುದು
ಅಂತರಾಳದ ನೋವಿಗೂ ಕಸಿವಿಸಿಯಾದೀತು.ಜಗದ ಜಂಜಡದ ನಡುವೆ
ಮೋಹದ ಬಲೆ ಸೆಳೆತಕ್ಕೆ
ವ್ಯಾಮೋಹದ ಹಂಗು ತೊರೆಯಲು
ಅಹಂಭಾವ ಗೋಡೆ ಕಳಚೀತು.ಮಾತಿನ ಭರಾಟೆಗೆ ಬೇಸತ್ತು
ಗತ್ತಿನ ನಡೆಯ ಮೂರ್ತರೂಪಕೆ
ಮುತ್ತಿರುವ ಬಯಕೆ ಹತ್ತಿಕ್ಕಲು
ಮೌನವೆಂಬುದು ಅಗಮ್ಯ ಚೇತನವಾದೀತು.ಕರಾಳ ಮುಖ ತಿಳಿಗೊಳಿಸಿ
ನಿರಾಳ ಬದುಕಿನ ಅರ್ಥಕಲ್ಪಿಸಿ
ಸರಳ ಜೀವನಕೆ ಅಡಿಪಾಯ ಹಾಕಲು
ಮಾತಿನ ವಿರಾಮ ಬಲ ನೀಡಿತು.ಅಪ್ಪಿಕೋ ಮೌನ ಧ್ಯಾನವ
ತಪ್ಪಿ ನಡೆಯದಂತೆ ತಡೆಯಲು
ಬಂದುದ...
ಕವನ
ನವ ದುರ್ಗಾ ಸ್ವರೂಪಿಣಿ
ನವ ದುರ್ಗಾ ಅವತಾರ ತಾಳಿ
ಕೂದಲು ಕೆದರಿ ಕುಣಿವಳು ಕಾಳಿ
ಅಸುರರ ಸಂಹರಿಸಲು ನವಶಕ್ತಿಧಾರಿಣಿ
ದೇವಾನು ದೇವತೆಗಳ ಸ್ವರೂಪಿಣಿಶುಂಭ ನಿಶುಂಭ ಸಂಹರಿಸಲು
ಚಂಡ ಮುಂಡರ ಅಹಂಕಾರ ಅಳಿಸಲು
ಭಂಡಾಸುರನ ವಧೆ ಮಾಡಲು
ರಕ್ತ ಬೀಜಾಸುರನ ರಕ್ತ ಕುಡಿಯಲು
ಕಾಳಿ ದುರ್ಗಾವತಾರ ತಾಳಿ, ನಾಲಿಗೆ ಚಾಚಿದಳು
ಮಹಿಷಾಸುರ ಮರ್ದಿನಿ ಇವಳುಸಪ್ತಸತಿ ಪಾರಾಯಣದ ಶ್ರೀದೇವಿ
ಲಲಿತಾ ತ್ರಿಪುರ ಸುಂದರಿ ದೇವಿ
ಖಡ್ಗಮಾಲ ಸ್ತೋತ್ರ ಪಠಿಸಲು
ಲಲಿತಾ ಸಹಸ್ರನಾಮ ಓದಲು
ಭಕ್ತರಿಗೆ ಮೋಕ್ಷ...
ಕವನ
ಮುಂಗಾರಿನ ಮುಗುಳು
ನೋಡಿರೈ ದಿಗಂತದಾಚೆ
ಮಳೆಹನಿ ರತಿರೂಪದೆ
ಬೀಸಿ ಕರೆದಂತೆ ಕೈಚಾಚಿ
ಎನ್ನ ಕವಿಮನಸು ಕರಗುತಿದೆಕಳ್ಳಾಟವಿದೆ ಬಾನಂಚಲಿ
ಮತಿಗೆಟ್ಟ ದಿನಕರನಾವಳಿ
ಕೊಟ್ಟು ಹೊಂಬಣ್ಣ ಹನಿಗೆ
ಇಟ್ಟ ಕವಿಯ ಚಿತ್ತ ತಪಾಸಿಗೆಬಿಸಿಲ್ಗೋಲು ಮೂಡಿದರೆ
ಮೈಮನವೆ ಹಗುರಾದಂತೆ
ನನ್ನೆದೆಯ ಇಂಗಿತಕೆ
ಹೊಸ ಜೀವ ಬಂದಂತೆಮುಂಗಾರಿನ ಮುಗುಳುನಗೆಯ
ಬಲೆಗೆ ಬಿದ್ದಿದೆ ಕವಿಹೃದಯ
ಅರಿವಾಗದನುಭೋಗ ದಾಳಿಗೆ
ಸಿಲುಕಿ ಸಿಹಿ ಸಂಕಟವೆನಗೆಹೇಗೆಂದು ವಿವರಿಸಲಿ
ಯಾರಲ್ಲಿ ಬಣ್ಣಿಸಲಿ
ಮನ್ಮಥನ ಮುಗುಳುಗಣೆ
ಹಿತಭಾವ ವಿಶ್ಲೇಷಣೆನಿಲ್ಲದಿರೆ ಮಳೆಗಾನ
ನಿಶ್ಶಬ್ದ ಬೇಡಿಕೆ
ಕಳೆಯೆ ದುಖ-ದುಮ್ಮಾನ
ಕವಿಯ ಒಡಂಬಡಿಕೆಡಾ.ಭವ್ಯ ಅಶೋಕ ಸಂಪಗಾರ
ಕವನ
ಕನಸು ಕಾಣು
ಕಾಣಬೇಕಿದೆ ಕನಸು
ಇರಲಿ ಒಂದಿಷ್ಟು ಆಸೆ
ನಲಿವ ರಂಗು ತುಂಬಲು
ಬದುಕಿಗೆ ಅರ್ಥ ಬರಲು.ಹಕ್ಕಿಯಂತೆ ಹಾರಲು
ದುಂಬಿಯಂತೆ ಹೀರಲು
ಕೋಗಿಲೆಯ ಧ್ವನಿಯಾಗಲು
ರಾಗ ತಾಳ ಸೇರಲು.ಕನಸು ಹೊತ್ತು
ದಿಟ್ಟ ಹೆಜ್ಜೆ ಇಟ್ಟು
ಭಾವ ಸುಧೆಯ ಹರಿಸಿ
ನೋವ ಸಹಿಸಿ ನುಗ್ಗಲು.ನನಸಾಗುವ ಹವಣಿಕೆಯಲಿ
ಆತುರದ ಉನ್ಮಾದ ಏಕೆ
ಸಮರ ಸಾರುವೇ ಏಕೆ
ಅನವರತ ಕಾಯಕ ನಿಷ್ಠೆ ಸಾಕು.ಕನಸು ಕಂಗಳ ತುಂಬಲಿ
ಹುರುಪು ಉತ್ಸಾಹ ಬೀರಲಿ
ಇರಿಸು ಮುರಿಸು ಆಗದಂತೆ
ನೀತಿ ನೇಮ ಮುರಿಯದಿರಲಿ ಸಾಕು.ಕನಸು ಕಟ್ಟಬೇಕಿದೆ
ಮನಸು...
ಕವನ
ಬರಿದಾದ ಒಡಲು
ಕಿಲಕಿಲ ನಗುವ ಸದ್ದಿಲ್ಲ
ಪುಟ್ಟ ಕರಗಳ ಸ್ಪರ್ಶವಿಲ್ಲ
ಮಡಿಲಲ್ಲಿ ಕಂದನು ಮಲಗಿಲ್ಲ
ಮೈ ಮನಕೆ ಹರ್ಷವಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲುಕೆಮ್ಮಣ್ಣು ತಿನ್ನುವ ಯೋಗವಿಲ್ಲ
ಮಾವಿನಕಾಯಿ ಮೆಲ್ಲುವ ಅದೃಷ್ಟವಿಲ್ಲ
ದೇಹದಿ ಪರಿವರ್ತನೆ ಇಲ್ಲವೇ ಇಲ್ಲ
ಉದರದಿ ಕಂದನ ಒದ್ದಾಟವಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲುಮಗುವಿನ ಅಳುವ ದನಿಯಿಲ್ಲ
ತೊದಲು ನುಡಿಗಳ ಆಲಿಸುವ ಭಾಗ್ಯವಿಲ್ಲ
ಅಂಬೆಗಾಲಿನ ಗೆಜ್ಜೆನಾದದ ಸಂಗೀತವಿಲ್ಲ
ಅಮ್ಮ ಎಂಬ ಅಕ್ಕರೆಯ ಕರೆಯಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲುಅಟ್ಟದಲ್ಲಿ ತೊಟ್ಟಿಲು ಅಣಕಿಸುತ್ತಿತ್ತ
ಜನರ ಕುಹಕಗಳಿಗೆ ಮನವು...
ಕವನ
ಶರಣು ನಿನಗೆ ಸದ್ಗುರು
ಶಿಸ್ತನು ಕಲಿಸಿ,ಅರಿವನು ತುಂಬಿ
ಅರಳಿಸಿ ಮಗುವಲಿ ಪ್ರತಿಭೆಯನು
ಕ್ಷಣ ಪ್ರತಿಕ್ಷಣವೂ ಆತ್ಮಸ್ಥೈರ್ಯವ
ವಿದ್ಯಾರ್ಥಿಗಳಲಿ ತುಂಬುವರುಕಲಿಸುತಲನುದಿನ ವಿದ್ಯೆಯ ನಮಗೆ
ಹರಸುವ ಗುರುವೇ ಹರಿ ಸಮವು
ರಚಿಸಲು ಶಿಷ್ಯರ ಭವ್ಯ ಭವಿಷ್ಯವ
ಹರ ಸಾಹಸವ ಪಡುವವರುಕ್ಲಿಷ್ಟತೆಯನ್ನು ಸರಳೀಕರಿಸುವ
ಚಾಕಚಕ್ಯತೆಯ ಗುಣದಿಂದ
ದಿನಚರಿಯಂತೆ ಆಟ ಪಾಠವ
ಮಾಡುವ ಕ್ರಮವು ಬಲು ಚೆಂದದುಷ್ಟತೆಯಳಿಸಿ ಶಿಷ್ಟಾಚಾರದ
ಅಂಕುರ ಮೂಡಿಸಿ ಸಲಹುವಿರಿ
ಅಷ್ಟಭಾವದಲಿ ಸಾಷ್ಟಾಂಗ ನಮನವ...
ಕವನ
ನುಡಿ ನಮನ
ಅಪ್ಪನಿಗಿಂತಲೂ ಮಿಗಿಲು ನಿಮ್ಮ ಪ್ರೀತಿ
ಅಮ್ಮನಿಗಿಂತಲೂ ಮೇಲು ನಿಮ್ಮ ಕಾಳಜಿಆಗಲೂ ಈಗಲೂ ಮುಂದೆಯೂ ಎಂದಿಗೂ
ಆಗದು ನಿಮ್ಮನ್ನು ಮೀರಿಸಲು ಯಾರಿಗೂಇಹಪರ ಲೋಕದಲಿ ನೀವೇ ಪ್ರಧಾನ
ಇರುವರು ಯಾರು ನಿಮಗೆ ಸಮಾನಈಶ್ವರನ ಪ್ರತಿ ರೂಪವು ನೀವೇ
ಈಶ್ವರಿಯ ಸ್ವರೂಪವೂ ನೀವೇಉತ್ತುಂಗ ಶಿಖರದಲ್ಲಿದೆ ನಿಮ್ಮ ಸ್ಥಾನಮಾನ
ಉಳಿಸಿಕೊಳ್ಳ ಬೇಕಿದೆ ಆ ಅಭಿಮಾನಊರು ಕೇರಿ ಸುತ್ತಿ ಕರೆತರುವಿರಿ ಶಾಲೆಗೆ
ಊರುಗೋಲು ನೀವೇ...
ಕವನ
ಕೂಗಿ ಕರೆಯುತಿದೆ
ಯಾವ ಜನುಮದ ಸ್ನೇಹ ಪ್ರೀತಿ
ಯಾವ ಜನುಮದ ನಂಟೋ ?
ಕೂಗಿ ಕರೆಯುತಿದೆ ಅಂತರಂಗ
ನಿತ್ಯ ನಿರಂತರ ಬಾಳು
ನಿನ್ನ ಬರುವ ಬಯಕೆ
ಭರವಸೆಏನೋ ಗೊತ್ತಿಲ್ಲ ಗೆಳತಿ
ನೀನು ಎಂದಾಗಲೆಲ್ಲ
ಮನದ ಹಕ್ಕಿಯ
ರೆಕ್ಕೆ ಬಿಚ್ಚಿ ಆಗಸಕ್ಕೆ
ಹಾರುತ್ತವೆಜೀವಂತವಾಗಿಡಬೇಕು
ನನ್ನೊಳಗಿನ ನನ್ನನ್ನು
ನಿನ್ನ ನಗೆಯ ಚಿಗುರಿನಲಿ
ವಿರಹ ಭಾವದಲಿ
ಮಿಂಚಿ ಮರೆಯಾದ
ಮೋಡಗಳ ಮಧ್ಯದಲಿ
ಭರವಸೆಯ ಪ್ರೀತಿ
ಹೊಯ್ಯುವ ಮಳೆ
ತಿಂಗಳು ಉರುಳಿದ ಕ್ಷಣ
ಹಸಿರಾಯಿತು...
ಕವನ
ಸಾಂಸ್ಕೃತಿಕ ರಾಯಭಾರಿಬಡವರ ಬಾಳಿನ ವಿದ್ಯಾದಾತರು
ಅನಾಥ ಮಕ್ಕಳ ಪಾಲಿನ ಕಲ್ಪವೃಕ್ಷರು
ಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರು
ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/ಮನುಕುಲೋದ್ಧಾರಕ ಹಿತಚಿಂತಕರು
ಶರಣರ ಸಂದೇಶ ಪರಿಪಾಲಕರು
ದಯೆ ಮಮತೆ ಕರುಣಾ ಸಾಗರರು
ಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/'ಅರಿವೆ ಗುರು' ತತ್ವಾದರ್ಶ ಆರಾಧಕರು
ಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರು
ಸರಳ ಸಾಮಾಜಿಕ ಅಪೂರ್ವ ಸಾಧಕರು
ಕಾಯಕದಲ್ಲಿ ಕೈಲಾಸ ಕಂಡುಂಡವರು/೩/ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರು
ನಿರಾಡಂಬರ ನಿಸ್ವಾರ್ಥಕೆ ದಾರಿದೀಪರು
ಮನುಕುಲದ ವೈರತ್ವ ನಿವಾರಿಸಿಹರು
ವಿದೇಶಗಳಲ್ಲಿ ಸಾಂಸ್ಕೃತಿಕ...
ಕವನ
ಶರಣು ಬೆನಕನೆ ಶತಶತ ವಂದನೆಪಾರ್ವತಿ ನಂದನ ಮೂಷಕ ವಾಹನ
ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕ
ವಿಘ್ನ ನಿವಾರಕ ಸಂಕಷ್ಟ ಹಾರಕ
ಸಾಧು ವಂದಿತ ತ್ರಿಜಗ ಪೂಜಿತಮೊರದಗಲದ ಕಿವಿಯವನೆ ಭಕ್ತರ ಪೊರೆವನೆ
ಪ್ರಣವಸ್ವರೂಪನೆ ಮುನಿಜನ ಪ್ರಿಯನೆ
ಅನುದಿನವು ನಿನ್ನ ಸ್ಮರಣೆ ಭಕ್ತಿಯ ಆರಾಧನೆ
ಆದಿಯಲಿ ನಿನ್ನ ಅರ್ಚನೆ ಸಕಲ ಸುರರಿಂಗೆ ಮಾಧವನೆಕರುಣಾಸಾಗರ ಲಂಬೋದರ ಲಕುಮಿಕರ
ಪಾಶಾಂಕುಶಧರ ನಿನ್ನಯ ಶಕ್ತಿ ಅಪಾರ
ಮಂಗಳ ಮೂರುತಿ ವಿದ್ಯಾ ಅಧಿಪತಿ
ತ್ರಿಲೋಕದಲಿ ತುಂಬಿದೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



