ಸುದ್ದಿಗಳು

ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯ- ರವಿ ಸೋನವಾಲಕರ

ಮೂಡಲಗಿ: ‘ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಪರಿಗಣಿಸದೆ ಕ್ರೀಡಾ ಮನೋಭವ ಮತ್ತು ಶ್ರದ್ಧೆಯಿಂದ ಭಾಗವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ರವಿ ಪಿ. ಸೋನವಾಲಕರ ಹೇಳಿದರು.ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದ  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ...

ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಸಮಗ್ರತೆಯ ರಕ್ಷಣೆಯ ಜವಾಬ್ದಾರಿ ಯುವಜನತೆಯ ಮೇಲಿದೆ – ಡಾ.ಭೇರ್ಯ ರಾಮಕುಮಾರ್

ಭಾರತಕ್ಕೆ ಸ್ವಾತಂತ್ರ ದೊರಕಿಸಲು ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ತಾತ್ಯಾಟೋಪೆ ಮೊದಲಾದವರು ತಮ್ಮ ಜೀವನವನ್ನೇ ತ್ಯಾಗ ಮಾಡಿದರು.ಲಕ್ಷಾಂತರ ಯುವಜನರು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬವೆಲ್ಲವನ್ನೂ ತ್ಯಜಿಸಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹ ಸ್ವಾತಂತ್ರ್ಯ ಹಾಗೂ ಸಮಗ್ರತೆ ರಕ್ಷಿಸಿಕೊಳ್ಳುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ...

ಕಲ್ಲೋಳಿ; ಸೆ.30ಕ್ಕೆ ಜಿಲ್ಲಾ ಮಟ್ಟದ ಕಬ್ಬು, ಅರಿಷಿಣ, ಸೋಯಾಬೀನ್ ಕ್ಷೇತ್ರೋತ್ಸವ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಸವರಾಜ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಸೆ. 30ರಂದು ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ಕಬ್ಬು, ಅರಿಷಿನ ಹಾಗೂ ಸೋಯಾಬಿನ ಬೆಳೆಗಳ ಜಿಲ್ಲಾ ಮಟ್ಟದ...

ಪಿಎಫ್ಐ ನಿಷೇಧಿಸಿದ್ದು ಸ್ವಾಗತಾರ್ಹ ಕ್ರಮ- ಈರಣ್ಣ ಕಡಾಡಿ

ಮೂಡಲಗಿ: ಪಿ.ಎಫ್.ಐ ಸಂಘಟನೆ ಐಸಿಸ್ ನಂಥ ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದು ಮಾತ್ರವಲ್ಲದೇ, ಭವಿಷ್ಯದಲ್ಲಿ ಪಿಎಫ್‍ಐ ನಡೆಸಬಹುದಾಗಿದ್ದ ಭಾರಿ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಅವರು ತೆಗೆದುಕೊಂಡ ಖಡಕ್ ನಿರ್ಧಾರದಿಂದ ದೇಶಾದ್ಯಂತ...

ಕರುನಾಡಿನ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ – ಡಾ. ಬಿರಾದಾರ

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಕೇವಲ ವಿಜ್ಞಾನಿ ಮಾತ್ರವಾಗಿರದೆ ಆರ್ಥಿಕ ತಜ್ಞ, ಸಮಾಜ ಸುಧಾರಣಾವಾದಿ, ಶಿಕ್ಷಣತಜ್ಞ, ಮಾತೃಭಾಷಾ ಪ್ರೇಮಿ ಎಲ್ಲವೂ ಆಗಿದ್ದರು. ಅವರು ಇಂಜಿನಿಯರ್ ಆಗಿ ಕೇವಲ ಕಟ್ಟಡ ಅಣೆಕಟ್ಟುಗಳ ವಿನ್ಯಾಸವನ್ನು ಮಾತ್ರ ಸಿದ್ಧಗೊಳಿಸಿದೆ ಭವಿಷ್ಯದ ಸುಭದ್ರ ಕನ್ನಡ ನಾಡಿನ ಏಳಿಗೆಗೆ ವಿನ್ಯಾಸವನ್ನು ತಳಪಾಯವನ್ನು ಹಾಕಿದರು.  ಆದ್ದರಿಂದ ಕರುನಾಡಿನ  ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಪಾತ್ರ...

ಆರ್ಎಸ್ಎಸ್ ಬ್ಯಾನ್ ಮಾಡಿ ಎನ್ನುವವರನ್ನೇ ಮೊದಲು ಬ್ಯಾನ್ ಮಾಡಬೇಕು – ಎನ್. ರವಿಕುಮಾರ್

ಸಿದ್ಧರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ - ಅರುಣ ಸಿಂಗ್ ಕಲಬುರ್ಗಿ - ದೇಶದಾದ್ಯಂತ PFI ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ PFI ನಿಷೇಧಿಸಿದ್ದು ಸ್ವಾಗತಾರ್ಹ. PFI ಬ್ಯಾನ್ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ಧರು. ಅದು...

ಆಮ್ಲಜನಕದ ಕೊರತೆಯಿಂದ ಬೀದರ್ ನ ವೀರ ಯೋಧನ ಸಾವು; ಬೀದರನಲ್ಲಿ ಅಂತಿಮ ಗೌರವ

ಬೀದರ: ದೇಶದ ಗಡಿ ಭದ್ರತಾ ಪಡೆಯಲ್ಲಿದ್ದ (ಬಿಎಸ್‌ಎಫ್‌) ವೀರ ಯೋಧ ಬೀದರ್ ಜಿಲ್ಲೆಯ ಕಮಲನಗರ್ ತಾಲೂಕಿನ   ಬೆಡಕುಂದಾ ಗ್ರಾಮದ ಯೋಧ ರಾಮದಾಸ ಧನರಾಜ ಚಂದಾಪುರೆ (35) ಅವರು ಜಮ್ಮುಕಾಶ್ಮಿರದ ಗುರೆಜ್‌ ಕಣಿವೆಯಲ್ಲಿ ಆಮ್ಲಜನಕದ ಕೊರತೆಯಿಂದ ಭಾನುವಾರ ಮೃತಪಟ್ಟಿದ್ದಾರೆ.ನಿನ್ನೆ ತಡ ರಾತ್ರಿ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಿದ್ದು ಸಕಲ‌ ಸರಕಾರಿ ಗೌರವದೊಂದಿಗೆ ಇಂದು ಸ್ವಗ್ರಾಮದಲ್ಲಿ ಯೋಧನ‌...

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ ಸರಕಾರ ಅಭಿವೃದ್ಧಿ ನಿಗಮ ಸ್ಥಾಪನೆ  ಮಾಡಬೇಕೆಂದು ಗಾಣಿಗ ಸಮುದಾಯ ಜಗದ್ಗುರು ಕೋಲ್ಹಾರದ  ಶ್ರೀ ಯೋಗಿ ಕಲ್ಲಿನಾಥ ಸ್ವಾಮೀಜಿ ಆಗ್ರಹಿಸಿರು.ಅವರು ಮೂಡಲಗಿ ಪಟ್ಟಣದ ಶ್ರೀ ಜ್ಯೋತಿ ಅರ್ಬನ್ ಸೋಸಾಯಿಟಿಯಲ್ಲಿ...

ವೈಜ್ಞಾನಿಕವಾಗಿ ಯೋಚಿಸುವುದು, ಕಾರ್ಯಮಾಡುವುದು ಹಾಗೂ ಬದುಕುವುದೇ ವೈಜ್ಞಾನಿಕ ಮನೋಭಾವ: ಎಸ್. ವಿ. ಸಂಕನೂರ

ದೇಶದ ಸಂವಿಧಾನದಲ್ಲಿ ತಿಳಿಸಿರುವಂತೆ ದೇಶದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಹೊಂದಬೇಕು. ಯಾಕೆ ಮತ್ತು ಹೇಗೆ ಎಂದು ಪ್ರಶ್ನಿಸುತ್ತಾ, ಮಾನವೀಯತೆಯೊಂದಿಗೆ ವೈಚಾರಿಕ ಮನೋಭಾವ ಅಳವಡಿಸಿಕೊಂಡು ಎಲ್ಲರೂ ಬದುಕಬೇಕು. ದೇಶದಲ್ಲಿನ ಬಡತನ, ನಿರುದ್ಯೋಗ, ಆರೋಗ್ಯ ಸೇರಿದಂತೆ ಇತರೆ ಸಮಮಸ್ಯೆಗಳಿಗೆ ಪರಿಹಾರ ವಿಜ್ಞಾನ ತಂತ್ರಜ್ಞಾನ ಹಾಗೂ ಸಂಶೋಧನೆಯಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್....

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು.ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸವದತ್ತಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಮಹೇಶ ಚಿತ್ತರಗಿ ಹುಬ್ಬಳ್ಳಿ ಮನೋವಿಕಾಸ ವಿಕಲಚೇತನರ ಪುನರ್ವಸತಿ ಕೇಂದ್ರದ ಮನೋವೈದ್ಯರಾದ ಡಾಃ ಜಿ.ಕೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group