ಬೀದರ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಸಂಭ್ರಮದ ಆಯುಧ ಪೂಜೆ

Must Read

ಬೀದರ – ಬೀದರ್ ಜಿಲ್ಲೆಯಾದ್ಯಂತ ಇಂದು ಪೊಲೀಸ್ ಇಲಾಖೆಯಲ್ಲಿ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸಲಾಯಿತು.

ಪೊಲೀಸ್ ಇಲಾಖೆ ಅಂದರೆ ಜನರಲ್ಲಿ ಭಯದ ವಾತಾವರಣ ಇರುತ್ತದೆ.ಗಡಿ ಜಿಲ್ಲೆಯ ಪೊಲೀಸ್ ಇಲಾಖೆ ನಾವು ಕೂಡ ಮನುಷ್ಯರು ನಮ್ಮಲ್ಲಿ ಕೂಡ ಮನಸ್ಸು, ಮನುಷ್ಯತ್ವ ಎಂಬುದನ್ನು ಇಲಾಖೆ ಸಾಬೀತು ಮಾಡಿ ತೋರಿಸಿದೆ. ದಸರಾ ಸಂದರ್ಭದಲ್ಲಿ ಆಯುಧ ಪೂಜೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಣ್ಣು ಮಕ್ಕಳು, ಪಿಎಸ್ ಐ ಮತ್ತು ಸಿಬ್ಬಂದಿಗಳ ಒಂದು ಪೊಲೀಸ್ ಠಾಣೆಯಲ್ಲಿ ಒಂದು ರೀತಿ ಡ್ರೆಸ್ ಹಾಕಿ ಜನರ ಗಮನಸೆಳೆಯುವ ರೀತಿಯಲ್ಲಿ ಹಾಕಿದ್ದರು. ಪೊಲೀಸ್ ಠಾಣೆ ಮಹಿಳಾ ಪಿಎಸ್ ಐ ಸಂಗೀತ ಬಗದಲ್ ಪೊಲೀಸ್ ಠಾಣೆ ಅಧಿಕಾರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆ ಸುವರ್ಣ ಪಿಎಸ್ ಐ ಸಾಂಪ್ರದಾಯಿಕ ಸಾರಿಯಲ್ಲಿ ಗಮನ ಸೆಳೆದರು ಹಾಗೂ ಪುರುಷ ಪಿಎಸ್ಐ ನಾವು ಏನು ಕಡಿಮೆ ಎಂದು ಅವರು ಕೂಡ ನರೇಂದ್ರ ಮೋದಿ ಕೋಟು ಹಾಕಿ ಗಮನ ಸೆಳೆದರು.

ಹುಮನಬಾದ ಪೊಲೀಸ್ ಠಾಣೆ ರವಿ ಇತರ ಬೀದರ್ ಜಿಲ್ಲೆ ಪೋಲಿಸ್ ಠಾಣೆ ಯಲ್ಲಿ ಹಬ್ಬದ ವಾತಾವರಣ. ಆಯುಧ ಪೂಜೆ ಹಿನ್ನೆಲೆಯಲ್ಲಿ ಸಮವಸ್ತ್ರ ಧರಿಸಿ, ಗಮನಸೆಳೆದ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿ-ಸಿಬ್ಬಂದಿ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಒಂದೇ ಮಾದರಿ ಸಮವಸ್ತ್ರ ಧರಿಸಿ, ಗಮನಸೆಳೆದರು.

ಖಾಸಗಿ ಸಮವಸ್ತ್ರ ಸಮೇತ ಆಯುಧ ಪೂಜೆ ನೆರವೇರಿಸಿದ ಬಳಿಕ ಡಿವೈಎಸ್ಪಿ ಸತೀಶ, ಸಿಪಿಐ ಶ್ರೀಕಾಂತ್ ಅಲಾಪೂರೆ, ಕೂನೂನು ಸುವ್ಯವಸ್ಥೆ ಸಂಗೀತ ಮತ್ತು ಪಿಎಸ್ಐ ಸುವರ್ಣ, ಮತ್ತು ಠಾಣೆ ಎ.ಎಸ್.ಐ ಗಳು ಹಾಗೂ ಮಹಿಳಾ ಮತ್ತು ಪುರುಷ ಸಿಬ್ಬಂದಿ ಹಾಗೂ ಚಿಣ್ಣರು ಈ ವೇಳೆ ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group