ಗಡಿ ಜಿಲ್ಲೆ ಬೀದರ್ ನಲ್ಲಿ ೬೭ನೇಯ ಕನ್ನಡ ರಾಜ್ಯೋತ್ಸವದ ಸಂಭ್ರಮ

Must Read

ಬೀದರ – ಗಡಿ ಜಿಲ್ಲೆಯಾದ ಬೀದರನಲ್ಲಿ ೬೭ ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬೀದರ್ ನ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಧ್ವಜಾರೋಹಣ ನೆರವೇರಿಸಿ ಬಳಿಕ ಗೌರವ ವಂದನೆ ಸ್ವೀಕರಿಸಿದರು.

ವಿವಿಧ ಪೊಲೀಸ್ ತುಕಡಿಗಳಿಂದ ಕವಾಯತ್ತು ನಡೆದವು. ಕನ್ನಡದ ತೇರು ಸೇರಿದಂತೆ ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಿತು ಆದರೆಜಿಲ್ಲೆಯಲ್ಲಿ ಮೂವರು ಸಚಿವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ,  ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಗೈರಾದ ಸಚಿವರು ಶಾಸಕ ರಹೀಂಖಾನ್, ಎಂಎಲ್ಸಿ ಅರವಿಂದ ಅರಳಿ ಸೇರಿದಂತೆ ಹಲವರು ಭಾಗಿಯಾದರು.

ಕನ್ನಡ ರಾಜ್ಯೋತ್ಸವ ವಿನೂತನ ರೀತಿ ಆಚರಣೆ:

ಈ ಮಧ್ಯೆ  ಹುಮನಾಬಾದ್ ನಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಅಟೋದಲ್ಲಿ ಸಂಚರಿಸುವ ಮೂಲಕ ಆಚರಣೆ ಮಾಡಿದರು.

ಹುಮನಾಬಾದ ನಗರದಾದ್ಯಂತ ಅಟೋದಲ್ಲಿ ಸಂಚರಿಸಿದ ಶಾಸಕರು.ಆಟೋ ಕ್ಕೆ ಬಲೂನ್ ಹಚ್ಚಿ ಅಲಂಕಾರ ಮಾಡಲಾಗಿತ್ತು. ಕನ್ನಡ ಅಭಿಮಾನಿಗಳು ಬೈಕ್ ಮುಖಾಂತರ ಶಾಸಕರ ಜೊತೆ ಸಂಚಾರ ಮಾಡಿದರು.

ವರದಿ: ನಂದಕುಮಾರ ಕರಂಜೆ, ಬೀದರ

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group