ಕನ್ನಡಪರ ಚಿಂತಕರಾಗಿದ್ದ ಚಂದ್ರಶೇಖರ ಪಾಟೀಲರು ನಮ್ಮಿಂದ ದೂರವಾಗಿದ್ದಾರೆ ಬಿಟ್ಟೂ ಬಿಡದ ನೋವು ಕಾಡುತ್ತಿದೆ. 1996 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನನ್ನನ್ನು ಜಾಗೃತ ಸಮಿತಿಯ ಸದಸ್ಯರನ್ನಾಗಿ ನೇಮಿಸಿದರು ಮುಂದೆ ಚಂಪಾ ಅವರ ಕಾಗೆ ಬಳಗದ ಸದಸ್ಯನಾಗಿ ಸಾಗುತ್ತಾ ಸಂಕ್ರಮಣ ಪತ್ರಿಕೆಯೊಂದಿಗೆ ಸಂಬಂಧ ಬೆಳೆಯಿತು.
ಚಂಪಾ ಅವರು ಕಸಾಪ ಅಧ್ಯಕ್ಷರಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ ಎ ನಾರಾಯಣ ಗೌಡರ ಹೋರಾಟಗಳಿಗೆ ಕಾರ್ಯಕ್ರಮಗಳಿಗೆ ಚಂಪಾ ಅವರನ್ನು ಕರೆದುಕೊಂಡು ಬರುವ ಸುಯೋಗ ನನಗೆ ದೊರೆಯುತ್ತಿತ್ತು. ಕರವೇಯೊಂದಿಗೆ ಕರುಳುಬಳ್ಳಿಯ ಸಂಬಂಧ ಎಂದೇ ಹೇಳುತ್ತಿದ್ದರು ಕಾವೇರಿ ಹೋರಾಟದ ಮೂಲಕ ಬಳ್ಳಾರಿ ಜೈಲುವಾಸವು ಸಹ ಚಂಪಾ ಅವರ ಜೊತೆಯಲ್ಲಿಯೇ ಇರುವ ಸುಯೋಗ ದೊರೆಯಿತು.
ಚಂಪಾ ಅವರ ಹುಟ್ಟುಹಬ್ಬ ಮುಂದೆ ಸಂಕ್ರಮಣ 50 ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾಗಿ ಅವರ ಕುರಿತು ‘ಆಜುಬಾಜು’ ಪುಸ್ತಕವನ್ನು ನಾನು ಹೊರ ತಂದೆ ಅವರ ಅನೇಕ ಸಂಘಟನೆಗಳಲ್ಲಿ ನನಗೆ ಪ್ರಮುಖ ಪಾತ್ರ ವಹಿಸುವ ಅದೃಷ್ಟವು ದೊರೆಯಿತು ಕನ್ನಡಪರ ಸಂಘಟನೆಗಳ ಕೂಟ ದ ಪ್ರಧಾನ ಕಾರ್ಯದರ್ಶಿಯಾಗಿ ಮುಂದೆ ಬಂದೆ ಹೀಗೆ ಚಂಪಾ ಬಳಗದ ಸದಸ್ಯ ಎಂದು ಹೇಳಿಕೊಳ್ಳುವ ಅದೃಷ್ಟ ನನ್ನದು.
ಕಸಾಪ ಚುನಾವಣೆಯಲ್ಲಿ ನಾಡೋಜ ಡಾ ಮಹೇಶ್ ಜೋಶಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಜೊತೆಗೆ ನನಗೂ ಕೂಡ ಕಾಲು ಶತಮಾನದ ಸಂಬಂಧ ದೂರವಾಯಿತು. ಚಂಪಾ ಅವರ ನೆನಪು ನನ್ನೊಂದಿಗೆ ಸದಾ ಇರುತ್ತದೆ ಗುರುಗಳ ಆಶೀರ್ವಾದ ಎಲ್ಲರಿಗೂ ಸಿಗಲಿ.
ನೇ. ಭ. ರಾಮಲಿಂಗ ಶೆಟ್ಟಿ
ಗೌರವ ಕಾರ್ಯದರ್ಶಿ,
ಕನ್ನಡ ಸಾಹಿತ್ಯ ಪರಿಷತ್ತು