spot_img
spot_img

ಚಿತ್ತರಗಿ ಗುರು ಮುಪ್ಪಿನ ಸ್ವಾಮಿ ಮಠದ ರಥೋತ್ಸವ

Must Read

- Advertisement -

ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಕಾಶಿ ಪೀಠದ ಶಾಖಾಮಠದ ಗುರು ಮುಪ್ಪಿನ ಸಾಮಿ ಮಠದ 18ನೇ ಮಹಾರಥೋತ್ಸವ 9.03.2024 ಶನಿವಾರ ಸಾಯಂಕಾಲ  ಸಕಲ ವಾದ್ಯ ಮೇಳದೊಂದಿಗೆ ಜರುಗಿತು. ರಥೋತ್ಸವಕ್ಕೂ ಪೂರ್ವದಲ್ಲಿ ಚಿಕ್ಕ ಮ್ಯಾಗೇರಿಯ ಹುನಗುಂದ ಮನೆತನದ ಬಂಧುಗಳು ಹಾಗೂ ಸಕಲ ಸದ್ಭಕ್ತರ ಕಳಸದ ಸೇವೆ ಚಿಕ್ಕಮಾಗಿ ಗ್ರಾಮದ ಪಾಟೀಲ ಹಾಗೂ ಗೌಡರ ಬಂಧುಗಳ ಹಾಗೂ ಸಕಲ ಸದ್ಭಕ್ತರ ಹಗ್ಗದ ಸೇವೆ ಪಂಚಾಕ್ಷರಯ್ಯ ಸಂಗಯ್ಯ ಹಿರೇಮಠ ಸಂಗನಬಸಯ್ಯ ಮುರುಗಯ್ಯ ಹಿರೇಮಠ ಸಿದ್ದಯ್ಯ ಮುರುಗಯ್ಯ ಹಿರೇಮಠ ಪರಯ್ಯ ಅಣ್ಣಯ್ಯ ಹಿರೇಮಠ ಕೊಳುರ ಇವರ ಬಾಳೆ ಕಂಬದ ಸೇವೆ  ಗಂಗಾವತಿ ವರ್ತಕರಾದ ರುದ್ರಪ್ಪನವರು ಗಾಳಿ ಯವರ ಕಾಣಿಕೆ ಹೂವಿನ ಮಾಲೆ ಆಗಮಿಸಿದ ನಂತರ ಹಗ್ಗವನ್ನು ಎಳೆಯುವುದರ ಮೂಲಕ ಸಕಲವಾದ ಮೇಳದೊಂದಿಗೆ  ರಥೋತ್ಸವಕ್ಕೆ ಕಸಬಾ ಜಂಬಿಗಿಯ ರುದ್ರಮುನಿ ಶ್ರೀಗಳು   ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ರುದ್ರಮುನಿ ಶ್ರೀಗಳು ಕೂಡಲಸಂಗಮ ಜಾತವೇದ ಮುನಿ ಶ್ರೀಗಳು ಬಿಲ್ ಕೆಲೂರ್ ಸಿದ್ದಲಿಂಗ ಶ್ರೀಗಳು ಮುಳ್ಳೂರು ಚಂದ್ರಶೇಖರ ಶ್ರೀಗಳು ಕಲಾದಗಿ ಮಹಾಂತ ದೇವರು ಮುತ್ತತ್ತಿ ವೀರ ರುದ್ರಮುನಿ ಶ್ರೀಗಳು ಕಮತಿಗಿಯ ಶಿವಕುಮಾರ ಶ್ರೀಗಳು ಹುನಗುಂದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಿವಕುಮಾರ್ ಗಂಗಾಧರ ಶಾಸ್ತ್ರಿಗಳು ಹಿರೇಮಠ, ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ ಚಿತ್ತರಗಿ ಗ್ರಾಮ ಪಂಚಾಯತಿ ಅಧ್ಯಕ್ಷ  ಮಹಾಂತೇಶ ಬಾರಡ್ಡಿ ಉಪಾಧ್ಯಕ್ಷೆ ಅಕ್ಕಮಹಾದೇವಿ ಗಿರೀಶ ಪೂಜಾರಿ ಹಾಗೂ ಸದಸ್ಯರು ಸೇರಿದಂತೆ ಚಿತ್ತರಗಿ ಗ್ರಾಮದ ಗುರುಹಿರಿಯರು ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಜಾತ್ರೆಯ ನಿಮಿತ್ತ 8 3 2024ರಂದು ಶುಕ್ರವಾರ ರಾತ್ರಿ ಶಿವ ಭಜನೆ ನಡೆಯಿತು 9ರಂದು ಶನಿವಾರ ಬೆಳಿಗ್ಗೆ ಕರ್ತೃ ಗದ್ದಿಗೆಗೆ ರುದ್ರಭಿಷೇಕ ಹಾಗೂ ಅಯ್ಯಾಚಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ ಹಾಗೂ ಜಾತ್ರೆಯ ನಿಮಿತ್ತ ವಚನ ಸಂಗೀತ ಕಾರ್ಯಕ್ರಮ ಬಾಗಲಕೋಟೆಯ ಶ್ರೀ ಗುರು ಪಂಚಾಕ್ಷರ ಸಂಗೀತ ಶಾಲೆ ಯವರಿಂದ ನಡೆಯಿತು ಜಾತ್ರಾ ಮಹೋತ್ಸವದಲ್ಲಿ ಗುರು ಮುಪ್ಪಿನ ಸಾಮಿ ಮಠ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಎಂ ಎನ್ ಬಾವಿಮಠ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ವಿಜಯ ಮಹಾಂತೇಶ್ವರ ಮಠ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಹಾಗೂ ತಿಮ್ಮಾಪುರ ಸೇರಿದಂತೆ ಗಂಗೂರ್ ಚಿಕ್ಕಮಗಿ   ಪಾಪನಾಳ ಹಿರೇಮಳಗಾವಿ ಹಡಗಲಿ ಕಿರುಸೂರ ಗ್ರಾಮಗಳ ಸಕಲ ಸದ್ಭಕ್ತರು ಭಾಗವಹಿಸಿದ್ದರು.

ರಥೋತ್ಸವಕ್ಕೂ ಪೂರ್ವದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜಯಾನಂದ ಕಾಶಪ್ಪನವರ ಹಾಗೂ ಜಾತ್ರಾ ಮಹೋತ್ಸವಕ್ಕೆ ದಾಸೋಹ ಸೇವೆಗೆ ಗೈದ ನಾಲತವಾಡದ  ರಾಯನಗೌಡ ಮ ತಾತರೆಡ್ಡಿ, ಗಂಗಾವತಿಯ ವರ್ತಕ ರುದ್ರಪ್ಪನವರು ಗಾಳಿ ಯವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group