ಬೆಳಗಾವಿ – ಶುಕ್ರವಾರ ದಿ 25 ರಂದು ಮ.3:00 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಿ. ರಾಜಶೇಖರ ಕಿತ್ತೂರ, ದಿ. ಕಾಶವ್ವ ಹಾಗೂ ದಿ ಮುರಿಗೆಪ್ಪ ಬುರಲಿ ,ದಿ. ವಿಶ್ವನಾಥ ಬೆಲ್ಲದ, ದಿ.ಪಾರ್ವತಿ ಪಾಟೀಲ, ದಿ. ಮಲ್ಲವ್ವ ಪಾಟೀಲ ಹಾಗೂ ದಿ. ಬಾಬುರಾವ ದೇಸಾಯಿ ಇವರ ಸ್ಮರಣಾರ್ಥ ವಾಗಿ ಇವರ ಕುಟುಂಬಸ್ಥರು ಇಟ್ಟಿರುವ ದತ್ತಿನಿಧಿ ಯಲ್ಲಿ ‘ದತ್ತಿ ಕಾರ್ಯಕ್ರಮ’ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ವಹಿಸಲಿದ್ದು, ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಆಶಯ ನುಡಿಗಳನನ್ನಾಡಲಿದ್ದಾರೆ.
ಜಾನಪದ ಕಲಾವಿದೆ ಕಲಾವತಿ ಡೋಣವಾಡಿ ರವರಿಂದ ಜಾನಪದ ಹಾಡುಗಳ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದಲ್ಲಿ ದತ್ತಿನಿಧಿ ದಾನಿಗಳಾದ ಸುಮಾ ಕಿತ್ತೂರ, ಸುನಂದಾ ಎಮ್ಮಿ, ರತ್ನಪ್ರಭಾ ಬೆಲ್ಲದ, ಆಶಾ ಪಾಟೀಲ ಭಾಗವಹಿಸಲಿದ್ದು ಸಾಹಿತ್ಯಾಸಕ್ತರು, ಜಾನಪದ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಘದ ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.