ಸಿಂದಗಿ; ಇಡೀ ರಾಜ್ಯದಲ್ಲಿ ರೈತರ ಕಬ್ಬು ಕಾರ್ಖಾನೆಗಳಿಗೆ ರವಾನಿಸಲಾಗುತ್ತಿದೆ ಆದರೆ ಕೆಲವು ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸವಾಗುತ್ತಿದೆ ಎಂದು ರೈತರಿಂದ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ ಅದಕ್ಕೆ ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ವೇಬ್ರಿಡ್ ಗಳಲ್ಲಿ ಉಚಿತವಾಗಿ ತೂಕ ದ ವ್ಯವಸ್ಥೆ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ ಅದನ್ನು ಅಳವಡಿಸಲು ಕಾರ್ಯದರ್ಶಿಗಳು ನಿರ್ಲಕ್ಷ ತೋರುತ್ತಿದ್ದಾರೆ ಕೂಡಲೇ ಕ್ರಮ ಜರುಗಿಸುತ್ತೇನೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ದಿಢೀರನೇ ಭೇಟಿ ನೀಡಿ ವೇ ಬ್ರೀಜ್ ಪರಿಶೀಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇಡೀ ರಾಜ್ಯದ ಕಾರ್ಖಾನೆಯ ಮಾಲಿಕರಿಗರ ಎಲೆಕ್ಟ್ರಿಕಲ್ ತೂಕ ಅಳವಡಿಸುವಂತೆ ನಿರ್ದೇಶನ ನೀಡಲಾಗಿದ್ದು ಆದರೆ ಬೆಳಗಾವಿ, ಬಾಗಲಕೋಟ, ವಿಜಯಪುರ ಜಿಲ್ಲೆಯ ಕೆಲವು ಕಾರ್ಖಾನೆಗಳು ಕ್ರಮ ವಹಿಸಿಲ್ಲ ಅದಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರು ಮಾರುಕಟ್ಟೆಗಳಿಗೆ ತರುವ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಪಡೆಯುವಂತೆ ಕ್ರಮವಹಿಸುವುದು ಇಲಾಖೆಯ ಪ್ರಮುಖ ಧ್ಯೇಯೋದ್ದೇಶಗಳಲ್ಲೊಂದಾಗಿದೆ. ರೈತರು ಮಾರುಕಟ್ಟೆಗಳಿಗೆ ತರುವ ಕೃಷಿ ಉತ್ಪನ್ನಗಳಿಗೆ ನಿಖರವಾದ ತೂಕ ಮತ್ತು ಮೌಲ್ಯ ನಿರ್ಧರಣೆಯಲ್ಲಿ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಕಳೆದ 2023 ಡಿ.22 ರಂದು ರಾಜ್ಯದ ಎಲ್ಲ ಎಪಿಎಂಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದ್ದರು ಕೂಡಾ ಸಿಂದಗಿಯ ಕಾರ್ಯದರ್ಶಿ ಯಾವುದೇ ಕಾರ್ಯ ಮಾಡದೇ ಬೇಜವಾಬ್ದಾರಿತನ ತಾಳಿದ್ದು ಕಂಡು ಬಂದಿದ್ದು ಕೂಡಲೇ ಅಮಾನತ್ತು ಮಾಡಲಾಗಿದೆ ಎಂದರು.
ರೈತರ ವೇ ಬ್ರೀಜ್ ಮೂಲಕ ತೂಕ ಮಾಡಿಸಿ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಕಂಡುಬಂದಲ್ಲಿ ನೇರವಾಗಿ ಸಕ್ಕರೆ ಇಲಾಖೆಗೆ ದೂರು ಸಲ್ಲಿಸಿದರೆ ಅಂತಹ ಕಾರ್ಖಾನೆಗಳ ಲೈಸನ್ಸಗಳನ್ನು ರದ್ದುಗೊಳಿಸಿ ರೈತರಿಗೆ ನ್ಯಾಯ ಒದಗಿಸಿಕೊಡಲಾಗುವುದು ಅಲ್ಲದೆ ಈ ನಿಯಮಾವಳಿಗೆ ಟ್ಯಾಕ್ಟರ ಮಾಲೀಕರು ಸ್ಪಂದಿಸಬೇಕು ಅವರಿಗೆ ಕಾರ್ಖಾನೆ ಮಾಲೀಕರಿಂದ ಕಿರಕುಳ ನಡೆಸಿದ್ದು ದೂರು ಸಲ್ಲಿಸಿದರೆ ಅಂತಹ ಕಾರ್ಖಾನೆ ವಿರುದ್ಧ ಕ್ರಮ ಜರುಗಿಸಲು ಇಲಾಖೆ ಸಿದ್ಧವಿದೆ ಕಾರಣ ಶಾಸಕರು ಮಾರುಕಟ್ಟೆಯ ಸುಧಾರಣೆಗಾಗಿ ಹಾಕಿದ ಅನುದಾನ ಬಳಕೆ ಮಾಡಿಕೊಂಡು ಕ್ರಮ ವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಅವರಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಎಪಿಎಂಸಿ ಮಾಜಿ ನಿರ್ದೇಶಕ ಶಾಂತವೀರ ಬಿರಾದಾರ ಇದ್ದರು.