ಮೂಡಲಗಿ: ಹಿಂದೂ ಹೃದಯ ಸಾಮ್ರಾಟ, ಹಿಂದವಿ ಸ್ವರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮೂಡಲಗಿ ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತೊಟ್ಟಿಲಲ್ಲಿ ಹಾಕಿ ಹೆಂಗಳೆಯರು, ಮಕ್ಕಳು ಹಾಡು ಹಾಡುತ್ತ ಸಡಗರ ಸಂಭ್ರಮದಿಂದ ತೊಟ್ಟಿಲು ತೂಗಿ ಶಿವಾಜಿ ಜಯಂತಿಗೆ ಕಳೆ ತಂದುಕೊಟ್ಟರು.
ಈ ಸಂದರ್ಭದಲ್ಲಿ ಕೃಷ್ಣಾ ಇಂಗಳೆ, ಗೋವಿಂದ ತೋರಸ್ಕರ, ಶಿವಾಜಿ ಜಾಧವ, ಕಲ್ಮೇಶ ಇಂಗಳೆ, ಸಾಗರ ಇಂಗಳೆ, ಸುಪುತ್ರಾ ತೋರಸ್ಕರ, ಶೋಭಾ ಇಂಗಳೆ, ಅನೇಕರು ಹಾಜರಿದ್ದರು.