ಮುಧೋಳ – ಹಳಿ ತಪ್ಪುತ್ತಿರುವ ಸಮಾಜವನ್ನು ಧರ್ಮಬೋಧನೆಯಿಂದ ಒಗ್ಗೂಡಿಸುವ ಮಹಾ ಕಾರ್ಯವೇ ಮಠಾಧೀಶರದ್ದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನವೆಂಬರ್ 26 ಭಾರತ ಸಂವಿಧಾನ ದಿನದ ಶುಭಾಶಯಗಳನ್ನು ಕೋರುತ್ತಾ ಮಾತನಾಡಿದ ಅವರು ಡಾ. ಬಿ.ಆರ್ .ಅಂಬೇಡ್ಕರ್ ಅವರು ಬಸವಣ್ಣನ ಇನ್ನೊಂದು ಅವತಾರವೆಂದರು. ಜಗದ್ಗುರು ಬಸವಣ್ಣನವರ ಸಂವಿಧಾನದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಎಲ್ಲರನ್ನೂ ಪ್ರೀತಿಸುವುದು. ಎಲ್ಲರೂ ನನ್ನವರೆಂದು ಹೇಳಿಕೊಳ್ಳುವ ತತ್ವ ಅದರಲ್ಲಿ ಅಡಗಿದೆ. ಇವತ್ತು ಬಾಯಲ್ಲಿ ಬೆಣ್ಣೆ .ಕೈಯಲ್ಲಿ ದೊಣ್ಣೆ ಎಂಬಂತೆ ನಮ್ಮೆಲ್ಲರ ಕಾರ್ಯಗಳು. ಶರಣರ ಸಂತರ ಪಂಕ್ತಿಯಲ್ಲಿ ನಡೆಯುವರು ಜಾತಿ ಮತಗಳನ್ನು ತೊರೆದು ಸಮಾಜವನ್ನು ಒಗ್ಗೂಡಿಸುವ ಕೆಲಸವೇ ನಮ್ಮ ಬದುಕಿನ ಗುರಿಯಾಗಬೇಕು. ಇಂದಿನ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಮುತ್ಸದ್ದಿ ರಾಜಕಾರಣಿಗಳಿದ್ದಾರೆ. ಹಾಗಾಗಿ ಮಠಾಧೀಶರಾದಂತವರು ರಾಜಕಾರಣದಲ್ಲಿ ಪ್ರವೇಶ ಮಾಡುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಇದು ಖಂಡನೀಯ ಎಂದರು

