spot_img
spot_img

ಮಕ್ಕಳು ದೇಶದ ಭವಿಷ್ಯದ ರೂವಾರಿಗಳು – ಶಿಶು ಅಭಿವೃದ್ಧಿ ಅಧಿಕಾರಿ ಗದಾಡಿ

Must Read

spot_img
- Advertisement -

ಮೂಡಲಗಿ: ‘ಮಕ್ಕಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯಲ್ಲಿ ಆರು ವರ್ಷಗಳ ಪೂರ್ವದ ಅವಧಿಯು ಮಹತ್ವದಾಗಿದೆ’ ಎಂದು ಮೂಡಲಗಿ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ ಹೇಳಿದರು.

ಇಲ್ಲಿಯ ಲಕ್ಷ್ಮಿ ನಗರದ ಬಿಇಒ ಕಚೇರಿಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ನಿಸರ್ಗ ಫೌಂಡೇಶನದವರು ಕಾಣಿಕೆ ನೀಡಿರುವ ಮಕ್ಕಳ ಆಟಿಕೆಗಳು, ಖುರ್ಚಿಗಳು, ಮಕ್ಕಳ ಸಮವಸ್ತ್ರ ಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಬಾಲ್ಯದ ಅವಧಿಯಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ದೇಶದ ಭವಿಷ್ಯದ ರೂವಾರಿಗಳನ್ನು ರೂಪಿಸುವುದು ಅವಶ್ಯವಿದೆ ಎಂದರು.

ಈರಪ್ಪ ಢವಳೇಶ್ವರ ಮಾತನಾಡಿ, ಜನರ ಸಹಕಾರ ಮತ್ತು ಸರ್ಕಾರಿ ಇಲಾಖೆಗಳ ಸಹಕಾರದಿಂದ ಮತ್ತು ನಿಸರ್ಗ ಫೌಂಡೇಶನದದ ಸದಸ್ಯರ ಸಹಾಯದಿಂದ ಸಸಿ ನೆಡುವಲಿಕ್ಕೆ ಸಾಧ್ಯವಾಗಿದ್ದು, ಈಗಾಗಲೇ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸಿರುವ ತೃಪ್ತಿ ಇದೆ ಎಂದರು.

- Advertisement -

ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ದೇಶದ ಭವಿಷ್ಯದ ಚಿಗುರು ಅಂಗನವಾಡಿ ಕೇಂದ್ರದಿಂದ ಪ್ರಾರಂಭಗೊಳ್ಳುತ್ತದೆ. ಮಕ್ಕಳ ಬೆಳವಣಿಗೆಗೆ ಪ್ರಾಮುಖ್ಯ ನೀಡುವುದು ಅವಶ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಹಶೀಲ್ದಾರ್ ಶಿವಾನಂದ ಬಬಲಿ ಹಾಗೂ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಅವರು ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಸಿಗೆ ನೀರುಣಿಸಿ ಪರಿಸರ ಆಂದೋಲನಕ್ಕೆ ಚಾಲನೆ ನೀಡಿದರು.

ಈರಪ್ಪ ಢವಳೇಶ್ವರ ಅವರ ಪುತ್ರಿ ಸಾಧ್ವಿಯ ೯ನೇ ವರ್ಷದ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸಿದರು.
ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸಿಇಒ ಎಫ್.ಜಿ. ಚಿನ್ನನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಅಜ್ಜಪ್ಪ ಅಕ್ಕನ್ನವರ ಹನಮಂತ ಪ್ಯಾಟಿಗೌಡರ, ಮಾರುತಿ ಹಡಪದ, ಹಣಮಂತ ಗುಡ್ಲಮನಿ, ಕೃಷ್ಣಾ ಗಿರೆಣ್ಣವರ, ಸಂಜು ಕಮತೆ, ಸಂತೋಷ ಕಲಾಲ, ಶ್ರೀಧರ ಉಡುಪಿ, ರಾಘವೇಂದ್ರ ದಳವಾಯಿ, ಗುರು ಗಂಗಣ್ಣವರ, ಮಲ್ಲು ಬೋಳನ್ನವರ, ಸುಭಾಷ ಗೊಡ್ಯಾಗೊಳ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -

More Articles Like This

- Advertisement -
close
error: Content is protected !!
Join WhatsApp Group