Homeಸುದ್ದಿಗಳುಮಕ್ಕಳು ಪಾಲಕರ ಹಾಗೂ ಗುರುಗಳ ಮಾತು ಪಾಲಿಸಬೇಕು - ಪಿಎಸ್ಐ ಬಿರಾದಾರ

ಮಕ್ಕಳು ಪಾಲಕರ ಹಾಗೂ ಗುರುಗಳ ಮಾತು ಪಾಲಿಸಬೇಕು – ಪಿಎಸ್ಐ ಬಿರಾದಾರ

ಸಿಂದಗಿ: ಇಂದಿನ ಮಕ್ಕಳೆ ನಾಳಿನ ಭಾರತ ದೇಶದ ಒಳ್ಳೆಯ ಪ್ರಜೆಗಳು ಭಾರತದ ದೇಶದ ಪ್ರಥಮ ಪ್ರಧಾನಿಯಾದ ಜವಾಹರಲಾಲ ನೆಹರು ರವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಮಾಡುತ್ತಿದ್ದೇವೆ ಅವರಿಗೆ ಮಕ್ಕಳ ಮೇಲೆ ಅತಿಯಾದ ಪ್ರೀತಿ ಇರುವುದರಿಂದ ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಅಚರಿಸಿ ಎಂದು ನೆಹರೂ ಹೇಳಿದ್ದರು ಎಂದು ಪಿಎಸ್‍ಐ ನಿಂಗಣ್ಣ ಬಿರಾದಾರ ಹೇಳಿದ್ದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಹಳ್ಳಿಯ ಮಕ್ಕಳಿಗೆ ಚಿಣ್ಣರಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ತಂದೆ ತಾಯಿಯ ಹಾಗೂ ಗುರುಗಳ ಮಾತನ್ನು ಮೀರಬಾರದು ಚೆನ್ನಾಗಿ ಓದಿ ಒಳ್ಳೆಯ ಅಧಿಕಾರಿಗಳು ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಮಾತನಾಡಿ, ಪ್ರತಿಯೊಂದು ಆಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕು ಅಲ್ಲದೆ ತಾವೆಲ್ಲರು ಚೆನ್ನಾಗಿ ಕಲಿಯಬೇಕು ಉತ್ತಮವಾಗಿ ಕಲಿತರೆ ಮಾತ್ರ ನಾವು ಉತ್ತಮವಾದ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು.

ಲೊಯೋಲ ಶಾಲೆಯ ಪ್ರಾಂಶುಪಾಲರಾದ ಫಾದರ್ ಸಿರಿಲ್ ಕ್ಯಾಸ್ಟಲೀನೊರ ಮಾತನಾಡಿ, ಪ್ರತಿಯೊಬ್ಬರು ಒಳ್ಳೆಯದನ್ನು ಕಲಿಯಬೇಕು ಮತ್ತು ಜನರಿಗೆ ಒಳ್ಳೆಯದನ್ನೇ ಮಾಡಬೇಕು ಎಂದರು.

ಶಾರದಾ ಮಂಗಳೂರ, ಬ್ರದರ್ ಪೃಥ್ವಿ, ಬ್ರದರ್ ರೊನಾಲ್ಡ್, ಕಲಿಕಾ ಕೇಂದ್ರದ ಶಿಕ್ಷಕರು, ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿಗಳಾದ ಬಸಮ್ಮ, ಶ್ರೀಧರ ಕಡಕೋಳ, ತೇಜಶ್ವಿನಿ ಹಳ್ಳದಕೇರಿ ಉಪಸ್ಥಿತರಿದ್ದರು.

ಸಂಗಮ ಸಂಸ್ಥೆಯ ಸಹನಿರ್ದೇಶಕ ಸಿಸ್ಟರ್ ಸಿಂಥಿಯಾ ಡಿಮೆಲ್ಲೊ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ ಕುರಿಮನಿ ನಿರೂಪಿಸಿದರು, ಮಲಕಪ್ಪ ಹಲಗಿ ಸ್ವಾಗತಿಸಿದರು. ವಿಜಯ್ ವಿ ಬಂಟನೂರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group