ಮೂಡಲಗಿ: ಸಾಯಿ ಬಾಬಾರವರು ಶಿಕ್ಷಣ,ಆರೋಗ್ಯ, ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ, ಪ್ರತಿಯೊಬ್ಬ ಮಕ್ಕಳು ಬಾಲ ವಿಕಾಸದಲ್ಲಿ ಭಾಗವಹಿಸಬೇಕು, ಸಣ್ಣ ಮಕ್ಕಳು ಮಾನವೀಯ ಮೌಲ್ಯಗಳನ್ನು ಕಲಿಯುದರಿಂದ ಸಮಾಜ ಭದ್ರವಾಗುತ್ತದೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕಿ ಸುರೇಶ ಕಬ್ಬೂರ ಹೇಳಿದರು.
ಬುಧವಾರ ಕಲ್ಲೋಳಿ ಪಟ್ಟಣದ ಸಾಯಿ ಸೇವಾ ಸಮಿತಿ ಪ್ರಶಾಂತಿ ಕುಟೀರದಲ್ಲಿ ಸತ್ಯಸಾಯಿ ಬಾಬಾರವರ 97 ನೇ ಹುಟ್ಟು ಹಬ್ಬವನ್ನು ಕೇಕ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 1926 ನ-23 ಈಶ್ವರಮ್ಮ ಪೆದ್ದ ವೆಂಕಪ್ಪ ರಾಜು ದಂಪತಿಗಳ ಉದರದಲ್ಲಿ ಜನಿಸಿದ ಬಾಬಾರವರು ಇಂದು ವಿಕಾಸ ತರಗತಿಗಳು ದೇಶ ವಿದೇಶಗಳಲ್ಲಿ ಮಹತ್ವ ಪಡೆದುಕೊಂಡಿವೆ ಮಕ್ಕಳು ಬಾಲ ವಿಕಾಸದಲ್ಲಿ ಭಾಗವಹಿಸುವಂತೆ ಪಾಲಕರು ಪ್ರೋತ್ಸಹಿಸಬೇಕೆಂದರು.
ಕಲ್ಲೋಳಿ ಪಟ್ಟಣದಲ್ಲಿ ಸಾಯಿ ಮಂದಿರ ಬಡವರ ಮಕ್ಕಳ ಶಿಕ್ಷಣ ಸಲುವಾಗಿ ಶಾಲಾ ಫೀ,ಪುಸ್ತಕ,ನೋಟಬುಕ್ಕ ಕೊಟ್ಟು ಸಾಕಷ್ಟು ಸಹಾಯ ಅನುಕೂಲ ಕಲ್ಪಿಸುತ್ತದೆ ಶಿಕ್ಷಣ ವಿಭಾಗದ ಪ್ರಮುಖರಾಗಿ ಸೇವಾ ಕಾರ್ಯ ಮಾಡಿದ ರಾಜೇಶ್ವರಿ ಖಾನಗೌಡ್ರ ಅವರನ್ನು ಸನ್ಮಾನಿಸಲಾಯಿತು.
ಸತ್ಯಸಾಯಿ ಬಾಬಾರವರು ಹುಟ್ಟು ಹಬ್ಬದ ಅಂಗವಾಗಿ ನಗರ ಸಂಕೀರ್ಣತನೆ,ವೇದಘೋಷ,ಮಹಿಳೆಯರಿಂದ ತೊಟ್ಟಿಲೋತ್ಸವ,ಭಜನೆ, ಉಪನ್ಯಾಸ ಕಾರ್ಯಕ್ರಮ ನಡೆಯಿತು ಇದೇ ಸಂದರ್ಭದಲ್ಲಿ ಸಾಯಿಬಾಬಾರವರ ಪರಮಭಕ್ತ,ಕಿರಾಣಿ ವರ್ತಕ ಶ್ರೀಶೈಲ ತುಪ್ಪದ ಅವರ ಮೊಮ್ಮಗ ಪೇಮಸಾಯಿ ಅವರ ಹುಟ್ಟು ಹಬ್ಬ ಸೇರಿದಂತೆ ಅನೇಕ ಮಕ್ಕಳ ಹುಟ್ಟು ಹಬ್ಬ ಆಚರಿಸಲಾಯಿತು.
ಸಂಚಾಲಕ ಲೋಹಿತ ಕಲಾಲ,ಬಸಪ್ಪ ಕಡಾಡಿ,ದುಂಡಪ್ಪ ಖಾನಗೌಡ್ರ,ಹಣಮಂತ ಬಡಿಗೇರ, ಪರಪ್ಪ ಗಿರೆಣ್ಣವರ, ಗೊಪಾಲ ಕಂಬಾರ,ಗೀತಾ ಬಡಿಗೇರ,ಸಾಯಿಕಿರಣ ಪಟ್ಟಣಶೆಟ್ಟಿ, ಕೆಂಪಣ್ಣ ನಬಾಪುರ ಸೇರಿದಂತೆ ಯುವಕರು,ಮಹಿಳೆಯರು, ಸಾಯಿಭಕ್ತರು,ಬಾಲವಿಕಾಸ ಮಕ್ಕಳು ಉಪಸ್ಥಿತರಿದ್ದರು.