spot_img
spot_img

ಸೊನ್ನಲಗಿ ಸಿದ್ಧರಾಮೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮ

Must Read

- Advertisement -

ಸಿಂದಗಿ: ಪಟ್ಟಣದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 27ನೇ ಜಾತ್ರಾಮಹೋತ್ಸವದ ನಿಮಿತ್ತ  27-11-2022 ರಿಂದ 14-12-2022ರ ವರೆಗೆ ಸಂಜೆ 6-30 ಗಂಟೆಗೆ ಸೊನ್ನಲಗಿ ಶ್ರೀ ಸಿದ್ಧರಾಮೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ ಕಾರಣ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುನಿತರಾಗಬೇಕು ಎಂದು ಪ.ಪೂ.ಶ್ರೀ ನಾಗರತ್ನ ರಾಜಯೋಗಿ ವೀರಾಜೇಂದ್ರ ಸ್ವಾಮಿಗಳು ಕರೆ ನೀಡಿದರು.

ಪಟ್ಟಣದ ಬಸ್ ಡಿಪೋ ಹಿಂದುಗಡೆಯಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.14 ಬುಧವಾರ ರಾತ್ರಿ 9-15 ಗಂಟೆಗೆ ಕಾಯಕಯೋಗಿ, ಪವಾಡ ಪುರುಷ ಯೋಗ ಮಹಾತ್ಮರು, ಸಿದ್ಧಿಪುರುಷರು ಶ್ರೀಶೀಶ್ರೀ ಸದ್ಗುರು ಶಿವಯೋಗಿ ಡಾ. ಚಂದ್ರಶೇಖರ ಸ್ವಾಮಿಗಳು ಜಾಹಗೀರದಾರ ಅವರ 52ನೇ ವರ್ಷದ ಅನುಷ್ಠಾನದ ಸುವರ್ಣ ಮಹೋತ್ಸವ ಅಯ್ಯಾಚಾರ ಮತ್ತು ಅಂಗದೀಕ್ಷೆ ಕಾರ್ಯಕ್ರಮ ಜರುಗಲಿದೆ. 15 ರಂದು ಗುರುವಾರ ಮುಂಜಾನೆ 9-15 ಗಂಟೆಯ ಶುಭ ಮುಹೂರ್ತದಲ್ಲಿ ಸಿಂದಗಿಯ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಶ್ರೀ ಅದಿಶೇಷ ಸಂಸ್ಥಾನ ಹಿರೇಮಠದವರೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಾರೋಟ್ ಅದ್ಧೂರಿ ಮೆರವಣಿಗೆ ಹಾಗೂ ಕಳಶ, ಸಕಲ ವಾದ್ಯ ವೈಭವಗಳೊಂದಿಗೆ ಆದಿಶೇಷನ ಪಲ್ಲಕ್ಕಿ ಉತ್ಸವ ನಂತರ ಧರ್ಮಸಭೆಯು ಶ್ರೀಮದ್ ವೀರ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ. ಪ್ರಸನ್ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವದ್ದಾದರು ರಂಬಾಪುರ ಪೀಠ, ಬಾಳೆಹೊನ್ನೂರು ಇವರ ಭವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಅಲ್ಲದೆ 15 ರಂದು ಬ್ರಾಹ್ಮೀ ಮುಹೂರ್ತದ ಸಮಯ 5 ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿ ಅರ್ಚಕರಿಂದ ವಿಶೇಷ ನಾಗಪೂಜೆ ನೆರವೇರುವದು. ನಾಗದೋಷ, ಕಾಳಸರ್ಪದೋಷ, ಕುಜದೋಷ ಇರುವವರು ಈ ಪೂಜೆಯಲ್ಲಿ ಪಾಲ್ಗೊಳ್ಳಲು ಮುಂಚಿತವಾಗಿಯೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಮಸ್ತ ಸದ್ಭಕ್ತ ಮಂಡಳಿ  ಆದಿಶೇಷನ ಜಾತ್ರೆಗೆ ಆಗಮಿಸಿ ತನು,ಮನ,ಧನದಿಂದ ಸೇವೆ ಸಲ್ಲಿಸಿ ಪುನೀತರಾಗಬೇಕು ಎಂದು ಆದಿಶೇಷ ಸಂಸ್ಥಾನಮಠ  ಸಮಸ್ತ ಭಕ್ತ ಮಂಡಳಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಸಿದ್ದಲಿಂಗಯ್ಯ ಹಿರೇಮಠ, ಶಂಕರಗೌಡ ಬಿರಾದಾರ, ಸಿದ್ದಣ್ಣ ಕುಡೊಕ್ಕಲಿಗ, ಶ್ರೀಶೈಲ ನಂದಿಕೋಲ ಸೆರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group