spot_img
spot_img

ಅಣೆಕಟ್ಟುಗಳ ಹೂಳೆತ್ತಲು ಕೇಂದ್ರದಿಂದ ಕ್ರಮ – ಈರಣ್ಣ ಕಡಾಡಿ ಮಾಹಿತಿ

Must Read

- Advertisement -

ಮೂಡಲಗಿ: ದೇಶದಲ್ಲಿನ ಅಣೆಕಟ್ಟುಗಳಲ್ಲಿರುವ ಹೂಳೆತ್ತುವುದು ಒಂದು ಮಹತ್ವದ ಚರ್ಚೆಯ ವಿಷಯವಾಗಿದೆ. ಈಗಾಗಲೇ 2017 ರಲ್ಲಿ ಕೇಂದ್ರ ಸಚಿವರ ನೇತೃತ್ವದಲ್ಲಿ ಮಸೂದೆ ಜಾರಿಗೆ ತರಲು ಸಮಿತಿ ರಚನೆ ಮಾಡಲಾಗಿದೆ. ದೇಶದಲ್ಲಿ ಒಟ್ಟು 12047 ಯೋಜನೆಗಳಿದ್ದು, ಇದರಲ್ಲಿ 11052 ಯೋಜನೆಗಳನ್ನು ಪರಿಶೀಲನೆ ಮಾಡಲಾಗಿದೆ. ಇದರಲ್ಲಿ 67 ಯೋಜನೆಗಳು ಜಾರಿಯಲ್ಲಿವೆ ಎಂದು ಕೇಂದ್ರ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವ ಪ್ರಹ್ಲಾದ ಸಿಂಗ್ ಪಟೇಲ ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಸೋಮವಾರ ಮಾರ್ಚ 28 ರಂದು ಸಂಸತ್ತಿನ ಬಜೆಟ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ರಾಜ್ಯದ ಅಣೆಕಟ್ಟುಗಳಲ್ಲಿರುವ ಹೂಳು ತೆಗೆಯಲು ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಜಲ ಮೂಲಗಳ ದುರಸ್ತಿ ಮತ್ತು ನವೀಕರಣ ಹಾಗೂ ನದಿಗಳ ಶುದ್ದೀಕರಣ ಪುನಶ್ಚೇತನದ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) – ಹರ್ ಖೇತ್ ಕೋ ಪಾನಿ (HKKP) ಯೋಜನೆಗಳ ಮೂಲಕ ಜಲಮೂಲಗಳ ಘಟಕಗಳ ದುರಸ್ತಿ ಮತ್ತು ನವೀಕರಣ ಹಾಗೂ ಪುನಶ್ಚೇತನದ ಅಡಿಯಲ್ಲಿ ಗುರುತಿಸಲಾದ ಯೋಜನೆಗಳಿಗೆ ಕೇಂದ್ರ ಸರ್ಕಾರವು ತಾಂತ್ರಿಕ ಬೆಂಬಲ ಹಾಗೂ ಹಣಕಾಸಿನ ನೆರವು ನೀಡುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವು 2021-22ನೇ ಸಾಲಿನಲ್ಲಿ 1,239 ಜಲಮೂಲಗಳ ದುರಸ್ತಿ, ನವೀಕರಣ ಮತ್ತು ಪುನಶ್ಚೇತಕ್ಕಾಗಿ ಹಣಕಾಸಿನ ನೆರವು ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಿದೆ ಎಂದು ಮಾನ್ಯ ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group