spot_img
spot_img

ಸಿಂದೋಗಿಯಲ್ಲಿ ಆರಂಭಗೊಂಡ ‘ಮಕ್ಕಳ ಸಾಹಿತ್ಯ ಸಂಭ್ರಮ

Must Read

- Advertisement -

ಸವದತ್ತಿ: ತಾಲೂಕಿನ ಸಿಂದೋಗಿ ಗ್ರಾಮದ ಸರಕಾರಿ ಪ್ರೌಢಶಾಲಾಯಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜಿಲ್ಲಾಧಿಕಾರಿ ಬೆಳಗಾವಿ ತಾಲೂಕಾ ಪಂಚಾಯತ್ ಸವದತ್ತಿ ಹಾಗೂ ಭಾರತ ಜ್ಞಾನ ವಿಜ್ಞಾನ ತಾಲೂಕಾ ಘಟಕ ಸವದತ್ತಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸವದತ್ತಿ ಗ್ರಾಮ ಪಂಚಾಯತ್ ಶಿಂದೋಗಿ ಇವರುಗಳ ಸಹಯೋಗದಲ್ಲಿ ಸವದತ್ತಿ ತಾಲೂಕಾ ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ 2024 ಸಿಂದೋಗಿಯಲ್ಲಿ 3 ದಿನಗಳ ಕಾಲ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಚಕ್ಕಡಿಯಲ್ಲಿ ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳು ಹಾಗೂ ವಾದ್ಯ ಗೋಷ್ಠಿಗಳ ಮೂಲಕ ಜಾಥಾಕ್ಕೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತ್ ಕುಮಾರ್ ಚಾಲನೆ ನೀಡಿದರು.

ನಂತರ ಪ್ರೌಢಶಾಲಾ ಆವರಣದಲ್ಲಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸವದತ್ತಿಯ ಆರ್. ಬಿ. ಪಾಟೀಲ  ಜ್ಯೋತಿ ಬೆಳಗಿಸುವ ಮೂಲಕ ಮಾಡಿದರು. 

- Advertisement -

ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಿ ಡಿ ಟೊಪೋಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಶಿಂದೋಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಮಾತನಾಡಿ, ಮಕ್ಕಳು ಮೊಬೈಲ್ ದೂರವಿರಿಸಿ ಪುಸ್ತಕಗಳ ಕಡೆ ಆಕರ್ಷಿಸಲು ಇಂತಹ ಚಟುವಟಿಕೆಗಳು ಪೂರಕವಾಗಿದೆ ಎಂದು ತಿಳಿಸಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಎಫ್ ಸಿ ಚೇಗರಡ್ಡಿ ಮಾತನಾಡಿ, ಶಾಲಾ ಪುಸ್ತಕಗಳ ಪ್ರಾಮುಖ್ಯತೆಯಿಂದಾಗಿ ಗ್ರಂಥಾಲಯದಲ್ಲಿರುವ ಸಾವಿರಾರು ಪುಸ್ತಕಗಳ ಬಳಕೆ ಕಡಿಮೆಯಾಗುತ್ತಿದ್ದು ಈ ಕಾರ್ಯಕ್ರಮವು ಮಕ್ಕಳು ಗ್ರಂಥಾಲಯದ ಕಡೆಗೆ ಆಕರ್ಷಿತವಾಗಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು. 

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ್ದ ಶಿಂದೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಡಿ ಡಿ ಟೊಪೋಜಿ ಮಾತನಾಡಿ, ಮಕ್ಕಳಿಗೆ ಓದಲು ಪುಸ್ತಕ ಕೊಡಲು ಈ ದಿನ ನಾವು ಪುಸ್ತಕ ನೀಡುವ ಕಾರ್ಯ ವನ್ನು ಹಮ್ಮಿಕೊಂಡಿದ್ದೇವೆ. ಈ ಸಾಹಿತ್ಯ ಸಂಭ್ರಮದ ಚಟುವಟಿಕೆಗಳು ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ದಾರಿಯನ್ನು ತೋರಲಿದೆ ಎಂದು ತಿಳಿಸಿದರು.

- Advertisement -

ಸವದತ್ತಿ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ರತ್ನಾ ಸೇತಸನದಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೊಬೈಲ್ ಗೀಳು ಜಾಸ್ತಿ ಆಗುತ್ತಿರುವ ಇಂದಿನ ಕಾಲದಲ್ಲಿ ಮಕ್ಕಳ ಸೃಜನಶೀಲತೆಗೆ ಹೆಚ್ಚಿನ ಒತ್ತನ್ನು ಈ ಸಾಹಿತ್ಯ ಸಂಭ್ರಮ ನೀಡಲಿದೆ ಎಂದ ಅವರು, ಕಥೆ ಕಟ್ಟೋಣ, ಕವಿತೆ ಕಟ್ಟೋಣ, ನಾನು ರಿಪೋರ್ಟರ್, ನಾಟಕ ಮಾಡೋಣ ಎಂಬ ನಾಲ್ಕು ಕಾರ್ನರ್ ಗಳನ್ನು ರೂಪಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಓದು ಮತ್ತು ಬರವಣಿಗೆ ಮಾಡುವರು ಎಂದು ಹೇಳಿದರು.

ವೇದಿಕೆಯಲ್ಲಿ ತೆಗ್ಗಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಂತ ಸಿಂಗನ್ನವರ ರೋಣ ತಾಲೂಕಾ ಭಾರತ ಜ್ಞಾನ ವಿಜ್ಞಾನ  ಸಮಿತಿಯು ಅಧ್ಯಕ್ಷರಾದ ಎಸ್. ವ್ಹಿ ಮಾಳವಾಡ ರಾಮದುರ್ಗ ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಪಾಂಡುರಂಗ ಜಟಗನ್ನವರ ಸವದತ್ತಿ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ರತ್ನಾ ಸೇತಸನದಿ ಶಿಂದೋಗಿ  ಗ್ರಾಮ ಪಂಚಾಯತಿ  ಉಪಾಧ್ಯಕ್ಷರಾದ ಶಕುಂತಲಾ ಬಂಡಿವಡ್ಡರ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ಮಾಯಪ್ಪನವರ, ಈಶ್ವರ ಯಕ್ಕೇರಿ, ಮಲ್ಲಿಕಾರ್ಜುನ ದಸ್ತಿ, ಫಕೀರಪ್ಪ ಮಾದರ,ರುದ್ರಮ್ಮ ಮಾದರ, ಮಾಯಕ್ಕ ಟೊಪೋಜಿ, ನಿಂಗವ್ವ ಟೊಪೋಜಿ, ಕಲ್ಲಪ್ಪ ಕುರುಬಗಟ್ಟಿ, ಮುಶೆಪ್ಪ ಮುಶೆನ್ನವರ, ಸಿದ್ದಪ್ಪ ಟೊಪೋಜಿ, ಚಿನ್ನವ್ವ ಗೋಕಾವಿ, ಹೂವಕ್ಕ ತಳವಾರ, ಗುಡುಮಾ ಶೆರೇಗಾರ, ಸಿಂದೋಗಿಯ ಸರಕಾರಿ ಪ್ರೌಢ ಶಾಲಾ ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ ದೂದಪ್ಪ ಟೊಪೋಜಿ,  ಸರಕಾರಿ ಪ್ರಾಥಮಿಕ ಶಾಲೆ ಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಮಲ್ಲಪ್ಪ ಕೊಳ್ಳಿ, ಉಪಾಧ್ಯಕ್ಷರಾದ ಸುರೇಶ ದಂಡಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ಬೆಟಸೂರ, ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಬಿ ಪಿ ಅಂಗಡಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಎಸ್. ಟಿ. ಬಂಡಿವಡ್ಡರ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವಾಯ್ ಬಿ ಕಡಕೋಳ ಸಂಪನ್ಮೂಲ ವ್ಯಕ್ತಿಗಳಾದ ಮೀನಾಕ್ಷಿ ಮುರನಾಳ, ಗುರುದೇವಿ ಮಲಕಣ್ಣವರ ರಫಿಕ ಮುರಗೋಡ, ಎನ್ ಬಿ ಪೆಂಟೇದ, ಬಿ. ಎಸ್ ಶಿದ್ದಬಸನ್ನವರ, ಎನ್ ಎ ಹೊನ್ನಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಅನಸೂಯಾ ಮದನಬಾವಿ ಶಿಕ್ಷಕಿಯರಾದ ಅಶ್ವಿನಿ ಪಾತಾಳಿ, ಭಾರತಿ ಹೋಟಿ, ಪಿ ಎಮ್ ಕುಲಕರ್ಣಿ, ಮಮತಾಜ್ ಜಕಾತಿ, ಆರ್ ಆರ್  ಶಿಕ್ಷಕರಾದ ಬಿ ಎಂ ಭಾವಾಖಾನ, ಎಸ್ ಆರ್ ಕುರುಬರ ಐ ಎ ಶಿವಕಂಠ ಪ್ರೌಢಶಾಲಾ ಶಿಕ್ಷಕರಾದ ವ್ಹಿ. ಬಿ. ದೇವರಡ್ಡಿ, ರತ್ನಾ ತಡಸಲೂರ, ವೀಣಾ ಅಂಬಿಗೇರ, ವಿಜಯಲಕ್ಷ್ಮಿ ಕದಂ, ಎಕ್ಕೇರಿ ಶಾಲೆಯ ಗುರು ಮಾತೆ ಸೊಪ್ಪಡ್ಲ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮುಖ್ಯೋಪಾಧ್ಯಾಯರುಗಳು ನೂರು ಮಕ್ಕಳು ಉಪಸ್ಥಿತರಿದ್ದರು. 

ಕಾರ್ಯ ಕ್ರಮ ದ ಪ್ರಾರಂಭದಲ್ಲಿ ಗುರು ಮಾತೆ ವ್ಹಿ. ಎಸ್ ಹರಿಹರ ಅವರ ಸಂಯೋಜನೆ ಯಲ್ಲಿ ಪ್ರೌಢಶಾಲಾ ಮಕ್ಕಳಿಂದ ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಜರುಗಿದವು. ಪ್ರೌಢಶಾಲಾ ಶಿಕ್ಷಕರಾದ ವ್ಹಿ. ಬಿ. ದೇವರಡ್ಡಿ ಸ್ವಾಗತಿಸಿದರು. ಎನ್ ಎ ಹೊನ್ನಳ್ಳಿ ವಂದಿಸಿದರು.

ಮೊದಲ ದಿನ ರಿಪೋರ್ಟರ್ ಕಾರ್ನರ್ ಕ್ಕೆ ದತ್ತಿದಾನಿ ಲೂಸಿ ಸಾಲ್ಡಾನಾ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಎಲ್ ಐ ಲಕ್ಕಮ್ಮನವರ ಆಗಮಿಸಿದ್ದ ರು. ಎಲ್ ಐ ಲಕ್ಕಮ್ಮನವರ ಮಾತನಾಡಿ ನೂರಕ್ಕೂ ಅಧಿಕ ಮಕ್ಕಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಕತೆ, ಕವನ, ನಾಟಕ ಮತ್ತು ವರದಿಗಾರಿಕೆ ಮಾಡಿಸುವುದು ಸಾಹಿತ್ಯ ಸಂಭ್ರಮದ ಸ್ಥೂಲ ನೋಟ. ಮುಂದಿನ ದಿನಗಳಲ್ಲಿ ಮತ್ತೆ ಹಲವು ಗ್ರಾಮ ಪಂಚಾಯತಿಗಳಿಗೆ ಈ ಕಾರ್ಯವನ್ನು ವಿಸ್ತಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳು ಲೂಸಿ ಸಾಲ್ಡಾನಾ ಅವರ ಪರಿಚಯ ಪಡೆಯುವ ಮೂಲಕ ರಿಪೋರ್ಟರ್ ಕಾರ್ನರ್ ದಲ್ಲಿ ಅವರಿಗೆ ಪ್ರಶ್ನೆಗಳನ್ನು ಕೇಳಿ ಅವರ ಬದುಕಿನ ವಿವರಗಳನ್ನು ಪಡೆದುಕೊಂಡರು. 

ಎರಡನೇ ದಿನದಲ್ಲಿ ಪ್ರಗತಿಪರ ರೈತ ಹಾಗೂ ಸಾವಯವ ಕೃಷಿ ತಜ್ಞ ರಾಜೀವ್ ಹೆಬಸೂರ ಅವರ ಕೃಷಿ ಜಮೀನಿನಲ್ಲಿ ಮಕ್ಕಳು ಕೃಷಿ ಕುರಿತು ಮಾಹಿತಿಯನ್ನು ಪಡೆದುಕೊಂಡದ್ದು ವಿಶೇಷವಾಗಿತ್ತು. 

ಕೊನೆಯ ದಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರಿಪೋರ್ಟರ್ ಕಾರ್ನರ್ ನ ವಿಶೇಷ ಅತಿಥಿಗಳಾಗಿ ಕವನ ರಚನೆ ಕಥೆ ರಚನೆ ಬರವಣಿಗೆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ಮಕ್ಕಳ ಪ್ರಶ್ನೆ ಗಳಿಗೆ ಉತ್ತರಿಸುವ ಮೂಲಕ ನಾಲ್ಕು ಕಾರ್ನರ್ ಗಳ ಮಹತ್ವ ತಿಳಿಸಿದರು

ಜನಪದ ಕಲಾವಿದ ಸುರೇಶ ದಂಡಿನ ಜನಪದ ಕಲೆಗಳ ಕುರಿತು ಮಾಹಿತಿ ನೀಡುತ್ತಾ ಡೊಳ್ಳಿನ ಪದಗಳನ್ನು ಹಾಡಿದರು. 

ಸಮಾರೋಪ ಸಮಾರಂಭದಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ರಫೀಕ್ ಮುರಗೋಡ ಮಾತನಾಡಿ, ನೂರಕ್ಕೂ ಅಧಿಕ ಮಕ್ಕಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಕತೆ, ಕವನ, ನಾಟಕ ಮತ್ತು ವರದಿಗಾರಿಕೆ ಮಾಡಿಸುವುದು ಸಾಹಿತ್ಯ ಸಂಭ್ರಮದ . ಈ ದಿನ ಯಶಸ್ವಿಯಾಗಿ ಜರುಗಿತು. ಇದು ಮುಂದಿನ ದಿನಗಳಲ್ಲಿ ಮುಂದುವರೆಯಬೇಕು ಎಂದು ತಿಳಿಸಿದರು.    ಸಂಪನ್ಮೂಲ ಶಿಕ್ಷಕ ಭಾವಾಖಾನ ಮಕ್ಕಳ ನಾಟಕವನ್ನು ನಿರ್ದೇಶನ ಮಾಡುವ ಮೂಲಕ ಕಾರ್ಯ ಕ್ರಮ ಕ್ಕೆ ವಿಶೇಷ ಮೆರಗು ತಂದರು. 

ಸಂಪನ್ಮೂಲ ವ್ಯಕ್ತಿಗಳಾದ ಬಿ. ಎಸ್ ಸಿದ್ದಬಸನ್ನವರ ಮಾತನಾಡಿ ಮೂರು ದಿನಗಳಲ್ಲಿ ಹಲವು ಕತೆ, ಕವನ, ನಾಟಕಗಳು ರಚನೆಗೊಳ್ಳಲಿದ್ದು, ಹೊರಗಡೆ ಕರೆದೊಯ್ಯುವ ವಿದ್ಯಾರ್ಥಿಗಳು ವರದಿಗಾರಿಕೆ ಮಾಡಿ ತೋರಿಸುವ ಮೂಲಕ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಇದು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಸಿಂದೋಗಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಬಂಡಿವಡ್ಡರ ಮಾತನಾಡಿ ಈ ಸಾಹಿತ್ಯ ಸಂಭ್ರಮದ ಚಟುವಟಿಕೆಗಳು ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ದಾರಿಯನ್ನು ತೋರಲಿದೆ ಎಂದು ತಿಳಿಸಿದರು. 

ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ ಮಾತನಾಡಿ ಮೊಬೈಲ್ ಗೀಳು ಜಾಸ್ತಿ ಆಗುತ್ತಿರುವ ಇಂದಿನ ಕಾಲದಲ್ಲಿ ಮಕ್ಕಳ ಸೃಜನಶೀಲತೆಗೆ ಹೆಚ್ಚಿನ ಒತ್ತನ್ನು ಈ ಸಾಹಿತ್ಯ ಸಂಭ್ರಮ ನೀಡಲಿದೆ ಎಂದ ಅವರು, ಕಥೆ ಕಟ್ಟೋಣ, ಕವಿತೆ ಕಟ್ಟೋಣ, ನಾನು ರಿಪೋರ್ಟರ್, ನಾಟಕ ಮಾಡೋಣ ಎಂಬ ನಾಲ್ಕು ಕಾರ್ನರ್ ಗಳನ್ನು ರೂಪಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಓದು ಮತ್ತು ಬರವಣಿಗೆ ಮಾಡುವರು ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾದ  ಅನಸೂಯಾ ಮದನಬಾವಿ  ಮಾತನಾಡಿ ತಾಲೂಕಿನ ನೂರು ಮಕ್ಕಳಿಗೆ ನಡೆಯುವ ಮೂರು ದಿನಗಳ ಸಾಹಿತ್ಯ ಸಂಭ್ರಮ ಶಿಬಿರವು ಮಕ್ಕಳಲ್ಲಿರುವ ಕಾರ್ಯಕ್ರಮದ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಶಿಬಿರವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ನಾಗಪ್ಪ ಹೊನ್ನಳ್ಳಿ ಸಮಾರೋಪ ಸಮಾರಂಭದ ಕಾರ್ಯ ಕ್ರಮ ನಿರ್ವಹಿಸಿದರು.


ವಿಶೇಷ ವರದಿ: ವೈ. ಬಿ. ಕಡಕೋಳ

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group