spot_img
spot_img

ಮಾ.3ರಿಂದ ಈವಿವಿಯಿಂದ 88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ

Must Read

- Advertisement -

ಮೈಸೂರು – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಮತ್ತು ಜಯಲಕ್ಷ್ಮೀಪುರಂ ಸೇವಾ ಕೇಂದ್ರಗಳ ವತಿಯಿಂದ ಮಾ.3ರಿಂದ 10ರವರೆಗೆ 88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವವನ್ನು ಒಂಟಿಕೊಪ್ಪಲು ಕಾಳಿದಾಸ ರಸ್ತೆಯಲ್ಲಿರುವ (ಚಂದ್ರಕಲಾ ಆಸ್ಪತ್ರೆ ಸಮೀಪ) ‘ಓಂ ಶಾಂತಿ ಮಂಟಪ’ದಲ್ಲಿ ಆಯೋಜಿಸಲಾಗಿದೆ.

ಮಾ.3ರಂದು ಉದ್ಘಾಟನಾ ಸಮಾರಂಭವನ್ನು ಸಂಜೆ 6 ಗಂಟೆಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‍ಗೌಡರವರು ನೆರವೇರಿಸುವರು.   

ಬೇಲೂರು ತಾಲ್ಲೂಕಿನ ಹಳೇಬೀಡು ಶ್ರೀ ಕ್ಷೇತ್ರ ಪುಷ್ಪಗಿರಿಯ ಕಾಯಕಯೋಗಿ ಶ್ರೀ ಶ್ರೀ 1108 ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಯಾಗಿ ಮಂಡ್ಯ ಜಿಲ್ಲೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಗೌರವಾನ್ವಿತ ಅತಿಥಿಯಾಗಿ ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಆಗಮಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕೆ.ಆರ್.ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶೋಭಾ ಟಿ.ಪಿ. ಭಾಗವಹಿಸಲಿದ್ದು, ಈವಿವಿ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿಕೆ ಲಕ್ಷ್ಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. 

- Advertisement -

ಜ್ಯೋತಿರ್ಲಿಂಗಗಳ ಪುಣ್ಯ ದರ್ಶನವು ಮಾ.10ರವರೆಗೆ ನಡೆಯಲಿದೆ. ಮಾ.4ರಿಂದ ಪ್ರತಿನಿತ್ಯ ಸಂಜೆ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.3ರಂದು ಸಂಜೆ 5ರಿಂದ 6ರವರೆಗೆ ಹೆಸರಾಂತ ಗಾಯಕ ಅಮ್ಮ ರಾಮಚಂದ್ರರವರಿಂದ ಭಕ್ತಿಗೀತೆಗಳ ಗಾನಸುಧೆ ಏರ್ಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group