ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರು ಸೇರಿಕೊಂಡು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹತ್ತು ಹಲವು ವೈವಿಧ್ಯಮಯ ಚಿಂತನ ಗೋಷ್ಠಿಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ವಿಚಾರಗೋಷ್ಠಿ, ಪುಸ್ತಕ ವಿಮರ್ಶೆ, ವ್ಯಕ್ತಿ ಅಧ್ಯಯನ, ಐತಿಹಾಸಿಕ ಘಟನೆಗಳ ಮೆಲುಕು, ಇತಿಹಾಸದಲ್ಲಿ ಮರೆತುಹೋದ ಮಹಾನ್ ಸಾಧಕರ ಕುರಿತು ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.
ಈ ಚಿಂತನ ಗೋಷ್ಠಿಯ ಅಡಿಯಲ್ಲಿ ಶನಿವಾರ ದಿ.26 ರಂದು ಸಂಜೆ 4.30 ಗಂಟೆಗೆ ಸರ್ವಜ್ಞನ ವಚನಗಳ ಕುರಿತು ಚಿಂತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಿ.ಬಿ.ಕಮತೆ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಸುಳೇಭಾವಿ ರವರು ವಹಿಸಲಿದ್ದಾರೆ. ಕಾರ್ಯಕ್ರಮವು ಬಿ.ಬಿ. ಕಮತೆ ಪ್ಲಾಟ ನಂಬರ್ -1084 ‘ಶಾರದಾದೇವಿ ನಿಲಯ’ ಶಿವಾಲಯ ಸ್ಟೇಡಿಯಂ ರಸ್ತೆ ಹೊಸ ಗಾರ್ಡನ್ ಎದುರಿಗೆ ರಾಮತೀರ್ಥ ನಗರ ಬೆಳಗಾವಿ . ಶಾರದಾದೇವಿ ರಂಗಮಂಟಪ ದಲ್ಲಿ ನಡೆಯಲಿದೆ.
ಸಾಹಿತಿಗಳು, ಚಿಂತಕರು,ಯುವಕರು ಸರ್ವಜ್ಞನ ವಚನಗಳ ಕುರಿತು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಅವುಗಳ ಅವಶ್ಯಕತೆಯ ಕುರಿತು ಈ ಕಾರ್ಯಕ್ರಮದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾಗಿ ಸ. ರಾ. ಸುಳಕೂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಬಿ.ಬಿ.ಕಮತೆ . M:9535849254.