spot_img
spot_img

ನಾಗರಿಕರು ಸ್ವತ್ತುಗಳಿಗೆ ಇ ಖಾತಾ ಪಡೆದುಕೊಳ್ಳಬೇಕು – ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಮೂಡಲಗಿ – ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಸಹ ಇ- ಖಾತಾ ಅಭಿಯಾನವು ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.

ಶನಿವಾರದಂದು ಪುರಸಭೆ ಆವರಣದಲ್ಲಿ ಜರುಗಿದ ಇ – ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನದಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೨೫೦೦ ಕ್ಕೂ ಹೆಚ್ಚು ಆಸ್ತಿಗಳು ಇ – ಖಾತಾಕ್ಕೆ ಒಳಪಟ್ಟರೆ ಅಂದಾಜು ೨ ರಿಂದ ೨.೫೦ ಕೋಟಿ ರೂಪಾಯಿಗಳ ಆದಾಯವು ಪುರಸಭೆಗೆ ಹರಿದು ಬರಲಿದೆ. ಫಲಾನುಭವಿಗಳು ತಕ್ಷಣವೇ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಇ ಖಾತಾ ಉತಾರಗಳನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಸಂಪರ್ಕ ಮಾಡಬೇಡಿ ಎಂದು ಸಲಹೆ ನೀಡಿದ ಅವರು, ಈ ಅಭಿಯಾನವು ಮೇ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದರು.

- Advertisement -

ಸ್ಥಳೀಯ ಎಸ್ಸಿ ಕಾಲನಿಯ ಸುಮಾರು ೩೦೦
ಕುಟುಂಬಗಳಿಗೆ ಖಾತಾ ಉತಾರಗಳನ್ನು ಮಾಡಿಕೊಟ್ಟು ಅಂಥ ಬಡ ಕುಟುಂಬಗಳಿಗೆ ಅನುಕೂಲ
ಮಾಡಿಕೊಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿೃವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದರಿಂದ ನಮಗೂ ಸಹ ಅಡಚಣೆಯಾಗಿದೆ. ಕಳೆದ ಎರಡು ವರ್ಷಗಳಿಂದ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೊಸ ಹೊಸ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ. ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು.
ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆಯೂ ಇದಕ್ಕಾಗಿ ಅನುದಾನವನ್ನು ನೀಡುವಂತೆಯೂ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಬಹು ನಿರೀಕ್ಷಿತ ಮೂಡಲಗಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ನಿವೇಶನವನ್ನು ಗುರುತಿಸಲಾಗಿದೆ. ಆದರೆ ಸರ್ಕಾರದಿಂದ ಅನುದಾನದ ಕೊರತೆಯಿಂದ ವಿಳಂಬವಾಗುತ್ತಿದೆ. ೮.೬೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಈ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವ ಇರಾದೆ ಇದೆ. ಈ ವರ್ಷಾಂತ್ಯದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಎಂದು ತಿಳಿಸಿದರು.

- Advertisement -

ಮೂಡಲಗಿ ಪಟ್ಟಣದ ವ್ಯಾಪ್ತಿಯ ಸಾರ್ವಜನಿಕರಿಗೆ ಇನ್ನು ಮುಂದೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿ ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಸೇರಿ ಒಟ್ಟು ೧೪೦.೬೯ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕ್ಷೇತ್ರದ ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರು ದೊರೆಯಲಿದೆ. ಪ್ರತಿ ಮನೆ – ಮನೆಗೆ ನೀರು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ವಿಧ್ಯುಕ್ತವಾಗಿ ಎರಡು ಕುಟುಂಬದವರಿಗೆ ಇ – ಖಾತಾ ಉತಾರಗಳನ್ನು ನೀಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಖುರ್ಶದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಪುರಸಭೆ ಸದಸ್ಯರಾದ ಸಂತೋಷ ಸೋಣವಾಲ್ಕರ, ರವಿ ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಜಯಾನಂದ ಪಾಟೀಲ, ಸುಭಾಸ್ ಸಣ್ಣಕ್ಕಿ, ಅಬ್ದುಲ್ ಡಾಂಗೆ, ಆನಂದ ಟಪಾಲ್, ಈರಪ್ಪ ಮುನ್ಯಾಳ, ಹುಸೇನ್ ಶೇಖ, ಆದಮ ತಂಬೋಳಿ, ಶಿವು ಸಣ್ಣಕ್ಕಿ, ನಾಮ ನಿರ್ದೇಶಿತ ಸದಸ್ಯರು, ಮುಖ್ಯಾಧಿಕಾರಿ ತುಕಾರಾಂ ಮಾದರ,
ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಯಾವ ಅನುದಾನವನ್ನು ಕೊಡುತ್ತಿಲ್ಲ. ಇದರಿಂದ ಹೇಳಿಕೊಳ್ಳುವಂತಹ ಪ್ರಗತಿಪರ ಕಾರ್ಯಗಳು ನಡೆಯುತ್ತಿಲ್ಲ. ಇದರ ಮಧ್ಯೆ ಇ – ಖಾತಾ ಅಭಿಯಾನವನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಳ್ಳೇ ಕೆಲಸವನ್ನು ಮಾಡಿದ್ದಾರೆ. ಇದರಿಂದ ಬಡ ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಉತ್ತಮವಾದ ಇ ಖಾತಾ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಬೇಮುಲ್ ಅಧ್ಯಕ್ಷ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಪಕ್ಷದವರು ಪುಣ್ಯ ಸ್ನಾನ ಮಾಡಿ ಪಾಪ ಕಳೆದುಕೊಳ್ಳಲಿ – ಈರಣ್ಣ ಕಡಾಡಿ

ಮೂಡಲಗಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ನೇರವೇರಿಸಿ ಲೋಕ...
- Advertisement -

More Articles Like This

- Advertisement -
close
error: Content is protected !!
Join WhatsApp Group