ವಿವಿಧ ಬೇಡಿಕೆಗಾಗಿ ಪೌರ ಕಾರ್ಮಿಕರ ಹೋರಾಟ

Must Read

ಮೂಡಲಗಿ:-ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ಮೂಡಲಗಿ ತಾಲೂಕಾ ಘಟಕದಿಂದ ಕಪ್ಪು ಬಟ್ಟೆ ಧರಿಸಿ ಎಪ್ರಿಲ್, ೧೧ ರಿಂದಲೇ ಪ್ರತಿಭಟನೆ ಪ್ರಾರಂಭವಾಗಿದೆ. ಪೌರಕಾರ್ಮಿಕರು ಈಗಾಗಲೇ ಕಾಯಂ ಆದವರು ಸೇರಿ ಯಶಸ್ವಿನಿ ಆರೋಗ್ಯ ಕಾರ್ಡ ವಿತರಿಸಬೇಕು ಮತ್ತು ನಮ್ಮ ವಿವಿಧ ಬೇಡಿಕೆಗಳನ್ನು ಪೂರೈಸಬೇಕೆಂದು ಕರ್ನಾಟಕ ರಾಜ್ಯ ನೌಕರರ ಸಂಘದಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ವಾಟರ್ ಸಪ್ಲೆಯರ್ಸ್, ಕ್ಲಿನರ್,ಟ್ರ್ಯಾಕ್ಟರ್ ಚಾಲಕ, ಲೋಡರ್ಸ್ ಇವರು ಸೇರಿದಂತೆ ಇನ್ನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಸರ್ಕಾರವು ಕಾಯಂ ಮಾಡಬೇಕು. ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ,ಈವರೆಗೂ ಬೇಡಿಕೆ ಈಡೇರಿಸಿಲ್ಲವೆಂದು ಪ್ರತಿಭನಾಕಾರರು ಹೇಳಿದರು.

ಈ ಪ್ರತಿಭಟನೆ ೪೫ ದಿನಗಳವರೆಗೆ ನಡೆಸಬೇಕೆಂದಿದ್ದೇವೆ ಅಷ್ಟರಲ್ಲಿ ಸರ್ಕಾರವು ಯಾವ ನಿರ್ದ್ಧಾರ ತೆಗೆದುಕೊಳ್ಳವುದು ನೋಡೋಣ. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಖಜಾಂಚಿ ಯಶವಂತ ಸಣ್ಣಕ್ಕಿ, ಹೊರಗುತ್ತಿಗೆ ವಾಹನ ಚಾಲಕ ಯಶವಂತ ಶಿದ್ಲಿಂಗಪ್ಪಗೋಳ, ಶಿವಬೋಧ ಕಪ್ಪಲಗುದ್ದಿ, ಲಕ್ಕಪ್ಪ ಗಾಜಿ, ಪಾಂಡು ಮುತ್ತಗಿ ಇನ್ನು ಅನೇಕ ಮಹಿಳೆಯರು ಹಾಗೂ ಪುರುಷ ಪೌರಕಾರ್ಮಿಕರು ಭಾಗಿಯಾಗಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group