ವಿಹಿಂಪ ಮತ್ತು ಭಜರಂಗ ದಳದಿಂದ ಮಾರುತಿ ದೇವಸ್ಥಾನದಲ್ಲಿ ಸ್ವಚ್ಛತೆ

Must Read

ಮೂಡಲಗಿ – ತುಂಬಾ ದಿನಗಳಿಂದ ಸ್ವಚ್ಛವಾಗದೇ ಉಳಿದುಕೊಂಡಿದ್ದ ನಗರದ ಗಾಂಧಿ ಚೌಕದ ಶ್ರೀ ಮಾರುತಿ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡರು.

ಬಿಜೆಪಿ ಮುಖಂಡ ಪ್ರಕಾಶ ಮಾದರ ಅವರ ನೇತೃತ್ವದಲ್ಲಿ ಬೆಳಿಗ್ಗೆ ಬೆಳಿಗ್ಗೆ ಸ್ವಚ್ಛತಾ ಸಲಕರಣೆಗಳೊಂದಿಗೆ ಕಾರ್ಯಕ್ಕಿಳಿದ ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗ ದಳದ ಕಾರ್ಯಕರ್ತರು ಮಂದಿರದ ಎದುರಿಗಿನ ನಾಗರಾಜನ ಕಟ್ಟೆ, ಹಿಂಬದಿಯ ಪೌಳಿ ಹಾಗೂ ಕಟ್ಟಡದ ಮೇಲೆ ಬಿದ್ದಿದ್ದ ಕಸವನ್ನೆಲ್ಲ ಗುಡಿಸಿ ಸ್ವಚ್ಛ ಮಾಡಿದರು.

ಈ ಕಾರ್ಯದಲ್ಲಿ ಕುಮಾರ ಗಿರಡ್ಡಿ, ಸುರೇಶ ಅಂತರಗಟ್ಟಿ, ಶಿವಬಸು ಕಪರಟ್ಟಿ, ವಿಠ್ಠಲ ಶೀಳನವರ, ಶಿವಬಸು ಬಂಡಿವಡ್ಡರ, ಮಹಾಲಿಂಗಯ್ಯ ಹಿರೇಮಠ, ಶಿವಾನಂದ ಮಗದುಮ್, ಮಹಾಲಿಂಗ ಒಂಟಗೂಡಿ, ಸಾಗರ ಮಗದುಮ್, ಈಶ್ವರ ಮುರಗೋಡ ಕೈಗೂಡಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group