ಮೈಸೂರು – ಸುಪ್ರೀಮ್ ಕೋರ್ಟ್ ಆದೇಶದ ನೆಪದಲ್ಲಿ ಹಿಂದೂ ದೇವಾಲಯಗಳ ತೆರವಿಗೆ ಮುಂದಾಗಿರುವ ಮೈಸೂರು ಜಿಲ್ಲಾಡಳಿತದ ವಿರುದ್ಧ ಮೈಸೂರಿನಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಂಜನಗೂಡಿನಲ್ಲಿ ಪುರಾತನ ದೇವಾಲಯವನ್ನು ತೆರವುಗೊಳಿಸಲಾಯಿತು. ಈಗ ಮೈಸೂರಿನಲ್ಲಿ 101 ಗಣಪತಿ ದೇವಾಲಯಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ದೇವಾಲಯಗಳನ್ನು ತೆರವು ಮಾಡಲಾಗುತ್ತಿದೆ ಎಂದು ಹೇಳಿ ಜಿಲ್ಲಾಡಳಿತ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇವಾಯಗಳನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ? ಅನಧಿಕೃತ ಚರ್ಚ್, ಮಸೀದಿಗಳಿಲ್ಲವೇ? ಸುಪ್ರೀಂ ಕೋರ್ಟ್ ಆದೇಶದ ಪ್ರತಿ ನಮ್ಮ ಬಳಿಯೂ ಇದೆ.
ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂಥ ಪ್ರದೇಶದಲ್ಲಿ ದೇವಾಲಯಗಳಿದ್ದರೆ, ಅಕ್ರಮವಾಗಿ ನಿರ್ಮಿಸಿದ್ದರೆ ಅಂತಹ ದೇವಾಲಯಗಳನ್ನು ತೆರವುಗೊಳಿಸಬಹುದು. ಆದರೆ ಅದಕ್ಕೂ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದಿದೆ. ಜಿಲ್ಲಾಡಳಿತ ಜನರಿಂದ ಅಭಿಪ್ರಾಯ ಸಂಗ್ರಹಿಸಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ ದೇವಾಲಯಗಳ ತೆರವಿನ ಕ್ರಮದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ದನಿಯೆತ್ತಿದ್ದು ಸಂಸದ ಪ್ರತಾಪ ಸಿಂಹ ಅದನ್ನು ಶ್ಲಾಘಿಸಿದ್ದಾರೆ