Homeಸುದ್ದಿಗಳುಮಹಿಳೆಯರ ಆರತಿ ತಟ್ಟೆಗೆ ಹಣ ಹಾಕಿದ ಸಿಎಂ ಬೊಮ್ಮಾಯಿ; ನೀತಿ ಸಂಹಿತೆಯ ಉಲ್ಲಂಘನೆ

ಮಹಿಳೆಯರ ಆರತಿ ತಟ್ಟೆಗೆ ಹಣ ಹಾಕಿದ ಸಿಎಂ ಬೊಮ್ಮಾಯಿ; ನೀತಿ ಸಂಹಿತೆಯ ಉಲ್ಲಂಘನೆ

ಬೀದರ – ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಪರಿಷತ್ ಚುನಾವಣೆ ಪ್ರಚಾರ ನಿಮಿತ್ತ ಆಗಮಿಸಿದ್ದ ವೇಳೆ ಬಿಜೆಪಿ ಮುಖಂಡ ಡಿ.ಕೆ ಸಿದ್ರಾಮ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಿಳೆಯರ ಆರತಿ ತಟ್ಟೆಗೆ ಹಣ ಹಾಕಿದರು.

ನಾಡ ದೊರೆಯನ್ನು ಸ್ವಾಗತಿಸಲು ಆರತಿ ತಟ್ಟೆ ಹಿಡಿದು ಮಹಿಳೆಯರು ನಿಂತಿದ್ದರು. 6 ಆರತಿ ತಟ್ಟೆಗೆ ತಲಾ 500 ರೂ ಯಂತೆ 3,000 ರೂ. ಹಾಕಿದ್ದ ಮುಖ್ಯ ಮಂತ್ರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರು. ಇದನ್ನೆಲ್ಲ ನೋಡುತ್ತಿದ್ದರೂ ಜಿಲ್ಲಾ ಚುನಾವಣೆ ಅಧಿಕಾರಿ ಕಣ್ಣು ಮುಚ್ಚಿ ಕುಳಿತ ಘಟನೆ ನಡೆಯಿತು.

ತಟ್ಟೆಯಲ್ಲಿ ಹಣ ಹಾಕುವಾಗ ಇದೆಲ್ಲ ಫೋಟೋ ತೆಗಿಬೇಡಿ.. ಚುನಾವಣೆ ಇದೆ ಎಂದು ಸಿಎಂ ನುಡಿದರಾದರೂ ಆರತಿ ತಟ್ಟೆಗೆ ಹಣ ಹಾಕುತ್ತಿರುವ ವಿಡಿಯೋವನ್ನು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾಡಿದ್ದಾರೆ.

ಚುನಾವಣೆಯ ಕಾಲಕ್ಕೆ ಹಣ ಹಂಚುವುದಾಗಲಿ ಯಾವುದೇ ಅಭಿವೃದ್ಧಿ ಕಾರ್ಯ ಕೂಡ ಮಾಡಲು ಬಿಡದ ಚಯನಾವಣಾ ಆಯೋಗ ಈಗ ಚುನಾವಣೆಯ ಅಧಿಕಾರಿಯ ಕಣ್ಣೆದುರೇ ರಾಜ್ಯದ ಮುಖ್ಯಮಂತ್ರಿ ಮಹಿಳೆಯರಿಗೆ ಹಣ ನೀಡಿದ ಘಟನೆ ನಡೆದರೂ ಮೌನವಾಗಿರುವುದು ಅಚ್ಚರಿ ಮೂಡಿಸಿದೆ.

ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಚುನಾವಣೆ ಪ್ರಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಈ ವೇಳೆ ಉಪಸ್ಥಿತರಿದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

close
error: Content is protected !!
Join WhatsApp Group