spot_img
spot_img

ಧರ್ಮದ ಕಾರ್ಯಕ್ರಮಗಳು ಸಂಸ್ಕೃತಿ ಕಲಿಸುವ ಪಾಠ ಶಾಲೆ; ಮನಗೂಳಿ

Must Read

- Advertisement -

ಸಿಂದಗಿ – ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲಗುರು ಎಂಬಂತೆ ಶಿಕ್ಷಣವೆ ಶಕ್ತಿ ಧರ್ಮದ ಕಾರ್ಯಕ್ರಮಗಳೆ ನಮ್ಮ ಆಚಾರ ವಿಚಾರ ಸಂಸ್ಕೃತಿ ಕಲಿಸುವಂಥ ಪಾಠ ಶಾಲೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಆರಾಧ್ಯ ದೇವ ಶ್ರೀ ವೀರಭಧ್ರೇಶ್ವರ ದೇವಸ್ಥಾನದ 52 ನೇ ಜಾತ್ರಾ ಸಂಭ್ರಮದ ತಿಂಥಣಿ ಮೌನೇಶ್ವರ ಮಹಾ ಪುರಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ ಕಲಿಯಬಹುದು, ಹಣ ಗಳಿಸಬಹುದು, ಅಧಿಕಾರ ಹಿಡಿಯಬಹುದು ಅದರೆ ಧರ್ಮದಿಂದ ಉತ್ತಮ ಸಂಸ್ಕಾರ ಪಡೆಯಲು ಶರಣರ ಜೀವನ ಚರಿತ್ರೆ ಅವರ ಬದುಕಿನ ಪಯಣ ಅವರ ಆದರ್ಶ ನಮ್ಮಲ್ಲಿ ಅಳವಡಿಸಿ ಕೊಳ್ಳುವ ಧರ್ಮದ ವಿಷಯ ಅರಿಯಲು ಇಂಥಾ ಕಾರ್ಯಕ್ರಮಗಳು ನಮ್ಮ ಬದುಕಿಗೆ ಅವಶ್ಯ ಎಂದರು.

ಅಜ್ಞಾನದ ಅಂಧಕಾರ ಕಳೆಯಲು ಸುಜ್ಞಾನದ ದಿವ್ಯ ಜ್ಯೋತಿ ಹರಡಲು ಜ್ಞಾನಿಗಳಿಂದ ಮಠಾಧೀಶರಿಂದ ಉತ್ತಮ ಮಾತುಗಾರಿಕೆಯ ಸಂಪನ್ನರಿಂದ ವಿಷಯ ತಿಳಿದು ಕೊಂಡು ನಮ್ಮ ಬದುಕು ದಿವ್ಯ ಜ್ಯೋತಿಯಾಗಿ ಬೆಳಗಲು ಜಾತ್ರೆ ಪುರಾಣ ಪುಣ್ಯ ಕಥೆ, ಹರಿಕಥೆ ಅವಶ್ಯ ಎಂದರು.

- Advertisement -

ಯಂಕಂಚಿ ಶ್ರೀಮಠದ ರುದ್ರಮುನಿ ಸ್ವಾಮೀಜಿ ಆರ್ಶೀವಚನ ನೀಡಿದರು.

ಅಫಜಲಪುರ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜೇವರ್ಗಿ ಶಾಸಕ ಅಜಯಸಿಂಗ್ ಅಶೋಕ ವಾರದ, ನರಸಿಂಗ್ ಪ್ರಸಾದ ತಿವಾರಿ, ಎಮ್.ಸಿ.ಸಿಂದಗಿ, ಪ್ರಕಾಶ ಅಡಗಲ್ಲ ರೇವಣಸಿದ್ದ ಮಸಳಿ, ಸಂತೋಷ ಶಾಬಾದಿ, ಈರಣ್ಣ ವಿಶ್ವಕರ್ಮ, ವಿದ್ಯಾಧರ ಮಳಗಿ, ಭೂತಾಳಿ ಖಾನಾಪೂರ, ಸಿದ್ರಾಮಯ್ಯ ಮಠಪತಿ, ಶ್ರವಣಕುಮಾರ ದಸ್ಮಾ, ಮುತ್ತು ನೆಲ್ಲಗಿ ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group