ಮೂಡಲಗಿ: ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ಮಾಡಿಸಿದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಯಾದವಾಡ ಗ್ರಾಮದಲ್ಲಿ ರಸ್ತೆ ತಡೆ ನಡೆಸಲಾಯಿತು.
ದುಷ್ಟ ಗುಂಡಾಗಿರಿ ಕಾಂಗ್ರೆಸ್ ಸರ್ಕಾರಕ್ಕೆ,ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆ ಕೂಗುತ್ತ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ಹಾಕಿದರು
ಗುರುವಾರ ಪಂಚಮಸಾಲಿ ಪೂಜ್ಯರ ಆದೇಶದಂತೆ ಸಮಾಜದ ಪ್ರಮುಖರು ಯಾದವಾಡ ಗ್ರಾಮದಲ್ಲಿ ಸಾಂಕೇತಿಕವಾಗಿ ಬಂದ್ ಮಾಡಿ ಧರಣಿ ನಡೆಸಿದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಹತ್ತಿರ ರ್ಯಾರ್ಲಿ ಹಮ್ಮಿಕೊಂಡ ಸಂದರ್ಭದಲ್ಲಿ ಪೋಲಿಸರು ಲಾಠಿ ಪ್ರಹಾರ ಮಾಡಿದರು. ಇದು ಸಮಾಜಕ್ಕೆ ಮಾಡಿದ ಅಪಮಾನ ಸರ್ಕಾರ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುಬ್ಬಳಿ ಚನ್ನಬಸಪ್ಪ ಸ್ವಾಮಿಗಳ ನೇತ್ರತ್ವದಲ್ಲಿ ಬಸವರಾಜ ಹಿಡಕಲ, ಡಾ.ರಮೇಶ ಕವಟಗೊಪ್ಪ, ನಿಂಗಪ್ಪ ಅರಕೇರಿ,ಸುರೇಶ ಒಣಕಿ,ಹಣಮಂತ ಹೊಸಮನಿ,ಕರೆಪ್ಪ ಬಾಗೋಜಿ, ಶ್ರೀಶೈಲ ಹೆಗ್ಗಳಗಿ, ಮಲ್ಲಪ್ಪ ಹೊಸಟ್ಟಿ ಸೇರಿದಂತೆ ಅನೇಕ ಪಂಚಮಸಾಲಿ ಸಮಾಜದ ಪ್ರಮುಖರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.