ಸಿಂದಗಿ: ಪಟ್ಜಣದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲೊಯಲ್ ಸ್ಕೂಲ ಹತ್ತಿರ ಎರಡು ಲಾರಿಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ವಾಹನಗಳಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿ ಓರ್ವ ಸ್ಥಳದಲ್ಲೇ ಸಾವನಪ್ಪಿದ್ದಾನೆ ಇನ್ನೊಬ್ಬ ಚಾಲಕನ ಕಾಲುಗಳು ಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಜೇವರಗಿ ಕಡೆಯಿಂದ ಹಾಗೂ ಸಿಂದಗಿ ಕಡೆಯಿಂದ ಹೊರಟಿದ್ದ ಎರಡು ಲಾರಿಗಳು ಮುಖಾಮುಖಿಯಾಗಿದ್ದು ಸಾವನ್ನಪ್ಪಿದ ಚಾಲಕ ವಾಹನದಲ್ಲಿ ಸಿಲುಕಿಕೊಂಡಿರುವುದರಿಂದ ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಮೃತಚಾಲಕನ ಶವವನ್ನು ಹೊರತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಒಂದು ಲಾರಿ ಆಂದ್ರಪ್ರದೇಶ ಮೂಲದ್ದು ಇನ್ನೊಂದು ಲಾರಿ ವಿಜಯಪುರ ಮೂಲದ್ದು ಎಂದು ತಿಳಿದು ಬಂದಿದೆ.
ಮೃತಪಟ್ಟ ವಾಹನ ಚಾಲಕನ ಹೆಸರು ತಿಳಿದು ಬಂದಿಲ್ಲ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶಿವುಕುಮಾರ ಬಾಗೇವಾಡಿ, ಸಿಬ್ಬಂದಿಗಳಾದ ಹಣಮಂತ ಮಂಚೇಂದ್ರ, ಸಿದ್ದಣ್ಣ ರೋಡಗಿ, ಮಲಕಣ್ಣ ತೆಗ್ಗಿಹಳ್ಳಿ, ವಿಷ್ಣು ಜಾಧವ, ಮುತ್ತುರಾಜ ಹುಣಸಗಿ, ಶ್ರೀಧರ ರತ್ನಪ್ಪಗೋಳ, ಅರ್ಥನಳ್ಳಿ, ಗುಗ್ಗರಿ ಇದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ