spot_img
spot_img

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಬದ್ಧ: ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಗೋಕಾಕ: ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ರೈತರ ಸಹಕಾರದೊಂದಿಗೆ ಶ್ರಮಿಸಿ ಕಾರ್ಖಾನೆಯನ್ನು ಮಾದರಿಯನ್ನಾಗಿ ಪರಿವರ್ತಿಸುವುದಾಗಿ ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಸೋಮವಾರದಂದು ಇಲ್ಲಿಗೆ ಸಮೀಪದ ಪ್ರಭಾ ಶುಗರ್ಸದಲ್ಲಿ ಜರುಗಿದ ಕಾರ್ಖಾನೆಯ ನೂತನ ಆಡಳಿತ ಮಂಡಳಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಪ್ರಗತಿಗೆ ಹೊಸ ಆಡಳಿತ ಮಂಡಳಿ ಸದಸ್ಯರು ಶ್ರಮಿಸಬೇಕು ಎಂದು ಹೇಳಿದರು.

ರೈತರ ತಳಹದಿಯ ಮೇಲೆ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದಲ್ಲಿ ರೈತರ ಆಶಾಕಿರಣವಾಗಿದೆ. ಕಾರ್ಖಾನೆಯ ಪ್ರಗತಿಗೆ ರೈತರು ಬೆನ್ನೆಲುಬಾಗಿ ನಿಂತಿದ್ದಾರೆ. ಕಾರ್ಖಾನೆಯ ಅಭಿವೃದ್ಧಿಯಲ್ಲಿ ರೈತರು ಮತ್ತು ಕಾರ್ಮಿಕರ ಪಾತ್ರ ದೊಡ್ಡದಿದೆ. ಅದಕ್ಕಾಗಿ ಸಮಸ್ತ ರೈತ ಬಾಂಧವರನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.

- Advertisement -

ಸನ್ 2023 ರಿಂದ 2028 ರವರೆಗೆ ನಡೆದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ರೈತರ ಸಹಕಾರದಿಂದ ಈ ಬಾರಿಯೂ ಎಲ್ಲ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ರೈತರು ತಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಗಳಿಗೆ ನಾವೆಂದೂ ಚಿರಋಣಿಯಾಗಿರುತ್ತೇವೆ. ಕಾರ್ಖಾನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತೇವೆ. ರೈತರ ಶಕ್ತಿಯೊಂದಿಗೆ ನಮ್ಮ ಕಾರ್ಖಾನೆಯು ಮತ್ತಷ್ಟು ಬೆಳೆಯುತ್ತದೆ. ರೈತ ಸಮುದಾಯಕ್ಕೆ ನಮ್ಮ ಕಾರ್ಖಾನೆ ಆಡಳಿತ ಮಂಡಳಿಯು ಸದಾ ಆಭಾರಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾಗಲು ಕಾರಣೀಕರ್ತರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಾರ್ಖಾನೆಯಿಂದ ಹೃದಯಸ್ಪರ್ಶಿಯಾಗಿ ಸತ್ಕರಿಸಲಾಯಿತು.

ಪ್ರಭಾಶುಗರ್ಸ ಆಡಳಿತ ಮಂಡಳಿಗೆ ನೂತನ ಸದಸ್ಯರು:

ಉತ್ಪಾದಕರಲ್ಲದ ಡ ವರ್ಗದಿಂದ ಗೋಕಾಕದ ಅಶೋಕ ರಾಮನಗೌಡ ಪಾಟೀಲ, ಅ ವರ್ಗ ಸಾಮಾನ್ಯ ಕ್ಷೇತ್ರದಿಂದ ನಾಗನೂರಿನ ಕೆಂಚನಗೌಡ ಶಿವನಗೌಡ ಪಾಟೀಲ, ವೆಂಕಟಾಪೂರದ ಗಿರೀಶ ವೆಂಕಪ್ಪ ಹಳ್ಳೂರ, ಗುಜನಟ್ಟಿಯ ಜಗದೀಶ ಕೃಷ್ಣಪ್ಪ ಬಂಡ್ರೊಳ್ಳಿ, ಕಲ್ಲೋಳಿಯ ಬಸನಗೌಡ ಶಿವನಗೌಡ ಪಾಟೀಲ, ಅ ವರ್ಗ ಪರಿಶಿಷ್ಟ ಪಂಗಡದಿಂದ ಉದಗಟ್ಟಿಯ ಭೂತಪ್ಪ ತಮ್ಮಣ್ಣ ಗೋಡೇರ, ಅ ವರ್ಗ ಸಾಮಾನ್ಯ ಕ್ಷೇತ್ರದಿಂದ ರಂಗಾಪೂರದ ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ, ಅ ವರ್ಗ ಪರಿಶಿಷ್ಟ ಜಾತಿಯಿಂದ ಕೌಜಲಗಿಯ ಮಹಾದೇವಪ್ಪ ರಾಜಪ್ಪ ಭೋವಿ, ಅ ವರ್ಗ ಸಾಮಾನ್ಯ ಕ್ಷೇತ್ರದಿಂದ ಬಡಿಗವಾಡ ಮಾಳಪ್ಪ ಉದ್ದಪ್ಪ ಜಾಗನೂರ, ಅ  ವರ್ಗ ಮಹಿಳಾ ಕ್ಷೇತ್ರದಿಂದ ವಡೇರಹಟ್ಟಿಯ ಯಲ್ಲವ್ವ ಭೀಮಪ್ಪ ಸಾರಾಪೂರ, ಅ ವರ್ಗ ಸಮಾನ್ಯ ಕ್ಷೇತ್ರದಿಂದ ಕಳ್ಳಿಗುದ್ದಿಯ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ, ಅ ವರ್ಗ ಮಹಿಳಾ ಕ್ಷೇತ್ರದಿಂದ ಶಿಂಧಿಕುರಬೇಟದ ಲಕ್ಕವ್ವಾ ಲಕ್ಷ್ಮಣ ಬೆಳಗಲಿ, ಸಹಕಾರ ಸಂಘಗಳ ಬ ವರ್ಗದಿಂದ ದಂಡಾಪೂರದ ಲಕ್ಷ್ಮಣ ಯಲ್ಲಪ್ಪ ಗಣಪ್ಪಗೋಳ, ಅ ವರ್ಗ ಹಿಂದುಳಿದ ಅ ವರ್ಗದಿಂದ ಜೋಕಾನಟ್ಟಿ ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ ಹಾಗೂ ಗಣೇಶವಾಡಿಯ ಶಿವಲಿಂಗಪ್ಪ ವೆಂಕಪ್ಪ ಪೂಜೇರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- Advertisement -

ಇದೇ ದಿನಾಂಕ 20 ರಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿತ್ತು. ಒಟ್ಟು 15 ಸ್ಥಾನಗಳಿಗೆ 38 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು 23 ಅಭ್ಯರ್ಥಿಗಳು ತಮ್ಮ ವಾಪಸು ಪಡೆದಿದ್ದರಿಂದ ಎಲ್ಲ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಸಲಾಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ ಅವರು ಪ್ರಕಟಿಸಿದರು. 

ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ರಾವುತನವರ, ಸಹಾಯಕ ಚುನಾವಣಾಧಿಕಾರಿ ಈರಣ್ಣ ಜಂಬಗಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group