ಮೂಡಲಗಿ – ಸರಕಾರಿ ಪ್ರೌಢಶಾಲೆ ಜೋಕಾನಟ್ಟಿ ಶಾಲೆಯ ಹಳೆಯ ವಿದ್ಯಾರ್ಥಿನಿ ಕುಮಾರಿ ರೂಪಾ ನಿಂಗಪ್ಪ ನಾವಿ ಇವರು ಪೊಲೀಸ್ ಪೇದೆಯಾಗಿ ಆಯ್ಕೆಯಾದ ಪ್ರಯುಕ್ತ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೂಪಾ ನಿಂಗಪ್ಪ ನಾವಿ ಅವರು ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಈಗಿನಿಂದಲೇ ಕಾರ್ಯ ಪ್ರವರ್ತ ರಾಗಲು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಸಿ. ಬಿ. ಪೂಜೇರಿ ವಿದ್ಯಾರ್ಥಿಗಳು ತಂದೆ ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ L B ಹೆಳವರ,ಎಂ ಜಿ ಗೊರಗುದ್ದಿ,,H N ಜೋಕಾನಟ್ಟಿ, ಸಾಗರ ಕಳ್ಳಿಗುದ್ದಿ ಪ್ರತಿಭಾ ಕುರಿ,G R ಮುಗಳಕೋಡ, V B ಸಿಂಧೋಳಿ ಉಪಸ್ಥಿತರಿದ್ದರು. H D ಪOಚಾಳ ನಿರೂಪಿಸಿದರು.ರವಿರಾಜೇಶ್ ಆನಂದ ನಿರೂಪಿಸಿದರು.N S ಕಂಬಳಿ ವಂದಿಸಿದರು.