- Advertisement -
ಸವದತ್ತಿ: ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಶಾಂತಿನಗರದ ಮಕ್ಕಳಿಗೆ ಸಮೀಪದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕುರಿತು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ಠಾಣಾಧಿಕಾರಿಗಳಾದ ಶ್ರೀ ಎಂ ಕೆ ಕಲಾದಗಿ ಅವರು ಮಕ್ಕಳಿಗೆ ಅಗ್ನಿಶಾಮಕ ಸೇವೆಗಳ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿಗಳು ಪ್ರಾತ್ಯಕ್ಷಿಕೆಯ ಅಣಕು ಪ್ರದರ್ಶನ ಮಾಡಿದರು. ಶಾಲಾ ಪ್ರಧಾನ ಗುರುಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಜರಿದ್ದರು.