spot_img
spot_img

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

Must Read

spot_img
- Advertisement -

ಮೂಡಲಗಿ – ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು

ಮೂಡಲಗಿಯಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಕೈಗೆ ಅಧಿಕಾರ ಸಿಕ್ಕರೆ ಅಭೂತಪೂರ್ವ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದು ಸ್ವಾಭಿಮಾನದ ಚುನಾವಣೆ. ನಮ್ಮ ಕಷ್ಟ ಸುಖಗಳಿಗೆ ನಮ್ಮ ಮನೆ ಮಗನೇ ಆಗಬೇಕು. ಬಿಜೆಪಿಯ ಜಗದೀಶ ಶೆಟ್ಟರ ಅವರು ಹೊರಗಿನವರು ಅವರೆಂದೂ ನಮ್ಮವರಾಗಲಿಕ್ಕೆ ಸಾಧ್ಯವಿಲ್ಲ ಎಂದರು.

ನಮ್ಮ ಜಿಲ್ಲೆಯಲ್ಲಿ ಕಿತ್ತೂರ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ ಬೆಳಗಾವಿಯವರು ಇಂಥ ನಾಡಿಗೆ ನಾವು ಬೇರೆಯವರನ್ನು ಯಾಕೆ ತರಬೇಕು ಎಂದು ಹೆಬ್ಬಾಳಕರ ಪ್ರಶ್ನಿಸಿದರು.

- Advertisement -

ಪ್ರಾಸ್ತಾವಿಕವಾಗಿ ಮಾತನಾಡಿದ ಅರವಿಂದ ದಳವಾಯಿ, ಈ ಚುನಾವಣೆಯು ಶೆಟ್ಟರ ಹಾಗೂ ಮೃಣಾಲ್ ನಡುವೆ ನಡೆಯುತ್ತಿಲ್ಲ, ಪಂಚಮಸಾಲಿಗಳು ಬಣಜಿಗರ ನಡುವಿನ ಚುನಾವಣೆ ಅಲ್ಲ, ಮೋದಿ ಮತ್ತು ರಾಹುಲ್ ನಡುವಿನ ಚುನಾವಣೆ ಅಲ್ಲ, ಸಿದ್ಧರಾಮಯ್ಯ ಸರ್ಕಾರ ರಕ್ಷಣೆಗೆ ನಡೆಯುತ್ತಿರುವ ಚುನಾವಣೆಯೂ ಅಲ್ಲ ಆದರೆ ಈ ಚುನಾವಣೆಯು ಸಂವಿಧಾನಪರ ಹಾಗೂ ಸಂವಿಧಾನ ವಿರೋಧಿ ಶಕ್ತಿಗಳ ನಡುವೆ ನಡೆಯತ್ತಿದೆ, ಪ್ರಜಾಪ್ರಭುತ್ವ ಪರ ಹಾಗು ವಿರೋಧಿಗಳ ನಡುವೆ, ಸಮಾಜವಿರೋಧಿ ಮತ್ತು ಸಮಾಜಪರರ ನಡುವೆ ನಡೆಯುತ್ತಿರುವ ಚುನಾವಣೆ ಇದು ಎಂದರು.

ಅಥಣಿಯ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕಾಂಗ್ರೆಸ್ ನವರಿಂದ ನಂತರ ಜನಸಂಘ ಹುಟ್ಟಿಕೊಂಡು ಅದೇ ಬಿಜೆಪಿ ಆಗಿದೆ. ನಿಜವಾದ ದೇಶಭಕ್ತರು ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿ, ಮೋದಿಯವರು ಮೊದಲು ಹೇಳಿದಂತೆ ಹದಿನೈದು ಲಕ್ಷ ರೂ. ಬರಲಿಲ್ಲ, ಪೆಟ್ರೋಲ್ ಬೆಲೆ ಕಡಿಮೆಯಾಗಲಿಲ್ಲ, ನದಿ ಜೋಡಣೆ ಆಗಲಿಲ್ಲ, ಚಿನ್ನದ ರಸ್ತೆಗಳು ಆಗಲಿಲ್ಲ ಈ ರೀತಿ ಮೋದಿಯವರು ಸುಳ್ಳು ಹೇಳಿಕೊಂಡೇ ಬಂದಿದ್ದಾರೆ ಆದರೆ ಕಾಂಗ್ರೆಸ್ ನವರು ಐದೂ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸಿದ್ದಾರೆ. ಈ ಸಲ ಮೃಣಾಲ್ ಆಯ್ಕೆಯಾದರೆ ಬೆಳಗಾವಿ ಜಿಲ್ಲೆಯನ್ನು ಎಲ್ಲಾ ರೀತಿಯಿಂದ ಅಭಿವೃದ್ಧಿ ಪಡಿಸಲಾಗುವುದು. ಒಂದು ಅವಕಾಶ ಮೃಣಾಲ್ ಗೆ ಕೊಟ್ಟರೆ ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾನೆ ಎಂದರು.
ಸಮಾರಂಭಕಿಂತ ಮುಂಚೆ ನಡೆದ ರೋಡ್ ಶೋದಲ್ಲಿ ಲಕ್ಷ್ಮಿ ಹೆಬ್ಬಾಳಕರ ಜೊತೆ ಲಕ್ಷ್ಮಣ ಸವದಿ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡರು.

ವೇದಿಕೆಯ ಮೇಲೆ ಲಕ್ಕಣ್ಣ ಸವಸುದ್ದಿ, ಬಿ ಬಿ ಹಂದಿಗುಂದ, ಅರವಿಂದ ದಳವಾಯಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ ದಳವಾಯಿ, ಮಲಿಕಸಾಬ ಕಳ್ಳಿಮನಿ, ವಿ ಪಿ ನಾಯಕ, ಎಸ್ ಆರ್ ಸೋನವಾಲಕರ, ಮೃಣಾಲ್ ಹೆಬ್ಬಾಳಕರ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ ಅರಳಿ, ಸುರೇಶ ಮಗದುಮ್, ರಾವಸಾಬ ಬೆಳಕೂಡ, ಬಸವರಾಜ ಬೆಳಕೂಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ರಮೇಶ ಉಟಗಿ ಸ್ವಾಗತಿಸಿದರು.

- Advertisement -

 

ವರದಿ : ಉಮೇಶ ಬೆಳಕೂಡ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group