spot_img
spot_img

ಸಂಭ್ರಮದ ರುದ್ರಮುನೀಶ್ವರ ಜಾತ್ರಾ ಮಹೋತ್ಸವ

Must Read

- Advertisement -

ಹಡಗಲಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ಹಡಗಲಿ ಗ್ರಾಮದ ಲಿಂ. ರುದ್ರಮನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಸಕಲ ವಾದ್ಯಮೇಳದೊಂದಿಗೆ ವಿಜೃಂಭಣೆಯಿ೦ದ ನಡೆಯಿತು.

ಗಂಗೂರ ಭದ್ರಶೆಟ್ಟಿರವರ ಮನೆತನದ ಹಾಗೂ ದೈವದವರಿಂದ ಕಳಸ, ಹಿರೇಮಳಗಾಂವಿ ದೈವದವರಿಂದ ತೇರಿನ ಹಗ್ಗ,ಕಿರಸೂರ ದೈವದವರಿಂದ ನಂದಿಕೋಲು, ಹೂವನೂರ ಗ್ರಾಮದ ದೈವದವರಿಂದ ತಳಿರು ತೋರಣ ಬಾಳೆಕಂಬ ಸಾಯಂಕಾಲ ಗ್ರಾಮಕ್ಕೆ ತಲುಪಿದ ನಂತರ ಕಳಸವನ್ನು ರಥಕ್ಕೆ ಏರಿಸಲಾಯಿತು. ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಬಾವದಲ್ಲಿ ಪರವಶರಾದರು.

ಬಣ್ಣ ಬಣ್ಣದ ಧ್ವಜ, ಬಾಳೆಕಂಬಗಳು, ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು.

- Advertisement -

ರಥೋತ್ಸವವನ್ನು ಹಡಗಲಿ ನಿಡಗುಂದಿಯ ರುದ್ರಮುನಿಗಳ ಶ್ರೀಗಳ ನೇತೃತ್ವದಲ್ಲಿ ಮತ್ತು ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಗ್ರಾಮದ ಗಣ್ಯರು ಸಾಮೂಹಿಕವಾಗಿ ಚಾಲನೆ ನೀಡಿದರು.

ರಥೋತ್ಸವದಲ್ಲಿ ಹಡಗಲಿ ಗ್ರಾಮಸ್ಥರು ಸೇರಿದಂತೆ ತಿಮ್ಮಾಪೂರ, ಚಿತ್ತರಗಿ, ಕಿರಸೂರ, ಬೆಳಗಲ್ಲ, ಇದ್ದಲಗಿ,ಹೂವನೂರ, ಬೇವುರ, ಹಿರೇಮಳಗಾಂವಿ, ಗಂಗೂರ, ಹುನಗುಂದ, ಇಲಕಲ್ಲ, ಅಮೀನಗಡ, ಮೆದಾನಪೂರ, ಕೂಡಲಸಂಗಮ ಗ್ರಾಮಸ್ಥರು  ಅಪಾರ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಜನರು ನೆರೆದದ್ದು ವಿಶೇಷವಾಗಿತ್ತು.

- Advertisement -
- Advertisement -

Latest News

“ಅಪ್ನಾದೇಶ” ಬೆಳೆದು ಬಂದ ಹಿನ್ನೆಲೆ

೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ...
- Advertisement -

More Articles Like This

- Advertisement -
close
error: Content is protected !!
Join WhatsApp Group