spot_img
spot_img

ತಳವಾರರಿಗೆ ಮೀಸಲಾತಿ ಒದಗಿಸಲು ಕಾಂಗ್ರೆಸ್ ಶಿಫಾರಸು ಮಾಡಿತ್ತು – ಸಿದ್ಧರಾಮಯ್ಯ

Must Read

spot_img
- Advertisement -

ಸಿಂದಗಿ: ತಳವಾರ, ಪರಿವಾರ ಸಮಾಜಗಳಿಗೆ ಎಸ್‍ಟಿ ಮಿಸಲಾತಿ ಕಲ್ಪಿಸುವಂತೆ ಜೆ.ಎಚ್.ಪಟೇಲ ಅಧಿಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಅಲ್ಲದೆ 2013ರಲ್ಲಿ ನಾನು ಮುಖ್ಯಮಂತ್ರಿ ಇದ್ದಾಗಲೂ ಕೂಡ ಕುಲಶಾಸ್ತ್ರ ಅಧ್ಯಯನ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇನೆ ಆದಾಗ್ಯೂ ಇನ್ನೂ ಕೇಂದ್ರದಲ್ಲಿಯೇ ಇದೆ ಬಿಜೆಪಿಯವರು ಸುಳ್ಳು ಹೇಳಿ ಮತ ಕೇಳುತ್ತಿದ್ದಾರೆ ಅದು ಮಿಸಲಾತಿ ಪರ ಇಲ್ಲ ಅದಕ್ಕೆ ಹಿಂದುಳಿದವರಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿರುವ ಸರಕಾರಿ ಶಾಲಾ ಮೈದಾನದಲ್ಲಿ ತಳವಾರ ಸಮಾಜದ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿ, ಎಲ್ಲ ವರ್ಗಕ್ಕೆ ಮಂತ್ರಿ ಸ್ಥಾನ, ಶಾಸಕ ಸ್ಥಾನ ನೀಡಿದ್ದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಬಿಜೆಪಿ ಕೊಡುಗೆ ಏನು ನೀವು ಕನಸಿನಲ್ಲಿ ಕೂಡ ಬಿಜೆಪಿಯನ್ನು ನೆನೆಯಬಾರದು. ಕೇಂದ್ರದಲ್ಲಿ 7 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿ ಎಸ್ ಟಿ ಗೆಜೆಟ್ ಮಾಡಲು ಇಷ್ಟು ದಿನಗಳು ಬೇಕಾ, ಗೋವಿಂದ ಕಾರಜೋಳ ಅವರು ಸುಳ್ಳು ಹೇಳುತ್ತಿದ್ದಾರೆ. ಇದರ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ ಆಗದಿದ್ದರೆ 2023ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಬಂದು ಒಂದು ತಿಂಗಳಲ್ಲಿ ಜಾರಿಗೆ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.

ಶತಶತಮಾನದಿಂದ ಗುಲಾಮಗಿರಿ ಬದುಕು ಸಾಗಿಸುತ್ತೇವೆ ಅದರಿಂದ ಹೊರಗೆ ಬರಬೇಕಾದರೆ ಸ್ವಾಭಿಮಾನಿಗಳಾದರೆ ಮಾತ್ರ ಸಾಧ್ಯ. ಈ ದೇಶದ ಮನುವಾದಿಗಳು ಚಾರ್ತುವರ್ಣ ಪದ್ದತಿಯನ್ನು ಜಾರಿಗೆ ತಂದು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಹೀಗೆ ನಾಲ್ಕು ವರ್ಣಗಳಾಗಿ ವಿಂಗಣೆ ಮಾಡಿ ಕಾಯಕ ಮಾಡುವವರು ಶೂದ್ರರು, ಇದರಲ್ಲಿಯೇ ಅಸ್ಪೃಶ್ಯರಿಗೆ ಅಕ್ಷರ ಸಂಸ್ಕೃತಿ ಯಿಂದ ದೂರವಿಟ್ಟು ಶೂದ್ರರಿಗೆ ಸಂಪಾದನೆ ಮಾಡಲಿಕ್ಕೆ ಇತ್ತು, ಅದನ್ನು ಬಳಕೆ ಮಾಡಲು ಅವಕಾಶವಿರಲಿಲ್ಲ. ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ ಮೇಲೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬುದ್ಧ, ಬಸವ ಅಂಬೇಡ್ಕರ ಅವರು ಹೋರಾಟ ನಡೆಸಿ ಅಸಮಾನತೆಯನ್ನು ಹೋಗಲಾಡಿಸಿದ್ದಾರೆ. ಅದರಲ್ಲಿ ಅಂಬಿಗರ ಚೌಡಯ್ಯನವರು ಸಮಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಿದವರಲ್ಲಿ ಒಬ್ಬರು. ಬಸವಣ್ಣನವರು ಮೇಲ್ಜಾತಿಯಲ್ಲಿ ಹುಟ್ಟಿದರೂ ಸಹಿತ ಕೆಳ ಸಮಾಜದವರನ್ನು ಮೆಲೆತ್ತುವಂಥ ಕಾರ್ಯಕ್ಕಾಗಿ ಅನುಭವ ಮಂಟಪ ನಿರ್ಮಾಣ ಮಾಡಿ ಎಲ್ಲ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ನಡೆಸಿದ್ದಾರೆ ಆದ ಕಾರಣ ಆ ತತ್ವಸಿದ್ದಾಂತದ ಮೇಲೆ ಅಧಿಕಾರ ನಡೆಸುತ್ತಿದ್ದೇವೆ ನಮಗೆ ಸುಳ್ಳು ಹೇಳಲು ಬರುವುದಿಲ್ಲ ಬಿಜೆಪಿಗೆ ಸುಳ್ಳು ಹೇಳುವುದೆಂದರೆ ಬಲು ಇಷ್ಟ ಎಂದು ಚಾಟಿ ಬೀಸಿದರು.

- Advertisement -

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ತಳವಾರ ಸಮಾಜಕ್ಕೆ ಎಸ್‍ಟಿಗೆ ಸೇರ್ಪಡೆ ಮಾಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗಿದೆ ಕೇಂದ್ರದಿಂದ ತಳವಾರ ಸಮಾಜಕ್ಕೆ ಎಸ್‍ಟಿ ಸರ್ಟೀಫಿಕೇಟ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದ್ದರು ಕೂಡಾ ಈಗಿನ ಬಿಜೆಪಿ ಸರಕಾರ ಕೆಲ ರಾಜಕಾರಣಿಗಳಿಗೆ ಮಣಿದು ರಾಜ್ಯದಲ್ಲಿ ತಳವಾರ ಸಮಾಜಕ್ಕೆ ಸರ್ಟಿಫಿಕೇಟ ನೀಡಲು ಹಿಂದೇಟು ಹಾಕುತ್ತಿದ್ದಾರೆ ಆದರೆ ಗೋವಿಂದ ಕಾರಜೋಳ ಅವರು ಸಮಾಜಕಲ್ಯಾಣ ಸಚಿವರಿದ್ದ ಸಂದರ್ಭದಲ್ಲಿ ಕೇಳಿದರೆ ನ್ಯಾಯಾಲಯಕ್ಕೆ ಹೋಗಿ ಸರ್ಟಿಫಿಕೇಟ ಪಡೆದುಕೊಳ್ಳಿ ಎಂದಿದ್ದಾರೆ ಈಗೆಲ್ಲಿಂದ ಸರ್ಟಿಫಿಕೇಟ್ ಕೊಡುತ್ತಾರೆ ಎನ್ನುವುದು ತಿಳಿಯುತ್ತಿಲ್ಲ. ಕೆಲವರು ಕೋರ್ಟ ಮೂಲಕ ಎಸ್‍ಟಿ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದಾರೆ ಈ ಉಪ ಚುನಾವಣೆಯಲ್ಲಿ ನನ್ನ ರಾಜಕೀಯ ಜೀವನಕ್ಕೆ ಕುತ್ತು ತರಲು ಜಾತಿ ಜಾತಿಗಳಲ್ಲಿ ಕಂದಕ ಸೃಷ್ಟಿಸುವ ನೀಚ ಕೆಲಸಕ್ಕೆ ಕೈಹಾಕಿದ್ದಾರೆ ಈ ರಾಜಕಾರಣದಲ್ಲಿ ನನ್ನ ಹಾಗೂ ಅಶೋಕ ಮನಗೂಳಿಯ ಭವಿಷ್ಯ ಅಡಗಿದ್ದು ಇದನ್ನು ನಮ್ಮ ಸಮಾಜ ನನಗೆ ದ್ರೋಹ ಬಗೆಯುವುದಿಲ್ಲ ಎನ್ನುವ ಭರವಸೆ ನನಗಿದೆ ಎಂದರು.

ಈ ಸಂದರ್ಭದಲ್ಲಿ ಬಾಬು ನಾಟೀಕಾರ ಸಮಾಜ ಪರವಾಗಿ ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

- Advertisement -

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ದ್ರುವ ನಾರಾಯಣ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಎಚ್.ಆಂಜನೇಯ, ಶಾಸಕರಾದ ಭೀಮಾ ನಾಯಕ, ರಾಘವೇಂದ್ರ ಇಟ್ನಾಳ, ಮುಖಂಡ ತಿಪ್ಪಣ್ಣ ಕಮಕನೂರ, ಎಂ.ಆರ್.ಟಿ, ಮಾಲಾ ನಾರಾಯಣರಾವ, ಪ್ರಭು ವಾಲೀಕಾರ, ಹಣಮಂತ ಸುಣಗಾರ, ಸಂತೋಷ ಹರನಾಳ, ಪ್ರಕಾಶ ತಳವಾರ ಸಾಹೇಬಗೌಡ ಬಿರಾದಾರ, ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group