spot_img
spot_img

ನಾಯಕರಿಲ್ಲದ, ದಿಕ್ಕಿಲ್ಲದ ಪಕ್ಷ ಕಾಂಗ್ರೆಸ್ ಪಕ್ಷ – ಜಗದೀಶ ಶೆಟ್ಟರ

Must Read

- Advertisement -

ಬೆಳಗಾವಿಯನ್ನು ಆದರ್ಶ ಕ್ಷೇತ್ರವನ್ನಾಗಿ ಮಾಡುತ್ತೇನೆ- ಶೆಟ್ಟರ ಭರವಸೆ

ಮೂಡಲಗಿ – ದೇಶದ ಭವಿಷ್ಯವೇ ನರೇಂದ್ರ ಮೋದಿಯವರ ಮೇಲೆ ನಿಂತಿದೆ ಅಂಥ ನಾಯಕ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ.ಇಂದು ಚುನಾವಣೆ ರಾಷ್ಟ್ರೀಯತೆಯ ಮೇಲೆ ನಡೆಯುತ್ತಿದೆ. ನಮ್ಮ ನಾಯಕ ಮೋದಿ ಎಂದು ಹೇಳುತ್ತೇವೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾರೂ ನಾಯಕರಿಲ್ಲ. ದಿಕ್ಕಿಲ್ಲದ ಪಾರ್ಟಿ ಎಂದರೆ ಅದು ಕಾಂಗ್ರೆಸ್ ಪಾರ್ಟಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು

ಮೂಡಲಗಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

- Advertisement -

ರಾಜ್ಯದಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ ನವರು ಮಹಿಳೆಯರಿಗೆ ಮೋಸ ಮಾಡುತ್ತಿದ್ದಾರೆ. ತಾಯಂದಿರು ತಿಳಿದುಕೊಳ್ಳಬೇಕು ಈ ಚುನಾವಣೆ ಮುಗಿದಮೇಲೆ ಗ್ಯಾರಂಟಿಗಳು ನಿಲ್ಲುತ್ತವೆ. ಇನ್ನು ಕೇಂದ್ರದಲ್ಲಿ ಇವರು ಅಧಿಕಾರಕ್ಕೇ ಬರೋದಿಲ್ಲ ಅಂಥವರು ಗ್ಯಾರಂಟಿಗಳನ್ನು ಕೊಡಲು ಹೇಗೆ ಸಾಧ್ಯ ಎಂದು ಕೇಳಿದ ಶೆಟ್ಟರ ಅವರು, ನಮ್ಮ ದೇಶದ ನಿಜವಾದ ಗ್ಯಾರಂಟಿ ಅಂದರೆ ನಮ್ಮ ನರೇಂದ್ರ ಮೋದಿಯವರು ಎಂದರು.

ಕಾಂಗ್ರೆಸ್ ಸರ್ಕಾರವಿದ್ದಾಗ  ೧೪ ನೇ ಸ್ಥಾನದಲ್ಲಿದ್ಧ ಭಾರತ ಕೇವಲ ೧೦ ವರ್ಷಗಳಲ್ಲಿ ಐದನೇ ಸ್ಥಾನಕ್ಕೆ ಬಂದಿದ್ದೇವೆ ಇನ್ನು ಹತ್ತು ವರ್ಷಗಳಲ್ಲಿ ನಾವು ನಂಬರ್ ಒನ್ ಸ್ಥಾನಕ್ಕೆ ಬರುತ್ತೇವೆ. ಪಾಕಿಸ್ತಾನದ ಯುವಕರು, ಪ್ರತಿಪಕ್ಷದ ನಾಯಕರೂ ಕೂಡ ನಮಗೆ ಮೋದಿಯವರಂಥ ನಾಯಕರು ಬೇಕು ಎನ್ನುತ್ತಿದ್ದಾರೆ ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಮೋದಿಯವರನ್ನು ಕಳೆದುಕೊಳ್ಳಬಾರದು. ಮೋದಿಯವರು ಹಲವಾರು ಯೋಜನೆಗಳನ್ನು ಮಾಡಿದ್ದಾರೆ ಅವು ಎಲ್ಲಾ ವರ್ಗದವರಿಗೂ ಅನ್ವಯಿಸುತ್ತವೆ ಅವರು ಎಂದಿಗೂ ಇವರು ಹಿಂದೂಗಳು, ಇವರು ಮುಸ್ಲಿಮರು ಎಂಬ ಭೇದ ಭಾವ ಮಾಡಿಲ್ಲ. ಕಾಂಗ್ರೆಸ್ ಮಾತ್ರ ಒಂದೇ ವರ್ಗದ ತುಷ್ಟೀಕರಣ ಮಾಡುತ್ತ ವಿಭಾಗ ಮಾಡಿ ಆಳುತ್ತಿದೆ ಇದನ್ನು ಮುಸ್ಲಿಮರೆಲ್ಲ ವಿರೋಧಿಸಬೇಕು ಎಂದು ಶೆಟ್ಟರ ಹೇಳಿದರು.

ಈ ಮುಂಚೆ ಸುರೇಶ ಅಂಗಡಿ ಹಾಗೂ ಮಂಗಳಾ ಅಂಗಡಿಯವರನ್ನು ತಾವು ಬೆಳಗಾವಿ ಕ್ಷೇತ್ರಕ್ಕೆ ಪ್ರೀತಿಯಿಂದ ಆಯ್ಕೆ ಮಾಡಿ ಕಳಿಸಿದ್ದೀರಿ ಈ ಸಲ ಕೂಡ ನಾನು ಅತ್ಯಂತ ವೇಗದ ಅಭಿವೃದ್ಧಿ ಕೆಲಸ ಮಾಡಬೇಕೆಂದರೆ ನನಗೆ ಆಶೀರ್ವಾದ ಮಾಡಬೇಕು. ನಾನು ಹೊರಗಿನವನು ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ವಯನಾಡಿಗೆ ಬರುತ್ತಾರೆ, ಸಿದ್ಧರಾಮಯ್ಯ ಬಾದಾಮಿಗೆ ಬರುತ್ತಾರೆ, ಸೋನಿಯಾ ಬಳ್ಳಾರಿಗೆ ಬರಬಹುದು, ನಾನು ಬೆಳಗಾವಿಗೆ ಬರಬಾರದಾ ಇದಕ್ಕೆ ಕಾಂಗ್ರೆಸ್ ನವರು ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು

- Advertisement -

ಬೆಳಗಾವಿಯನ್ನು ಆದರ್ಶ ಲೋಕಸಭಾ ಕ್ಷೇತ್ರವನ್ನಾಗಿ ಮಾಡುತ್ತೇನೆ, ಯಾವುದೇ ಅಭಿವೃದ್ಧಿ ಕೆಲಸಗಳೇ ಇರಲಿ ಐದು ನಿಮಿಷದಲ್ಲಿ ಪರವಾನಿಗೆ ಸಿಗುವಂತೆ ಮಾಡುತ್ತೇನೆ. ಬೆಳಗಾವಿಯನ್ನು ಬೆಂಗಳೂರಿನ ನಂತರ ಎರಡನೇ ರಾಜಧಾನಿಯನ್ನಾಗಿ ಮಾಡುತ್ತೇನೆ ಎಂದು ಅಭ್ಯರ್ಥಿ ಶೆಟ್ಟರ ಭರವಸೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಾತನಾಡಿ, ನಮ್ಮ ದೇಶ ಗಟ್ಟಿಯಾಗಿದ್ದರೆ ನಾವೆಲ್ಲ ಗಟ್ಟಿಯಾಗಿರುತ್ತೇವೆ ಇದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಅವರಂಥ ನಾಯಕರು ಇನ್ನೊಬ್ಬರಿಲ್ಲ ಆದ್ದರಿಂದ ಮೋದಿಯವರ ನಾಯಕತ್ವಕ್ಕಾಗಿ ಜಗದೀಶ ಶೆಟ್ಟರ ಅವರಿಗೆ ಮತ ನೀಡಬೇಕು. ಕಾಂಗ್ರೆಸ್ ಸರ್ಕಾರ ಬಂದು ೧೧ ತಿಂಗಳಾದರೂ ರಸ್ತೆ, ಕುಡಿಯುವ ನೀರು, ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ೨೦೧೯ ರ ಮಹಾಪೂರದಲ್ಲಿ ಬಿಜೆಪಿಯವರು ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ ಆದರೆ ನಾವು ೯೦೦೦ ಮನೆಗಳಿಗೆ ಐದು ಲಕ್ಷ ರೂಪಾಯಿ ಕೊಟ್ಟಿದ್ದೇವೆ ಎಂದರು.

ಕರ್ನಾಟಕ ಹೇಗೆ ಸರ್ವಜನಾಂಗದ ಶಾಂತಿಯ ತೋಟವಾಗಿದೆಯೋ ಹಾಗೆಯೇ ಅರಭಾವಿ ಕ್ಷೇತ್ರ ಕೂಡ ಎಲ್ಲಾ ಸಮುದಾಯದವರ ಶಾಂತಿಯ ತೋಟವಾಗಿದೆ ಎಂದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕ್ಷೇತ್ರದಲ್ಲಿ ಎಲ್ಲ ಸಮಾಜದವರನ್ನು ಸ್ವಂತ ಸಹೋದರರಂತೆ ಕಂಡು ಮುನ್ನಡೆಸಿಕೊಂಡು ಹೋಗುತ್ತಾರೆ. ಸೂರ್ಯ ಚಂದ್ರರೆಷ್ಟು ಸತ್ಯವೋ ವಿಶ್ವನಾಯಕರಾಗಿ ಹೊರಹೊಮ್ಮಿರುವ ಮೋದಿಯವರು ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದರು

ಭಾರತವು ಇಡೀ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಬರಬೇಕೆಂದು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲ ಕೊಡಬೇಕು. ಮೋದಿಯವರನ್ನು ಬೆಂಬಲಿಸಲು ಶೆಟ್ಟರ ಅವರಿಗೆ ಮತ ನೀಡಬೇಕು ಎಂದು ಜಾರಕಿಹೊಳಿ ಹೇಳಿದರು.

ಕಾರ್ಯಕ್ರಮದ ಮುಂಚೆ ನಗರದ ಕಲ್ಮೇಶ್ವರ ವೃತ್ತದಿಂದ ಬಸವ ಮಂಟಪದವರೆಗೆ ಭವ್ಯ ರೋಡ್ ಶೋ ನಡೆಯಿತು. ಸಹಸ್ರಾರು ಜನರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ವೇದಿಕೆಯ ಮೇಲೆ ಇಂದಿರಾ ಅಂತರಗಟ್ಟಿ, ಸತೀಶ ವಂಟಗೋಡಿ, ಸರ್ವೋತ್ತಮ ಜಾರಕಿಹೊಳಿ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಪ್ರಕಾಶ ಕಾಡಶೆಟ್ಟಿ ಸೇರಿದಂತೆ ಅರಭಾವಿ ಕ್ಷೇತ್ರದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group