ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ ೪ ರವರೆಗೆ ಬಿಸಿಗಾಳಿ ಅಲೆಯೊಂದಿಗೆ ಬೆಚ್ಚಗಿನ ರಾತ್ರಿ ಹೆಚ್ಚಾಗುವ ಸಂಭವವಿರುವುದರಿಂದ ಜನತೆ ಹುಷಾರಾಗಿ ಇರಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆರೇಂಜ್ ಅಲರ್ಟ್ ಘೋಷಣೆ ಮಾಡಿದೆ.
ಪ್ರಕಟಣೆಯೊಂದರಲ್ಲಿ ಇಲಾಖೆಯು ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶದಲ್ಲಿ ದಿ. ೧ ರಿಂದ ೪ ರವರೆಗೆ ಹಗಲು ಬಿಸಿ ಗಾಳಿ ಹಾಗೂ ರಾತ್ರಿ ತೇವಭರಿತ ವಾತಾವರಣ ಇರುವುದಾಗಿ ಎಚ್ಚರಿಸಿದೆ.
ಬಿಸಿಲು ಹೆಚ್ಚಾಗಿರುವುದರಿಂದ ಹೆಚ್ಚು ನೀರು ಕುಡಿಯಬೇಕು, ಪ್ರಯಾಣದಲ್ಲಿ ಜೊತೆಗೆ ನೀರಿನ ಬಾಟಲ್ ಒಯ್ಯಬೇಕು, ನಿಂಬೆ ಶರಬತ್ತು, ಮಜ್ಜಿಗೆ, ಲಸ್ಸಿ ಮುಂತಾದವುಗಳ ಸೇವನೆ, ಕಲ್ಲಂಗಡಿ, ಸೌತೆಕಾಯಿ ಸೇವನೆ ಮಾಡಬೇಕು. ಒಳಾಂಗಣದಲ್ಲಿದ್ದಾಗ ತಣ್ಣೀರಿನ ಸ್ನಾನ ಮಾಡಬೇಕು ಹಾಗೂ ಛತ್ರಿ, ಟೋಪಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಟೀ ಕಾಫಿ, ಮದ್ಯ ಸೇವಿಸಬಾರದು, ಕಾರಿನಲ್ಲಿ ಮಕ್ಕಳನ್ನು ಬಿಡಬಾರದು ಹಾಗೂ ಮಧ್ಯಾಹ್ನ ೧೨ ರಿಂದ ೩ ರವರೆಗೆ ಹೊರಗಡೆ ಹೋಗಬಾರದು ಎಂದು ಇಲಾಖೆ ತಿಳಿಸಿದೆ.