ಕಾಂಗ್ರೆಸ್ ಗೆಲುವು ಖಚಿತ – ಮಹದೇವಪ್ಪ

Must Read

ಸಿಂದಗಿ: ಕಾಂಗ್ರೆಸ್ ಪಕ್ಷದ ಗೆಲುವು ಪ್ರಜಾಪ್ರಭುತ್ವದ ಗೆಲುವು, ನೀವು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮತ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ಮುನ್ನುಡಿ ಎಂದು ಮಾಜಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಹೇಳಿದರು.

ತಾಲೂಕಿನ ಮಾಡಬಾಳ ಗ್ರಾಮಸ್ಥರಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಾರ್ಥವಾಗಿ ಮನೆಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡಿ ಮಾತನಾಡಿ,   ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವದು ಖಚಿತ. ಬಡವರಿಗೆ ರೂಪಿಸಿದ ಎಲ್ಲಾ ಭಾಗ್ಯಗಳು ಬರುವದು ನಿಶ್ಚಿತ. ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಉಚಿತ ಎಂದರು.

ಸಭೆಯಲ್ಲಿ ಮಾಜಿ ಸಚಿವ ಸಿ.ಎಸ್ ನಾಡಗೌಡ, ಸಹಕಾರಿ ಧುರೀಣ ಬಿ.ಎಸ್. ಪಾಟೀಲ ಯಾಳಗಿ, ಕೆಪಿಸಿಸಿ ವಕ್ತಾರ ರಾಜು ಕೂಚಬಾಳ, ಚಂದ್ರಕಾಂತ ಸಿಂಗೆ, ಸಿದ್ರಾಮಪ್ಪ ದೊಡಮನಿ, ಶ್ರೀಶೈಲ ಜಾಲವಾದ, ಧರ್ಮಣ್ಣ ಯಂಟಮಾನ, ಅಶೋಕ ಬಿಜಾಪೂರ, ಹಣಮಂತ ದೊಡಮನಿ, ಮಲ್ಲಿಕಾರ್ಜನ ಕಟ್ಟಿ, ನೀಲಕಂಠ ಹೊಸಮನಿ, ಅರ್ಜುನ ಜಾಬಾನೂರ, ಸಾಗರ ಸೋಂಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group